--ಜಾಹೀರಾತು--

ಮಾಹಿತಿ ನೀಡದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗೆ ದಂಡ ವಿಧಿಸಿದ ಮಾಹಿತಿ ಆಯೋಗ

On: November 30, 2025 8:17 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಮಾಹಿತಿ ನೀಡದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗೆ ದಂಡ ವಿಧಿಸಿದ ಮಾಹಿತಿ ಆಯೋಗ

ದೊಡ್ಡಬಳ್ಳಾಪುರ:ಕರ್ನಾಟಕ ಮಾಹಿತಿ ಆಯೋಗಕ್ಕೆ ಮಾಹಿತಿ ನೀಡದೆ, ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ ಆರೋಪದಡಿಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಗೆ ದಂಡ ವಿಧಿಸಿ ಆಯೋಗವು ಆದೇಶಿಸಿದೆ

ನಿಗದಿತ ಕಾಲಾವಧಿಯಲ್ಲಿ ಮಾಹಿತಿ ನೀಡುವ ನಿಯಮವನ್ನು ಗಾಳಿಗೆ ತೂರಿ, ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿ ದೊಡ್ಡಬಳ್ಳಾಪುರ ಉಪ ವಿಭಾಗದಿಕಾರಿ ದುರ್ಗಾಶ್ರೀ ಅವರಿಗೆ ಎರಡು ಪ್ರಕರಣಗಳಲ್ಲಿ ಒಂದಕ್ಕೆ ಮಾಹಿತಿ ನೀಡದೆ, ಮತ್ತೊಂದರ ವಿಚಾರಣೆಗೆ ಸತತ ಹಾಜರಾಗದ ಕಾರಣ ತಲಾ 25,000 ರೂ. ದಂಡ ವಿಧಿಸಲಾಗಿದೆ.

ಮುಂದೆಯೂ ಯಾವುದೇ ಪ್ರಕರಣದಲ್ಲಿ ಸೂಕ್ತ ಸಮಯಕ್ಕೆ ಕೇಳಿದ ಮಾಹಿತಿ ನೀಡಬೇಕು ಉನ್ನತ ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂಬ ಸ್ಪಷ್ಟ ಸಂದೇಶವನ್ನು ಮಾಹಿತಿ ಆಯೋಗ ರವಾನಿಸಿದೆ.