ಪೌರಾಣಿಕ ರಂಗಭೂಮಿ ಕಲಾವಿದ ರಾಜಣ್ಣ ಅವ ರಿಗೆ ಕಲಾ ಪುರಸ್ಕಾರ ಪ್ರಶಸ್ತಿ ಪ್ರಧಾನ ಸರ್ಕಾರ ಕ್ಕೆ ಅಭಿನಂಧನೆ — ಕೆಂಪಣ್ಣ
ದೇವನಹಳ್ಳಿ:ಮಾತೃಭಾಷೆ ಪರ ಭಾಷಿಗರ ಹಾವಳಿಯಿಂದ ಕನ್ನಡ ಕಣ್ಮರೆಯಾಗುತಿದೆ ಎಂದು ಬೆಂಗಳೂರು ಗ್ರಾಮಾಂ ತರ ಜಿಲ್ಲಾ ರಂಗಭೂಮಿ ಕಲಾವಿದ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಚಪ್ಪರಕಲ್ಲು ಬಳಿಯ ಜಿಲ್ಲಾ ರಂಗಭೂಮಿ ಕಲಾವಿದ ಸಂಘದಿಂದ ಕನ್ನಡ ರಾಜ್ಯೋತ್ಸವ, ಕನಕ ದಾಸರ ಜಯಂತಿ, ರಂಭೂಮಿ ಕಲಾವಿಧರಾದ ರಾಜಣ್ಣ ಅವರಿಗೆ ಘನ ಸರ್ಕಾರ ಕಲಾ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ, 45ನೇ ಮಾಸದ ರಂಗ ಕಲಾಜ್ಯೋತಿ ಹಾಗೂ ರಂಗಗೀತೆ ಗಾಯನ, ರಂಗ ಕಲಾಜ್ಯೋತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಗಣಪತಿ ಕಾಂಪ್ಲೆಕ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವ ಹಿಸಿ ಮಾತನಾಡಿ, ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ ಪ್ರೋತ್ಸಾಹ ಧನವನ್ನು ಸರ್ಕಾರ ತಡೆ ಹಿಡಿದಿದೆ ಇದರಿಂದ ರಂಗಭೂಮಿ ಕಲಾವಿದರಿಗೆ ಸಾಕಷ್ಟು ಅನಾನುಕೂಲವಾಗಲಿದೆ ಸರ್ಕಾರ ಗಮನ ಹರಿಸಿ ಅನುದಾನವನ್ನು ಬಿಡುಗಡೆ ಗೊಳಿಸುವಂತೆ ಸರ್ಕಾರ ವನ್ನು ಒತ್ತಾಯಿಸುವು ದಲ್ಲದೆ ಉಳಿಸಿ ಬೆಳೆಸಬೇಕಿದೆ ಕಳೆದ ಹಲವು ವರ್ಷಗಳ ನಿರಂತರ ಪರಿಶ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತ ಬಂದಿದ್ದೇವೆ.
ಕಲೆ ಸಾಹಿತ್ಯ ಸಂಸ್ಕೃತಿ ಏಕತೆ ನಮ್ಮ ರಾಜ್ಯದಲ್ಲಿ ಮಾತ್ರ ಸಾಧ್ಯ ಕರ್ನಾಟಕದಲ್ಲಿ ಅನ್ಯಾ ಭಾಷಿಗರ ಹಾವಳಿಯಿಂದ ಮಾತೃಭಾಷೆ ಕನ್ನಡ ಅಳಿವು ಅಂಚಿನಲ್ಲಿದೆ. ಆಳುವ ಸರ್ಕಾರಗಳು ಕನ್ನಡ ಶಾಲೆ ಉಳಿಸಿ ಕೊಳ್ಳುವಲ್ಲಿ ವಿಫಲತೆ ಮೆರೆದಿದ್ದಾರೆಂದು ದೂರಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾ ವಿದ ಸಂಘದ ಪದಾಧಿಕಾರಿಗಳಾದ ಅಧ್ಯಕ್ಷರ ಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ಪುಟ್ಟಸಿದ್ದಯ್ಯ, ಉಪಾಧ್ಯಕ್ಷ ಶ್ರೀಧರ್ ಗೌಡ, ಖಜಾಂಚಿ ಮಂಜು ನಾಥ್, ಸಂಘಟನಾ ಕಾರ್ಯದರ್ಶಿ ನಾಗರಾಜು, ನಿರ್ದೇಶಕ ಮುನಿರಾಜು, ಕಲಾವಿದರಾದ ಸುಬ್ರ ಮಣ್ಯಿ ಆಚಾರ್, ಆನಂದಮೂರ್ತಿ, ಶಿವ ಕುಮಾರ್, ಕನಸವಾಡಿ ಮಂಜುನಾಥ್, ಸಂಜೀವ ರಾಯಪ್ಪ, ನಾಗರತ್ನ, ಸಂಚಾಲಕ, ಸಲಹಾ ಸಮಿತಿ, ಸಾಂಸ್ಕೃತಿಕ ಸಮಿತಿ, ಸೇರಿದಂತೆ ಕಲಾ ಪೋಷಕರು ಹಾಜರಿದ್ದರು.





