ಅನಾರೋಗ್ಯ ಪೀಡಿತ ದಂಪತಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಮನೆ ಹಸ್ತಾಂತರ
ದೊಡ್ಡಬಳ್ಳಾಪುರ: ತಾಲೂಕಿನ ಕಂಟನ ಕುಂಟೆ
ಪಾಲನ ಜೋಗಹಳ್ಳಿ ಗ್ರಾಮದ ಅನಾರೋಗ್ಯ ಪೀಡಿತ ವೃದ್ದ ದಂಪತಿಗಳಿಗೆ ವಾಸಕ್ಕೆ ಯೋಗ್ಯವಾದ ಮನೆಯನ್ನು ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ಹಸ್ತಾಂತರ ಮಾಡಿದರು
ಗ್ರಾಮದ ಪಂಡರಿನಾಥ್ ರಾವ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ನೋಡಿಕೊಳ್ಳುವವರು ಯಾರು ಇಲ್ಲದ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇವರಿಗೆ ಪ್ರತಿ ತಿಂಗಳು ಮಾಸಾಸನ ರೂಪದಲ್ಲಿ 1000ರುಗಳನ್ನು ಮಾಶಾಸನ ನೀಡಲಾಗುತ್ತಿದೆ.
ಪ್ರಸ್ತುತ ಇದ್ದಂತಹ ಮನೆ ಶಿಥಿಲಾವಸ್ಥೆ ಲ್ಲಿದ್ದು
ಕ್ಷೇತ್ರದ ವತಿಯಿಂದ
ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆ ಇಂದು ನಾಮಫಲಕ ಅನಾವರಣ ಗೊಳಿಸುವ ಮೂಲಕ ಫಲಾನುಭವಿ ಅವರಿಗೆ ಹಸ್ತಾಂತರ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ಜಿಲ್ಲಾ ಉಪಾಧ್ಯಕ್ಷರಾದ ನಾಗೇಶ್ , ಮಹಾಲಿಂಗಯ್ಯ , ರಮೇಶ್, ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ದಿನೇಶ್ , ವಲಯದ ಮೇಲ್ವಿಚಾರಕರಾದ ಗಿರೀಶ್ , ತಾಲೂಕಿನ ಸಮನ್ವಯ ಅಧಿಕಾರಿ ಛಾಯಕುಮಾರಿ ಕಾರ್ಯಕ್ಷೇತ್ರದ ಸೇವಾಪ್ರತಿನಿದಿಗಳು, ಹಾಗೂ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.





