ಮುಖ್ಯಮಂತ್ರಿ ಬದಲಾವಣೆ ಹೈ ಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು – ಶಾಸಕ ಶರತ್ ಬಚ್ಚೇಗೌಡ
ದೇವಲಾಪುರ ಹಾಗು ಕೆ.ಮಲ್ಲಸಂದ್ರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಹೇಳಿಕೆ
ಹೊಸಕೋಟೆ : ಮುಖ್ಯಮಂತ್ರಿ ಬದಲಾವಣೆ ಹೈ ಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು .ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನದಂತೆ ಯಾರು ರಾಜ್ಯದ ಚುಕ್ಕಾಣಿ ಹಿಡಿಯಬೇಕು ಎಂದು ಸೂಚಿಸುತ್ತಾರೋ ಅಂತಹ ಅಭ್ಯರ್ಥಿಗೆ ಯಾವುದೇ ಚಕಾರ ಇಲ್ಲದೆ ರಾಜ್ಯದ 140 ಕಾಂಗ್ರೆಸ್ ಶಾಸಕರು ಪಕ್ಷದ ಶಿಸ್ತಾಳುಗಳಾಗಿ ರಾಜ್ಯದ ಅಭಿವೃದ್ಧಿಗೆ ದುಡಿಯಲು ಸಿದ್ದರಿದ್ದೇವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಮಲ್ಲಸಂದ್ರ ಗ್ರಾಮದಿಂದ ಕಾಡುಗೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಕ್ಷೇತ್ರದಲ್ಲಿ ಹದಗೆಟ್ಟ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ, ಮಾದರಿ ರಸ್ತೆಗಳನ್ನಾಗಿ ನಿರ್ಮಾಣ ಮಾಡಲು ಪ್ರಮಾಣಿಕವಾಗಿ ಶ್ರಮಿಸುತ್ತೇನೆ ಎಂದರು
————————————————————————
10 ವರ್ಷಗಳ ನಂತರ ಹೊಸಕೋಟೆ ದಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಮ್ಮ ಬೆಂಬಲಿತ 8 ಅಭ್ಯರ್ಥಿಗಳು ಜಯಗಳಿಸಿದ್ದು ಮುಂದಿನ ದಿನಗಳಲ್ಲಿ ಬ್ಯಾಂಕ್ ಅಭಿವೃದ್ಧಿ ಪಡಿಸುವತ್ತ ನಿರ್ದೇಶಕರು ಮತ್ತು ಆಡಳಿತ ಮಂಡಳಿ ಒಟ್ಟಾಗಿ ಶ್ರಮಿಸಬೇಕು. ಇದೇ ಬುಧವಾರ ಬ್ಯಾಂಕ್ ನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು.
ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದ ಶಾಸಕ—
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್ , ಉಪಾಧ್ಯಕ್ಷ ಮುತ್ತೂರು ಮುನಿರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪೂಜೇನ ಅಗ್ರಹಾರ ಕೃಷ್ಣಮೂರ್ತಿ, ಬಮೂಲ್ ನಿರ್ದೇಶಕ ಕೆಎಂಎA ಮಂಜುನಾಥ್, ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತರಾಜು, ದೇವನಗೊಂದಿ ಗ್ರಾ,ಪಂ, ಅದ್ಯಕ್ಷ ರತ್ನಗೋವಿಂದರಾಜು, ಮಾಜಿ ಅದ್ಯಕ್ಷ ಹಾಲಿ ಸದಸ್ಯ ಮಾರೇಗೌಡ, ಮಾಜಿ ಸದಸ್ಯೆ ಗೀತಾಪ್ರಕಾಶ್, ನಾರಾಯಣ ಗೌಡ ( ನಾಣಿ ) , ಎಸ್.ಎಫ್.ಸಿ.ಎಸ್.ಬ್ಯಾಂಕ್ ನಿರ್ದೇಶಕ ರಾಜಪ್ಪ ಖರ್ಗೆ , ನಡವತ್ತಿ ವೆಂಕಟೇಶ್, ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಪ್ರಸಾದ್, ಮುಖಂಡರಾದ ಪ್ರಧಾನ್ ಗೋವಿಂದಪ್ಪ , ಶೇಷಪ್ಪ, ನಾರಾಯಣಸ್ವಾಮಿ, ವಿಜೇತ್ ಕುಮಾರ್, ಗಣಗಲೂರು ಲಕ್ಷ್ಮಿ ನಾರಾಯಣ್ , ವಾಸುದೇವ್, ತಿಮ್ಮೇಗೌಡ , ರಮೇಶ್, ಸತೀಶ್ ಇನ್ನು ಹಲವು ಮುಖಂಡರು ಹಾಜರಿದ್ದರು.





