ನಿವೃತ್ತಿಯಾದ ಮುಖ್ಯ ಶಿಕ್ಷಕ ಬಿಸಿಎಸ್ ಕುಮಾರ್ ಅವರಿಗೆ ಪ್ರಗತಿ ಶಾಲೆಯ ವತಿಯಿಂದ ಸನ್ಮಾನ
ಕೆ.ಆರ್.ಪೇಟೆ : ತಾಲೂಕಿನ ಕೊಮೇನಹಳಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿಸಿಎಸ್ ಕುಮಾರ್ ಇಂದು ನಿವೃತ್ತಿ ಹೊಂದಿದ ಪ್ರಯುಕ್ತ ಅವರನ್ನು ಪಟ್ಟಣದ ಪ್ರಗತಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಆವರಣದಲ್ಲಿ ಸನ್ಮಾನ ನೀಡಿ ಗೌರವಿಸಲಾಯಿತು. ನಿವೃತ್ತಿ ಹೊಂದಿದ ಶಿಕ್ಷಕ ಬಿಸಿಎಸ್ ಕುಮಾರ್ ನಾಗಮಂಗಲ ತಾಲೂಕು, ಕೆ ಆರ್ ಪೇಟೆ ತಾಲೂಕಿನ ಮರವನಹಳ್ಳಿ, ಸಿಂದಘಟ್ಟ, ಪಟ್ಟಣದ ಕೆಪಿಎಸ್, ಹಾಗೂ ಕೊಮ್ಮೇನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದಿದ್ದಾರೆ. 35 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದ ಅವರನ್ನು ಗೌರವಿಸಲಾಯಿತು. ನಿವೃತ್ತ ಪ್ರಾಂಶಪಾಲ ಲೇಖಕ ಕೆ .ಕಾಳೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಅವರು ಮಾತನಾಡಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು, ನಿವೃತ್ತರಾದ ಶಿಕ್ಷಕರು ಉತ್ತಮ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಶಿಕ್ಷಕರ ವೃತ್ತಿಯ ಜೊತೆಗೆ ಸಮಾಜಮುಖಿಯಾದ ಹಲವು ಸಮಾಜ ಸೇವಕಾರಿಗಳಲ್ಲಿ ತೊಡಗಿ ಹೆಸರುಗಳಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ತಮ್ಮ ಸಹಾಯ ಮಾರ್ಗದರ್ಶನ ನೀಡುವುದರ ಮೂಲಕ ಪ್ರಸಿದ್ಧರಾಗಿದ್ದಾರೆ. ಅವರು ಶಿಕ್ಷಕರ ಮನಸ್ಸಿನಲ್ಲಿ ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿಯುವಂತ ಕೆಲಸ ಮಾಡಿದ್ದಾರೆ. ಶಿಕ್ಷಕರ ಕೆಲಸ ಉತ್ತಮವಾದದ್ದು ಆದ್ದರಿಂದ ಅದರ ಗೌರವಕ್ಕೆ ಎಲ್ಲರೂ ಪಾತ್ರರಾಗಬೇಕು ಎಂದು ಕೆ ಕಾಳೇಗೌಡ ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಬಿ ಸಿ ಎಸ್ ಕುಮಾರ್ ಶಿಕ್ಷಕ ವೃತ್ತಿಗೆ ಸಿಗುವ ಗೌರವ ಮತ್ತೆ ಇನ್ಯಾವುದೇ ಹುದ್ದೆಗೆ ದೊರೆಯುವುದಿಲ್ಲ. ಶಿಕ್ಷಕರ ಜೀವನ ಅತ್ಯಂತ ಉತ್ತಮವಾದದ್ದು, ಪವಿತ್ರವಾದದ್ದು ಅದಕ್ಕೆ ಯಾವುದೇ ಚುತಿ ಬಾರದ ರೀತಿಯಲ್ಲಿ ನಡೆದುಕೊಂಡಿದ್ದೇನೆ. ಶಿಕ್ಷಕ ವೃತ್ತಿ ನನಗೆ ಅತ್ಯಂತ ಸಂತೃಪ್ತಿ ನೀಡಿದೆ ಎಂದು ಹೇಳಿದರು. ಕೃಷ್ಣರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ ಹಾಗೂ ಪ್ರಗತಿ ಶಾಲೆಯ ಮುಖ್ಯ ಶಿಕ್ಷಕ ಎಚ್ ಆರ್ ಗೋಪಾಲಕೃಷ್ಣ , ಪತ್ರಕರ್ತ ಗೋವಿಂದರಾಜು ನಿವೃತ್ತರಾದ ಬಿಸಿಎಸ್ ಕುಮಾರ್ ರವರನ್ನು ಕುರಿತು ಮಾತನಾಡಿದರು. ಅವರ ಸೇವೆ ಸ್ಮರಣೀಯವಾಗಿದೆ ಎಂದು ಸ್ಮರಿಸಿದರು. ಶಿಕ್ಷಕರಾದ ನಂದಿನಿ, ವನಿತಾ, ಜ್ಯೋತಿ, ಶೋಭಾ , ದಿವ್ಯಕುಮಾರಿ, ಧನಲಕ್ಷ್ಮಿ, ವಾಣಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕಿ ಲಕ್ಷ್ಮಿ ದೇವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಿವೃತ್ತರಾದ ಪಿಸಿಎಸ್ ಕುಮಾರ್ ಅವರಿಗೆ ಇಂದು ಅವರ ಜನ್ಮದಿನ ಹಾಗೂ ಅದುದರಿಂದ ವಿದ್ಯಾರ್ಥಿಗಳು ಜನ್ಮದಿನದ ಶುಭಾಶಯಗಳು ಗೀತೆಯ ಮೂಲಕ ಹೇಳಿ ಶುಭಾಶಯ ಕೋರಿದರು.





