ಬಸ್ ಕಂಬಕ್ಕೆ ಡಿಕ್ಕಿ-ತಪ್ಪಿದ ಬಾರಿ ದುರಂತ ಅದೃಷ್ಟ ವಶತ್ ಪ್ರಾಣಾಪಾಯದಿಂದ ಪಾರು
ಕೊಳ್ಳೇಗಾಲ:ತಾಲ್ಲೂಕಿನ ದೊಡ್ಡಿಂದುವಾಡಿ ಬಳಿ ಸರ್ಕಾರಿ ಬಸ್ಸೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಜಮೀನಿನ ಒಳಗೆ ನುಗ್ಗಿದ್ದು ಸಂಭವಿಸಬೇಕಾಗಿದ್ದ ಬಾರಿ ದುರಂತ ತಪ್ಪಿ ಅದೃಷ್ಟ ವಶತ್
ವಿದ್ಯಾರ್ಥಿಗಳು ಸೇರಿದಂತೆ 50 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ
ತೆಳ್ಳನೂರು, ಚಿಕ್ಕಲ್ಲೂರು ಕಡೆಯಿಂದ ಕೊಳ್ಳೇಗಾಲದ ಕಡೆಗೆ ಬರುತ್ತಿದ್ದ ಕೆ. ಎ. 10, ಎಫ್ 0116 ಸಂಖ್ಯೆಯ ಸರ್ಕಾರಿ ಬಸ್ ಚಾಲಕನ ಅಜಾಗರುಕತೆ ಚಾಲನೆಯಿಂದ ಸ್ಟೇರಿಂಗ್ ರಾಡ್ ಕಟ್ ಆಗಿದ ಪರಿಣಾಮ ದೊಡ್ಡಿಂದುವಾಡಿ ಚರ್ಚೆ ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದ ಜಮೀನಿನ ಒಳಗೆ ನುಗ್ಗಿದ ಪರಿಣಾಮ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಇತರ ಪ್ರಯಾಣಿಕರು ಸೇರಿ 50 ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ
ಪ್ರತಿ ದಿನ ಬೆಳಿಗ್ಗೆ 7:45 ಸಮಯಕ್ಕೆ ತೆಳ್ಳನೂರಿನಿಂದ ಕೊಳ್ಳೇಗಾಲಕ್ಕೆ ಬರುವ 116 ಸಂಖ್ಯೆಯ ಸರ್ಕಾರಿ ಬಸ್ ನಲ್ಲಿ ಬಹುಪಾಲು ಶಾಲಾ ಕಾಲೇಜು ವಿದ್ಯಾರ್ಥಿಗಳೆ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಸುವ ಈ ಬಸ್ ಒಂದಲ್ಲ ಒಂದು ಸಮಸ್ಯೆಗಳು ಸಂಭವಿಸುವುದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗಲು ತೊಂದರೆ ಉಂಟಾಗುತ್ತಿದೆ ಬಸ್ ಚಕ್ರ ಪಂಚರ್ ಆಯ್ತು, ಸ್ಟೇರಿಂಗ್ ರಾಡ್ ಕಟ್ ಆಯ್ತು, ಬಯಲ್ ಆಯ್ತು ಈಗೆ ಹಲವಾರು ಸಮಸ್ಯೆಗಳು ಸಂಭವಿಸಿ ಬಸ್ ಗಳು ಮಾರ್ಗ ಮದ್ಯ ಕಟ್ಟು ನಿಲ್ಲುತ್ತಿವೆ,
ದೂರದ ಗ್ರಾಮಗಳಿಗೆ ವ್ಯಾಲಿಡಿಟಿ ಮುಗಿದಿರುವ ಹಳೆಯ ಬಸ್ ಗಳನ್ನು ನಿಯೋಜಿಸಿರುವುದರಿಂದ
ಸಮಯಕ್ಕೆ ಸರಿಯಾಗಿ ಬಸ್ ಗಳು ಬಾರದೆ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಬಸ್ ಗಳು ಮಾರ್ಗ ಮದ್ಯ ಕೆಟ್ಟು ನಿಂತಾಗ ವಿದ್ಯಾರ್ಥಿಗಳು ನಡೆದು ಕೊಂಡೊ ಅಥವಾ ಟೆಂಪೋಗಳಲ್ಲಿ ತೆರಳುವ ಘಟನೆಗಳು ನಡೆದಿವೆ
