ಕಾಶಿಮುರುಕನಹಳ್ಳಿ ಡೈರಿ ಕಾರ್ಯದರ್ಶಿ ಬದಲಾಯಿಸಿ ಹೋರಾಟ ಸಮಿತಿ ಸದಸ್ಯರು ಒತ್ತಾಯ
ಕೃಷ್ಣರಾಜಪೇಟೆ:ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿಮುರುಕನಹಳ್ಳಿ ಗ್ರಾಮದಲ್ಲಿ ಬಿ.ಎಂ.ಸಿ.ಕೇಂದ್ರ ಮುಚ್ವುವುದಕ್ಕೆ ಅಲ್ಲಿನ ಕಾರ್ಯದರ್ಶಿಯವರಿಗೆ ಅಗತ್ಯ ವಿದ್ಯಾರ್ಹತೆ ಇಲ್ಲದೇ ಇರುವುದು. ಕಂಪ್ಯೂಟರ್ ಜ್ಞಾನ ಇಲ್ಲದೇ ಇರುವ ಕಾರಣ ಬಿಎಂಸಿ ಕೇಂದ್ರವನ್ನು ತಾತ್ಕಾಲಿಕವಾಗಿ ಮುಚ್ಚಲು ಒಕ್ಕೂಟದ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ಕ್ಷಣದಲ್ಲೂ ಮರು ಚಾಲನೆಗೆ ಅವಕಾಶವಿದೆ. ಬಿಎಂಸಿ ಕೇಂದ್ರ ತಾತ್ಕಾಲಿಕ ಬಂದ್ ಆಗಿರುವುದಕ್ಕೂ ಮನ್ ಮುಲ್ ನಿರ್ದೇಶಕರಾದ ಡಾಲು ರವಿ ಹಾಗೂ ಎಂ.ಬಿ.ಹರೀಶ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಕಾಶಿಮುರುಕನಹಳ್ಳಿ ಡೈರಿ ಕಾರ್ಯದರ್ಶಿ ಬದಲಾಯಿಸಿ ಹೋರಾಟ ಸಮಿತಿ ಸದಸ್ಯರು ಕೃಷ್ಣರಾಜಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ._
_ನಮ್ಮ ಡೈರಿ ಮತ್ತು ಬಿಎಂಸಿ ನಾನು ಕೇಂದ್ರದ ಕಾರ್ಯದರ್ಶಿ ಹುದ್ದೆ ಮಹಿಳೆಗೆ ಮೀಸಲಾಗಿದ್ದು ಮಹಿಳೆಯ ಬದಲು ಅವರ ಪತಿ ಕಾರ್ಯನಿರ್ವಹಿಸುತ್ತಿದ್ದಾರೆ ಇದರಿಂದಾಗಿ ಅವರ ಪತಿಯು ಸೌಜನ್ಯದಿಂದ ವರ್ತಿಸದೇ ಇರುವ ಕಾರಣ ಹಲವು ಗಲಾಟೆಗಳು, ಜಗಳಗಳು ಬಿಸಿಎಂ ಕೇಂದ್ರದಲ್ಲಿ ನಡೆದಿದೆ. ಇದರಿಂದಾಗಿ ಸುಮಾರು 10ಕ್ಕೂ ಪೋಲೀಸ್ ಕೇಸುಗಳು ದಾಖಲಾಗಿವೆ. ಹಾಗಾಗಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಸಾಧ್ಯತೆ ಇರುವ ಕಾರಣ ಕಾರ್ಯದರ್ಶಿ ಬದಲಾಯಿಸಬೇಕು ಎಂದು ಕಳೆದ 4ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು._
*_ವರದಿ: ಸಾಯಿಕುಮಾರ್. ಎನ್. ಕೆ_*











