ಡಿ ಕ್ರಾಸ್ ವೃತ್ತದಲ್ಲಿ ಡಾ ರಾಜ್ ವೃತ್ತ ಹಾಗೂ ಶಿಲಾಪಲಕ ಅಳವಡಿಸಲು ರಾಜ್ ಅಭಿಮಾನಿ ಸಂಘ ಒತ್ತಾಯ

ದೊಡ್ಡಬಳ್ಳಾಪುರ:ನಗರದ,ಡಿ.ಕ್ರಾಸ್ ವೃತ್ತಕ್ಕೆ ಪದ್ಮಭೂಷಣ ಡಾ.ರಾಜ್‌ ಕುಮಾರ್ ವೃತ್ತ ಎಂದು ನಗರ ಸಭೆಯಿಂದ 20-05-2006 ನೇ ಸಾಲಿನಲ್ಲಿ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನವಾಗಿ ಜಿಲ್ಲಾಧಿಕಾರಿಗಳ ಅನುಮತಿ ಸಹ ಆಗಿದ್ದು ಶ್ರೀ ಪದ್ಮಭೂಷಣ ಡಾ.ರಾಜ್ ಕುಮಾರ್ ವೃತ್ತ ಎಂದು ನಾಮ ಫಲಕ ಸಹ ನಗರ ಸಭೆಯಿಂದ ಹಾಕಲಾಗಿತ್ತು

ನಂತರ ಮುತ್ಸಂದ್ರ ವಾರ್ಡಿನ ನಗರಸಭಾ ಸದಸ್ಯ ಶ್ರೀ. ಚಂದ್ರಪ್ಪ ನವರು 2009-10ರಲ್ಲಿ ನಗರಸಭೆಯಿಂದ ನೂತನವಾಗಿ ಗ್ರಿಲ್ಸ್ ಹಾಕಿಸಿ ವೃತ್ತ ಮಾಡಿಸಿ ಶ್ರೀ ರಾಘವೇಂದ್ರ ರಾಜಕುಮಾರ್ ಮುಖ್ಯ ಅತಿಥಿಯಾಗಿ ಹಾಗೂ ಅಖಿಲ ಕರ್ನಾಟಕ ಡಾ.ರಾಜಕುಮಾರ್ ಸಂಘದ ಅಧ್ಯಕ್ಷ ಶ್ರೀ ಸಾ.ರಾ ಗೋವಿಂದ್ ರವರ ಅಧ್ಯಕ್ಷತೆಯಲ್ಲಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕು ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಆಗಿನ ಅಧ್ಯಕ್ಷ ಶ್ರೀ.ಹ.ರಾಮಕೃಷ್ಣರವರ ಸಾರಥ್ಯದಲ್ಲಿ ಶಿಲಾ ಫಲಕವನ್ನು ಅಳವಡಿಸಲಾಗಿತ್ತು. ಆದರೆ ಮೂರು ವರ್ಷಗಳ ಹಿಂದೆ ರಸ್ತೆ ಅಗಲೀಕರಣಕ್ಕಾಗಿ. ವೃತ್ತ ಹಾಗೂ ಶಿಲಾ ಫಲಕವನ್ನು ತೆಗೆದು ಹಾಕಲಾಗಿದ್ದು, ರಸ್ತೆ ಅಗಲೀಕರಣದ ನಂತರ ವೃತ್ತವನ್ನು ಮಾತ್ರ ನಿರ್ಮಾಣ ಮಾಡಿ ಪದ್ಮಭೂಷಣ ಡಾ.ರಾಜಕುಮಾರ್ ಶಿಲಾ ಫಲಕವನ್ನು ಇಲ್ಲದೆ ಇರುವುದರಿಂದ ಮತ್ತೆ ಡಿ.ಕ್ರಾಸ್ ವೃತ್ತದಲ್ಲಿ ನಾಮಫಲಕ ಹಾಗೂ ಶಿಲಾ ಫಲಕ ಅಳವಡಿಸಲು ಆಗ್ರಹಿಸಿ ದೊಡ್ಡಬಳ್ಳಾಪುರ ಡಾ.ರಾಜಕುಮಾರ್ ಅಭಿಮಾನಿ ಸಂಘದಿಂದ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಸ್ ಸು ನರಸಿಂಹಮೂರ್ತಿ ಉಪಾಧ್ಯಕ್ಷ ಬಿ.ವಿಠಲ್ ರಾವ್
ಕಾರ್ಯದರ್ಶಿ ಎಂ ವೆಂಕಟೇಶ್. ಖಾಜಾಂಚಿ ಡಿ.ಎನ್. ತಿಮ್ಮರಾಜ್. ಉಪಾಧ್ಯಕ್ಷ ಅರ್ ಎಂ ಮಹದೇವ್. ಪರಮೇಶ್ ಎಂ ಶಿವಾಜಿ ರಾವ್. ವಿಠಲ್ ರಾವ್.ಎಂ ಚಂದ್ರಶೇಖರ್ ಸೋಮು.ಆನಂದ್ ಇದ್ದರು