ಕಸ ವಿಂಗಡಣೆ ಮತ್ತು ತ್ಯಾಜ್ಯ ನಿರ್ವಹಣೆ ಅರಿವು ಕುರಿತು ವಿದ್ಯಾರ್ಥಿಗಳಿಂದ ಜಾಥಾ
ದೊಡ್ಡಬಳ್ಳಾಪುರ:ನಗರಸಭೆ, ಭಾರತೀಯ ಮಾನವ ವಸಾಹತುಗಳ ಸಂಸ್ಥೆ (ಐ ಐ ಎಚ್ ಎಸ್) ಮತ್ತು ಗೋದ್ರೇಜ್ ಪ್ರಾಪರ್ಟಿಸ್ ಲಿಮಿಟೆಡ್ ರವರ ಸಹಯೋಗದೊಂದಿಗೆ
ನಗರಸಭೆ ಮತ್ತು ರೈತರ ಸಹಭಾಗಿತ್ವದಲ್ಲಿ ಘನತ್ಯಾಜ್ಯ ನಿರ್ವಹಣೆ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಲ್ಲಿ ನಗರದಲ್ಲಿ ಉತ್ಪತ್ತಿ ಯಾಗುವ ಹಸಿ ಕಸವನ್ನು ರೈತರ ಜಾಗದಲ್ಲಿಯೇ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ಕ್ರಮಗಳನ್ನು ಕೈಗೊಂಡಿದೆ. ಈ ಯೋಜನೆಯ ಯಶಸ್ಸಿಗಾಗಿ, ಮೂಲದಲ್ಲಿಯೇ ಕಸವಿಂಗಡಣೆ ಮತ್ತು ತ್ಯಾಜ್ಯ ನಿರ್ವಹಣೆ ಯ ಪ್ರಗತಿಗಾಗಿ ನಗರದ ಪ್ರತಿ ವಾರ್ಡ್ ನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ಅಂಗವಾಗಿ ದೊಡ್ಡಬಳ್ಳಾಪುರ ನಗರದಲ್ಲಿ ಇಂದು ರಸ್ತೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಶ್ರೀ ವಾಣಿ ಪದವಿ ಪೂರ್ವ ಕಾಲೇಜಿನ ಸುಮಾರು 1000 ವಿದ್ಯಾರ್ಥಿಗಳು ಡೈರಿ ಸರ್ಕಲ್ ಮುಂಬಾಗದಿಂದ ಪ್ರಾರಂಭಗೊಂಡು, ಟಿ ಬಿ ಸರ್ಕಲ್, ಕೋರ್ಟ್ ರೋಡ್, ಗಣೇಶ ದೇವಸ್ಥಾನ, ತಾಲೂಕು ಕಚೇರಿ ಮುಕಾಂತರ ಸಾಗಿ ಜನರಲ್ಲಿ ಮೂಲದಲ್ಲಿಯೇ ಕಸ ವಿಂಗಡಿಸುವ ಬಗ್ಗೆ ಹಾಗು ಮರು ಬಳಕೆಯಾಗದ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ತೊಂದರೆಗಳನ್ನು ತಿಳಿಸಿ, ಪ್ಲಾಸ್ಟಿಕ್ ಬಳಸದಂತೆ ಜನರಲ್ಲಿ ಅರಿವು ಮೂಡಿಸಿದರು. ಒಂದು ಬಟ್ಟೆಯ ಚೀಲ ನೂರು ಪ್ಲಾಸ್ಟಿಕ್ ಚೀಲಕ್ಕೆ ಸಮ, ನೂರು ಬಟ್ಟೆಯ ಚೀಲಗಳು ವರ್ಷಕ್ಕೆ 2 ಟನ್ ಪ್ಲಾಸ್ಟಿಕ್ ಬಳಕೆಯನ್ನು ಉಳಿಸುತ್ತವೆ ಎಂದು ಗೋಷಣೆಗಳನ್ನು ಕೂಗುತ್ತ ಸಾಗಿದರು.
ನಗರಸಭೆಯ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ, ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಪ್ರತಿಜ್ಞೆ ಮಾಡಿಸಿದರು.
ದೊಡ್ಡಬಳ್ಳಾಪುರದ ಜನತೆ ಇನ್ನೂ ಹೆಚ್ಚು ಸಹಕರಿಸಿ ಮೂಲದಲ್ಲಿಯೇ ಕಸ ವಿಂಗಡಿಸಿದರೆ, ನಗರ ಸ್ವಚ್ಚವಾಗುವುದಲ್ಲದೇ, ದೇಶಕ್ಕೆ ಒಂದು ಮಾದರಿ ನಗರವಾಗಿ ರೂಪಿಸುವ ವಿಶ್ವಾಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಶ್ರೀಮತಿ ಸುಮಿತ್ರ ಅನಂದ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ ಸದಸ್ಯರುಗಳು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಆರೋಗ್ಯ ಅಧಿಕಾರಿ ಗಳು, ಐ ಐ ಎಚ್ ಎಸ್ ಸಂಸ್ಥೆ ಯ ಸಿಬ್ಬಂದಿ ಮತ್ತು ಕಾಲೇಜ್ ವಿದ್ಯಾರ್ಥಿಗಳು. ಇತರರು ಹಾಜರಿದ್ದರು.