ಹನುಮ ಜಯಂತಿಯಂದು ಸೀತಾರಾಮ ಕಲ್ಯಾಣ ಮಂಟಪ ಉದ್ಘಾಟನೆ 
ವಿಜಯಪುರ: ಹೋಬಳಿಯ ಮಂಡಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಪುರ ಬಳಿ ಶ್ರೀವೀರಾಂಜನೇಯ ಸ್ವಾಮಿ ದೇವಾಲಯದ ಬಳಿ ಹನುಮಜಯಂತಿ ಅಂಗವಾಗಿ ಮೂರು ದಿನಗಳ ಕಾಲ ಭಾನುವಾರದಿಂದ ಮಂಗಳವಾರದವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಸೀತಾರಾಮ ಕಲ್ಯಾಣ ಮಂಟಪವನ್ನು ಉದ್ಘಾಟನೆ ಮಾಡಲಾಯಿತು.
ಭಾನುವಾರದಂದು ಶ್ರೀವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಗಣಪತಿ ಹೋಮ, ದೇವನಾಂದಿ, ವಾಸ್ತುಹೋಮ, ವಾಸ್ತುಬಲಿ, ಮಹಾಮಂಗಳಾರತಿ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸೋಮವಾರದ ಏಕಾದಶಿ ದಿನದಂದು ಗೋಪೂಜೆ, ಕಲಶಾರಾಧನೆ, ಶ್ರೀಸುದರ್ಶನ ಮಂಡಲ ಆರಾಧನೆ, ಪೂರ್ಣಹುತಿ ಹಾಗೂ ಸೀತಾರಾಮ ಕಲ್ಯಾಣೋತ್ಸವವನ್ನು ಏರ್ಪಡಿಸಿ, ಕಲ್ಯಾಣ ಮಂಟಪದ ಉದ್ಘಾಟನೆ ನೆರವೇರಿಸಲಾಯಿತು.
ಮಂಗಳವಾರ ಶ್ರೀಸ್ವಾಮಿರವರಿಗೆ ಪಂಚಾಮೃತ ಅಭಿಷೇಕ, ದಿವ್ಯ ಅಲಂಕಾರ, ಮಹಾಮಂಗಳಾರತಿ, ಧರ್ಮಪುರ ಗ್ರಾಮಸ್ಥರಿಂದ ದೀಪಾರತಿಗಳು ನಡೆಸಲಾಗಿದ್ದು, ಗಂಟಸಾಲ ಖ್ಯಾತಿಯ ಮಹಾತ್ಮಾಂಜನೇಯ, ಮುನಿರಾಜು, ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು ತಂಡದಿಂದ ಭಜನೆ ಕಾರ್ಯಕ್ರಮ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಚನ್ನಹಳ್ಳಿ ಬಿ.ರಾಜಣ್ಣ, ತಾಲೂಕು ಅಧ್ಯಕ್ಷ ಸಿ. ಜಗನ್ನಾಥ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ಬಯಾಪ ನಿರ್ದೇಶಕ ಪ್ರಸನ್ನಕುಮಾರ್, ಹಾಜರಿದ್ದರು.