ಪವಿತ್ರ ಪುಣ್ಯ ಕ್ಷೇತ್ರ ಚಿಕ್ಕಲ್ಲೂರು ಹಾಗೂ ತೆಳ್ಳನೂರು ಗ್ರಾಮದ ಕಡೆಗೆ ಹಳೆಯ ಬಸ್ ಗಳನ್ನು ನಿಯೋಜಿಸಲಾಗಿದ್ದು ಆಗಾಗ ಕೆಟ್ಟು ನಿಲ್ಲುತ್ತವೆ, ಅದರಂತೆ ಸೋಮವಾರ ಬೆಳಿಗ್ಗೆ ಸರ್ಕಾರಿ ಬಸ್ ಚಾಲಕನ ಅಜಾಗರೂಕ ಚಾಲನೆಯಿಂದ ಸ್ಟೇರಿಂಗ್ ರಾಡ್ ಕಟ್ ಅದ ಕಾರಣದಿಂದ ಜರುಗಿದ ಘಟನೆಯಿಂದ ಅದೃಷ್ಟ ವಶತ್ ದೊಡ್ಡ ಅನಾಹುತ ತಪ್ಪಿ ಪ್ರಯಾಣಿಕರು ಪಾರಾಗಿದ್ದಾರೆ
ಹಳೆಯ ಬಸ್ ಗಳು ಆಗಾಗ ಕೆಟ್ಟು ನಿಲ್ಲುವುದರಿಂದ ಬಸ್ ಸಮಸ್ಯೆಗಳಿಂದ ಬೇಸತ್ತು ತೆಳ್ಳನೂರು, ಚಿಕ್ಕಲ್ಲೂರು ಗ್ರಾಮಗಳ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ನಮ್ಮ ಗ್ರಾಮಗಳಿಗೆ ಸುಸಜ್ಜಿತವಾದ ಬಸ್ ಗಳನ್ನು ನಿಯೋಜಿಸಿ ಕೊಡಿ ಎಂದು ಕಛೇರಿಗೆ ಭೇಟಿ ಮಾಡಿ ಹಲವು ಬಾರಿ
ಕೆ. ಎಸ್. ಆರ್. ಟಿ. ಸಿ ವ್ಯವಸ್ಥಾಪಕರನ್ನು ಕೇಳಿಕೊಂಡು ಮನವಿ ಮಾಡಿ ಕೊಂಡಿದ್ದರು, ಅಧಿಕಾರಿಗಳು ಈ ಭಾಗಕ್ಕೆ ಒಳ್ಳೆಯ ಬಸ್ ಗಳನ್ನು ನಿಯೋಜಿಸಲು ಮೀನಾಮೇಷ ಎಣಿಸುತ್ತಿದ್ದಾರೆ,
ತೆಳ್ಳನೂರು, ಚಿಕ್ಕಲ್ಲೂರು ಮಾರ್ಗ ಸುಮಾರು 34 ಕಿ. ಮೀ ವ್ಯಾಪ್ತಿ ಒಳಗೆ ಸುಮಾರು 20 ಕ್ಕೂ ಹೆಚ್ಚು ಹಳ್ಳಿಗಳು ಇದ್ದು ಈ ಭಾಗಕ್ಕೆ ಬರುವ ಬಸ್ ಗಳು ತೀರ ಹಳೆಯ ಬಸ್ ಗಳಾಗಿದ್ದು ವಾರದ ಎರಡು ಮೂರು ದಿನಗಳಲ್ಲಿ ಏನಾದರು ಸಮಸ್ಯೆಗಳಿಂದ ಮಾರ್ಗ ಮದ್ಯ ಕೆಟ್ಟು ನಿಲ್ಲುತ್ತಿವೆ ಆದ್ದರಿಂದ ಹೆಚ್ಚು ವಿದ್ಯಾರ್ಥಿಗಳು, ಮಹಿಳೆಯರು ವಯೋವೃದ್ಧರು ಪ್ರಯಾಣಿಸುತ್ತಿರುವ ಸಮಯದಲ್ಲಿ ಬಸ್ ಗಳು
ಕೆಟ್ಟು ನಿಂತಾಗ ತುಂಬಾ ಪ್ರಯಾಸಪಟ್ಟು ತಮ್ಮ ಗ್ರಾಮಗಳಿಗೆ ತೆರಳುತ್ತಾರೆ
ಸಂಜೆಯ ವೇಳೆ ಈ ಭಾಗಕ್ಕೆ ತೆರಳುವ ಬಸ್ ಗಳು ಮುಂಭಾಗದ ಲೈಟ್ ಗಳು ಬಾರದೆ ಚಾಲಕರು ತುಂಬಾ ಕಷ್ಟಪಟ್ಟು ಚಾಲನೆ ಮಾಡುತ್ತಾರೆ, ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ನಮ್ಮಲ್ಲಿ ಹೆಚ್ಚು ಬಸ್ ಗಳು ಇಲ್ಲಾ ಬಸ್ ಗಳ ಕೊರತೆ ಎಂದು ಸಮಾಜಯಿಸಿ ಕೊಡುತ್ತಾರೆ ಹಾಗೂ ಚಾಲಕರು ಒಳ್ಳೆಯ ಬಸ್ ಗಳನ್ನು ಕೊಡಿ ಹಳೆಯ ಬಸ್ ಗಳು ಬೇಡ ಎಂದರೆ ಚಾಲಕರ ಮೇಲೆ ರೇಗಾಡುತ್ತಾರೆ ಎನ್ನಲಾಗಿದೆ
