--ಜಾಹೀರಾತು--

ಮೂಡ ನಂಬಿಕೆಗಳಿಂದ ದೂರ ಇರಬೇಕು… ಡಾ. ನಾಗೇಶ್

On: December 1, 2025 8:21 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ಮೂಡ ನಂಬಿಕೆಗಳಿಂದ ದೂರ ಇರಬೇಕು… ಡಾ. ನಾಗೇಶ್

ದೊಡ್ಡಬಳ್ಳಾಪುರ:ಏಡ್ಸ್ ಸಾಂಕ್ರಾಮಿಕವನ್ನು ಕೊನೆಗೊಳಿಸಲು ನಾಯಕತ್ವ, ಅಂತರಾಷ್ಟ್ರೀಯ ಸಹಕಾರ ಮತ್ತು ಮಾನವ ಹಕ್ಕುಗಳ ಆಧಾರಿತ ವಿಧಾನಗಳನ್ನು ಉತ್ತೇಜಿಸುವುದು ಎಂದು ಪ್ರಭಾರ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ಕೃಷ್ಣ ಲಕ್ಕಾರೆಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು 2025ರ ವಿಶ್ವ ಏಡ್ಸ್ ದಿನಾಚರಣೆಯ ಮುಖ್ಯ ಘೋಷ ವಾಕ್ಯವೆಂದರೆ ಅಡೆತಡೆಗಳನ್ನು ನಿವಾರಿಸುವುದು ಏಡ್ಸ್ ಪ್ರತಿಕ್ರಿಯೆಯನ್ನು ಪರಿವರ್ತಿಸುವುದು ಎಂದರು.

ಎ.ಆರ್‌.ಟಿ ಅಧಿಕಾರಿಗಳಾದ ಡಾ. ನಿರಂಜನ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಏಡ್ಸ್ ಆರಂಭಿಕ ಹಂತದಲ್ಲಿ ಜ್ವರ, ಗಂಟಲು ನೋವು ಸ್ನಾಯು ನೋವು, ಊದಿಕೊಂಡ ದುಗ್ದ್ ರಸ, ಗ್ರಂಥಿಗಳು ಕಂಡು ಬರಬಹುದು, ಏಡ್ಸ್ ಪ್ರಾರಂಭದ ಹಂತದಲ್ಲಿ ತೂಕ ನಷ್ಟ ದೀರ್ಘಕಾಲದ ಅತಿಸಾರ, ತೀವ್ರ ಆಯಾಸ, ರಾತ್ರಿ ಬೆವರುವಿಕೆ ಮತ್ತು ಸಣ್ಣ ಸೋಂಕುಗಳು ಕೂಡ ಗಂಭೀರ ಆಗಬಹುದು ಎಂದರು.
ಡ್ಯಾಪ್ಕೋ ಮತ್ತು ಕ್ಷಯ ವಿಭಾಗದ ಡಾ. ನಾಗೇಶ್ ಎಸ್ ಮಾತನಾಡಿ
ಏಡ್ಸ್ ಕುರಿತಾಗಿ ಮೂಡನಂಬಿಕೆಗಳಿಂದ ದೂರ ಇರಬೇಕು, ಏಡ್ಸ್ ರೋಗವು ಕೀಟಗಳಿಂದ, ಸ್ಪರ್ಶದಿಂದ, ಗಾಳಿ, ನೀರು ಸಾಮಾಜಿಕ ಸಂಪರ್ಕದ ಮೂಲಕ ಹರಡುವುದಿಲ್ಲ, ಏಡ್ಸ್ ರೋಗವು ರಕ್ತ, ವೀರ್ಯ, ಯೋನಿ ಸ್ರಾವ ಮತ್ತು ತಾಯಿಯ ಹಾಲಿನ ಮೂಲಕ ಹರಡುತ್ತದೆ, ನಿಖರವಾದ ಮಾಹಿತಿಯನ್ನು ಪಡೆಯುವುದು ಮತ್ತು ಹರಡುವಿಕೆಯನ್ನು ತಡೆಯುವುದು ಏಡ್ಸ್ ದಿನದ ಮುಖ್ಯ ಉದ್ದೇಶ ಎಂದರು.

ಪ್ರಾಂಶುಪಾಲರಾದ ಡಾ. ಗೌರಪ್ಪ ಎಂ. ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ವಹಿಸಿದ್ದರು.

ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಡಾ. ಚೈತನ್ಯ ಇಂದ್ರಾಣಿ, ಡಾ. ಎಂ. ಚಿಕ್ಕಣ್ಣ, ಶ್ರೀಮತಿ ಜಮುನಾ ಎಲ್. ಕೆ, ಶ್ರೀಮತಿ ಸ್ವಪ್ನ ಎ, ಶ್ರೀ ಹರೀಶ್ ,ಶ್ರೀ ರವೀಶ್, ಶ್ರೀ ಬಾಬು ಎಸ್ ರವರನ್ನು
ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಶಾರದಾ ನಾಗನಾಥ್, ಉಪ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ರಮೇಶ್, ಕಾಲೇಜಿನ ಉಪ ಪ್ರಾಂಶುಪಾಲರಾದ ಕೆ. ದಕ್ಷಿಣ ಮೂರ್ತಿ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಎಂ ಚಿಕ್ಕಣ್ಣ, ವಿಭಾಗದ ಮುಖ್ಯಸ್ಥರುಗಳಾದ ಸಿ.ಪಿ ಪ್ರಕಾಶ್, ಚೈತ್ರ, ಆರ್.ಆರ್.ಸಿ ಮತ್ತು ವೈ.ಆರ್.ಸಿ ಸಂಚಾಲಕರಾದ ಕೀರ್ತನ ಪ್ರಾಧ್ಯಾಪಕರಾದ ದಿವ್ಯ, ಲಕ್ಷ್ಮೀಶ, ಆದೇಶ್, ವರುಣ್, ಸಿಬ್ಬಂದಿಗಳಾದ ರಮೇಶ್, ರವಿ ಮತ್ತಿತರರು ಹಾಜರಿದ್ದರು.