ವಿಕಲಚೇತನರಿಗೆ ವೀಲ್ ಚೇರ್ ವಿತರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ
ತಿಪಟೂರು: ಗ್ರಾಮಾಂತರ ತಾಲ್ಲೂಕಿನ ಕಾರೆಹಳ್ಳಿ ವಲಯದ ಚವ್ವೆನಹಳ್ಳಿ ಹಾಗೂ ರಂಗಾಪುರ ಗ್ರಾಮದ ನಿವಾಸಿಗಳಾದ ಸುಶೀಲಮ್ಮ,ಕುಮಾರಸ್ವಾಮಿ ಹಾಗೂ ರಾಜು k ರವರು ವಿವಿದ ರೀತಿಯ ಅನಾರೋ
ಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ನಡೆದಾಡಲು ಸಹ ಅಸಾದ್ಯವಾದ ದುಸ್ಥಿತಿಯನ್ನು ಎದುರಿಸುತ್ತಿದ್ದು ಪರಮ ಫೂಜ್ಯ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಜನಮಂಗಲ ಕಾರ್ಯಕ್ರಮದಡಿಯಲ್ಲಿ ಕಮೋಡ್ ವಿತ್ ವೀಲ್ ಚೇರ್,ಔಟ್ ಸೈಡ್ ವೀಲ್ ಚೇರನ್ನು ಮಂಜೂರು ಮಾಡಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮಾಂತರ ಯೋಜನಾಧಿಕಾರಿ ಸುರೇಶ್.ಕೆ ರವರ ನೇತೃತ್ವದಲ್ಲಿ ವಿತರಿಸಿ ಧರ್ಮಸ್ಥಳದ ಪರವಾಗಿ ವಿಶೇಷಚೇತನರಿಗೆ ಸಾಂತ್ವಾನ ಹೇಳಲಾಯಿತು.ಈ ಸಂದರ್ಭದಲ್ಲಿ ಕಾರೇಹಳ್ಳಿ ವಲಯದ ಮೇಲ್ವಿಚಾರಕಿ ಕಲ್ಯಾಣಿ,ಸೇವಾಪ್ರತಿನಿಧಿ,
ಧರ್ಮಸ್ಥಳ ಸಂಘದ ಪಾಲುದಾರಬಂದುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ:ಮಂಜು ಗುರುಗದಹಳ್ಳಿ





