ಬಂದೂಕು ಪರವಾನಗಿ ಪಡೆದ ನಾಗರೀಕರಿಂದ ದುರುಪಯೋಗ ಆಗಬಾರದು ಬಂದೂಕು ತರಬೇತಿದಾರರಿಗೆ ಪ್ರಮಾಣ ಪತ್ರ ವಿತರಣೆ : ಡಿವೈಎಸ್ಪಿ ಮಲ್ಲೇಶ್ ಹೇಳಿಕೆ
ಹೊಸಕೋಟೆ:ಆತ್ಮ ರಕ್ಷಣೆ ಹೆಸರಿನಲ್ಲಿ ಬಂದೂಕು ಪರವಾಗಿ ಪಡೆದುಕೊಳ್ಳುವವರು ಯಾವುದೇ ಕಾರಣಕ್ಕೂ ಅದನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಹೊಸಕೋಟೆ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ತಿಳಿಸಿದರು.
ನಗರದ ಬಾಲಕರ ವಸತಿ ಶಾಲೆ ಸಭಾಭವನದಲ್ಲಿ ನಡೆದ ಬಂದೂಕು ತರಬೇತಿದಾರರ ಪರವಾನಗಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಮುಖವಾಗಿ ಆತ್ಮರಕ್ಷಣೆ, ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗ ಬೆಳೆ ಸಂರಕ್ಷಣೆ, ವ್ಯಾಪಾರ ವಹಿವಾಟು ಮಾಡುವ ಉದ್ಯಮಿಗಳು, ಒಂಟಿ ಮನೆಯಲ್ಲಿ ವಾಸ ಮಾಡುವವರು ಬಂದೂಕು ಪರವಾನಗಿಯನ್ನು ಪಡೆದುಕೊಳ್ಳುತ್ತಾರೆ. ಸರ್ಕಾರ ಕೂಡ ಬಂದೂಕು ಪರವಾನಗಿ ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಿದ್ದು, ತರಬೇತಿ ಪಡೆದು ಪರವಾನಗಿ ಪಡೆದುಕೊಳ್ಳುವವರು ಸಾಕಷ್ಟು ಜಾಗೃತೆಯಿಂದ ಬಂದೂಕು ಬಳಕೆ ಮಾಡಬೇಕು. ಸರ್ಕಾರದ ನಿಯಮಾನುಸಾರ ಬಳಕೆ ಮಾಡಿದರೆ ಯಾವುದೇ ರೀತಿಯ ಅವಘಡ ಸಂಭವಿಸುವುದಿಲ್ಲ. ಆದರೆ ರಾಜ್ಯದಲ್ಲಿ ಬಂದುಕ್ಕೂ ಪಡೆದವರು ಸದುಪಯೋಗಕ್ಕಿಂತ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಬಂದೂಕು ದುರುಪಯೋಗಪಡಿಸಿಕೊಂಡರೆ ಕಾನೂನು ರೀತಿಯ ಕ್ರಮ ಆಗುತ್ತದೆ.
ಇದನ್ನು ಅರಿತು ಪರವನಾಗಿ ಪಡೆದವರು ಅಗತ್ಯ ಸಂದರ್ಭದಲ್ಲಿ ಆತ್ಮ ರಕ್ಷಣೆಗಾಗಿ ಬಳಕೆ ಮಾಡಿಕೊಳ್ಳಿ ಎಂದರು.
ಇನ್ನು ಚುನಾವಣೆ ಸಂದರ್ಭದಲ್ಲಿ ಸರ್ಕಾರದ ನಿಯಮಾನುಸಾರ ಬಂದೂಕನ್ನ ಪಡೆದಿರುವವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಬಂದೂಕನ್ನ ಡೆಪಾಸಿಟ್ ಮಾಡಬೇಕು. ಅಲ್ಲದೆ ಪರವಾನಗಿಯನ್ನು ಕಾಲಕಾಲಕ್ಕೆ ನವೀಕರಣ ಮಾಡಿಕೊಳ್ಳುವ ಕೆಲಸ ಪರವಾನಗಿ ಪಡೆದ ಪ್ರತಿಯೊಬ್ಬರಿಂದ ಆಗಬೇಕು ಎಂದು ತಿಳಿಸಿದರು.
ಉದ್ಯೋಗ ಲಭ್ಯ : ಬಂದೂಕು ಪರವಾನಗಿ ಪಡೆದವರು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಕ್ಕೂ ಅರ್ಜಿ ಸಲ್ಲಿಸಬಹುದು. ಪ್ರಮುಖವಾಗಿ ಗಣ್ಯರಿಗೆ, ಉದ್ಯಮಿಗಳಿಗೆ ಅಂಗರಕ್ಷಕರು, ಎಟಿಎಂ ಕೇಂದ್ರಗಳು ಸೇರಿದಂತೆ ಸಾಕಷ್ಟು ಕಡೆ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಪರವಾನಗಿ ಪಡೆದವರು ಉದ್ಯೋಗಕ್ಕೂ ಪ್ರಯತ್ನ ಪಡಿ ಎಂದರು.
ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದ್ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ದೇವನಹಳ್ಳಿ ದೊಡ್ಡಬಳ್ಳಾಪುರ ಹಾಗೂ ನೆಲಮಂಗಲದ ಸುಮಾರು 200ಕ್ಕೂ ಹೆಚ್ಚಿನ ತರಬೇತಿದಾರರು ಹಾಜರಿದ್ದರು.