--ಜಾಹೀರಾತು--

ಮಾದಾರ ಮಹಾಸಭಾ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ

On: December 2, 2025 9:51 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಮಾದಾರ ಮಹಾಸಭಾ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ

ಚಾಮರಾಜನಗರ: ಮಾದಾರ ಮಹಾಸಭಾ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಮಾಧಾರ ಮಹಾಸಭಾದ ಜಿಲ್ಲಾ ಉಸ್ತುವಾರಿ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಧರ್ಮಸೇನಾ ಅವರು ಚಾಲನೆ ನೀಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಾದಾರ ಮಹಾಸಭಾ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನಮ್ಮಲ್ಲಿ ಸಂಘಟನೆಯ ಕೊರತೆ ಇದೆ,ಯುವಕರು ಹೆಚ್ಚು ಹೆಚ್ಚು ಸದಸ್ಯತ್ವ ನೊಂದಣಿ ಮಾಡಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು ಅಲ್ಲದೇ ಇದರಿಂದ ಸಮುದಾಯದ ಬೆಳವಣಿಗೆಗೆ ಉತ್ತಮ ಸಹಕಾರಿಯಾಗುವುದರ ಜೊತೆಗೆ ಎಲ್ಲರೂ ಒಕ್ಕೋರಲಾಗಿ ಸಂಘಟಿತರಾಗಬೇಕು. ಸದಸ್ಯತ್ವವನ್ನು ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಮಾತನಾಡಿ, ಮಾದಾರ ಮಹಾಸಭಾ ಗಟ್ಟಿಯಾಗಬೇಕಾದರೆ ನಮ್ಮ ಸಂಘಟನೆ ರಾಜ್ಯದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಂಘಟಿತವಾಗಬೇಕು. ಅಲ್ಲದೆ ಎಲ್ಲರೂ ಸದಸ್ಯತ್ವವನ್ನು ಪಕ್ಷಾತೀತವಾಗಿ ನೊಂದಣಿ ಮಾಡಿಕೊಳ್ಳಬೇಕು ಇದರಿಂದ ಸಮಾಜದ ಏಳಿಗೆ ಸಾಧ್ಯ ಎಂದು ತಿಳಿಸಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ್ ಮಾತನಾಡಿ, ಮಾದರ ಮಹಾಸಭಾ ಸದಸ್ಯತ್ವವನ್ನು ಯಾವುದೇ ಪಕ್ಷ ಬೇಧ ಇಲ್ಲದೆ ಒಕ್ಕೂರಲಾಗಿ ಎಲ್ಲರೂ ಆನ್ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಸಬೇಕು ಇದರಿಂದ ನಮ್ಮ ಸಮಾಜ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ಇದೇ ವೇಳೆ ಸಭೆಯಲ್ಲಿ ಎಲ್ಲಾ ಮುಖಂಡರು ಹಂಗಾಮಿ ಅಧ್ಯಕ್ಷರ ಆಯ್ಕೆ ಮಾಡಿರುವ ಆದೇಶವನ್ನು ತಡೆಹಿಡಿಯಬೇಕು ಎಂದು ಒಕ್ಕೂರಲಾಗಿ ಆಗ್ರಹಿಸಿದರು.

ಸಭೆಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎಸ್.ಮಾರಪ್ಪ, ಜಗದೀಶ್, ಬಸವನಪುರ ರಾಜಶೇಖರ್, ಕೃಷ್ಣಪ್ಪ,ಕಂಟ್ರಾಕ್ಟರ್ ಎಚ್.ಎಚ್.ನಾಗರಾಜು, ಪಾಳ್ಯ ರಾಚಪ್ಪ, ಕೆಎಂಎಫ್.ಜವರಯ್ಯ, ಬ್ಯಾಂಕ್ ಬಸವರಾಜು, ಚಾಮರಾಜು, ಹಸಗೂಲಿ ಸಿದ್ದಯ್ಯ ಎಲ್ಐಸಿ ರಾಜಣ್ಣ, ಕೆಸ್ತೂರು ಮರಪ್ಪ, ಬಾಚಳ್ಳಿ ವೆಂಕಟಯ್ಯ, ವೆಲ್ಡಿಂಗ್ ಲಿಂಗರಾಜು, ನಾಗಮಲ್ಲು, ಸಂತೋಷ್, ಬೆಳ್ಳಿಯಪ್ಪ, ವಕೀಲರಾದ ಸಿದ್ದೇಶ್, ಸಿದ್ದಯ್ಯ, ರಾಜೇಂದ್ರ, ರಾಮಸಮುದ್ರ ಎಂ.ಶಿವಕುಮಾರ್, ಅರಕಲವಾಡಿ ಮಹದೇವಯ್ಯ, ಶಿವಕುಮಾರ್, ಸಿ.ಮಹದೇವಯ್ಯ, ಸಿ.ಎಚ್.ರಂಗಸ್ವಾಮಿ, ಮಹೇಶ್, ನಾಗಯ್ಯ, ಸುರೇಶ್, ಚಿನ್ನಸ್ವಾಮಿ, ರೇವಣ್ಣ, ಕೆಎಸ್ಆರ್ಟಿಸಿ ನಾಗರಾಜು, ಎಲ್ ಐ ಸಿ ಸಿದ್ದರಾಜು, ನಾಗಸುಂದ್ರ, ರಾಮಸಮುದ್ರ ಸುಂದ್ರ, ದೇವರಾಜು, ರವಳಪ್ಪ, ಮನುರಾಚಪ್ಪ, ಬೈಲೂರು ಸುರೇಶ್, ಡ್ಯಾನ್ಸ್ ಬಸವರಾಜು, ಸ್ವಾಮಿ ಸೇರಿದಂತೆ ಇತರರು ಇದ್ದರು.
ವರದಿ: ಆರ್ ಉಮೇಶ್ ಮಲಾರಪಾಳ್ಯ