ಆದ್ದರಿಂದ ಹನೂರು ಶಾಸಕರು ಹಾಗೂ ಕೊಳ್ಳೇಗಾಲ ಶಾಸಕರು ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಭವಿಷ್ಯ ದೃಷ್ಟಿಯಿಂದ ಬಡವರ, ರೈತರ ಮಕ್ಕಳ ಶಿಕ್ಷಣಕ್ಕೆ ಅಧ್ಯತೆಯನ್ನು ಕೊಟ್ಟು ಗ್ರಾಮೀಣ ಭಾಗಗಳಿಗೆ ಅದರಲ್ಲೂ ತೆಳ್ಳನೂರು, ಚಿಕ್ಕಲ್ಲೂರು ಗ್ರಾಮಗಳ ಕಡೆಗೆ ಉತ್ತಮವಾದ ಸುಸಜ್ಜಿತವಾದ ಹೆಚ್ಚು ಬಸ್ ಗಳನ್ನು ನಿಯೋಜಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಕೊಳ್ಳೇಗಾಲ ಕೆ. ಎಸ್. ಆರ್ ಟಿ ಸಿ ಘಟಕದಲ್ಲಿ ಬಸ್ ಕೊರತೆ ಇದೆ ಎಂದು ಘಟಕದ ವ್ಯವಸ್ಥಾಪಕರು ಹೇಳುತ್ತಾರೆ ಆದ್ದರಿಂದ ಹನೂರು ಮತ್ತು ಕೊಳ್ಳೇಗಾಲ ಶಾಸಕರುಗಳು ಗಮನ ಹರಿಸಿ ಸರ್ಕಾರದ ಗಮನಕ್ಕೆ ತಂದು ಕೊಳ್ಳೇಗಾಲ ಘಟಕಕ್ಕೆ ಹೊಸದಾಗಿ ಹೆಚ್ಚು ಬಸ್ ಗಳನ್ನು ಕೊಡಿಸುವ ಪ್ರಯತ್ನ ಮಾಡಬೇಕು ಏಕೆಂದರೆ ಚಾಮರಾಜನಗರ ಜಿಲ್ಲೆ ಹಲವಾರು ಪುಣ್ಯ ಕ್ಷೇತ್ರಗಳನ್ನು ಹೊಂದಿದೆ ಮಲೆ ಮಹದೇಶ್ವರ, ಚಿಕ್ಕಲ್ಲೂರು,, ಬಿಳಿಗಿರಿ ರಂಗನಬೆಟ್ಟ ಹಾಗೂ ಪ್ರವಾಸಿ ತಾಣಗಳನ್ನು ಹೊಂದಿರುವುದರಿಂದ ಕೊಳ್ಳೇಗಾಲ ಹನೂರು ಭಾಗಗಳಿಗೆ ಹೆಚ್ಚು ಬಸ್ ಗಳ ಅವಶ್ಯಕತೆ ಇದೆ, ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳು ಇರುವುದಕ್ಕಿಂತ ಬಹಳ ಮುಖ್ಯವಾಗಿ ಗ್ರಾಮೀಣ ಭಾಗಗಳಿಂದ ಪಟ್ಟಣಕ್ಕೆ ವ್ಯಾಸಂಗಕ್ಕೋಸ್ಕರ ಬರುವಾಗ ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಅವರ ಅನುಕೂಲಕ್ಕಾಗಿ ಹೆಚ್ಚು ಬಸ್ ಗಳ ಅವಶ್ಯಕತೆ ಇದೆ ಆದ್ದರಿಂದ ಎರಡು ಕ್ಷೇತ್ರಗಳ ಶಾಸಕರುಗಳ ಸರ್ಕಾರದ ಗಮನ ಸೆಳೆದು ಕೊಳ್ಳೇಗಾಲ ಕೆ. ಎಸ್. ಆರ್. ಟಿ. ಸಿ. ಘಟಕಕ್ಕೆ ಹೊಸ ಬಸ್ ಗಳನ್ನು ಕೊಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಲ್ಲಾ ಉದ್ದೇಶಗಳಿಗೆ ಸರ್ಕಾರ ಹಣ ಖರ್ಚು ಮಾಡುತ್ತಿದೆ ಆದ್ದರಿಂದ ಶಾಸಕರುಗಳು ಮುಂದಿನ ಅಧಿವೇಶನದಲ್ಲಿ ತಮ್ಮ ಕ್ಷೇತ್ರದ ಬಸ್ ಘಟಕಗಳಿಗೆ ಹೊಸ ಬಸ್ ಗಳನ್ನು ಖರೀದಿಸಿ ಕೊಡುವ ವಿಚಾರವಾಗಿ ಚರ್ಚಿಸಿ ಸರ್ಕಾರದ ಗಮನ ಸೆಳೆಯವ ನಿಟ್ಟಿನಲ್ಲಿ ಹಳೆಯ ಬಸ್ ಗಳಿಂದ ಆಗುತ್ತಿರುವ ಮತ್ತು ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಎಂಬುದು ಹಲವರ ಬೇಡಿಕೆಯಾಗಿದೆ





