--ಜಾಹೀರಾತು--

ವಿಶ್ವಕರ್ಮರು ಸಂಘಟಿತರಾಗಬೇಕು: ಕೆ.ಪಿ.ನಂಜುಂಡಿ

On: December 1, 2025 8:37 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ವಿಶ್ವಕರ್ಮರು ಸಂಘಟಿತರಾಗಬೇಕು: ಕೆ.ಪಿ.ನಂಜುಂಡಿ

ಚಾಮರಾಜನಗರ: ವಿಶ್ವಕರ್ಮ ಸಮಾಜದ ಜನರು ಸಂಘಟಿತರಾದರೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ಅವರು ತಿಳಿಸಿದರು.
ಕೊಳ್ಳೇಗಾಲದಲ್ಲಿ ನಡೆದ ವಿಶ್ವಕರ್ಮ ಮುಖಂಡರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿ, ನಮ್ಮ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ನಮ್ಮ ಸಮಾಜಕ್ಕೆ ಸರ್ಕಾರದಿಂದ ದೊರೆಯುವ ಸವಲತ್ತುಗಳು ಸಿಗಬೇಕೆಂದರೆ ಪರಿಶಿಷ್ಟ ಪಂಗಡದ ಮೀಸಲಾತಿ ಅತ್ಯವಶ್ಯಕವಾಗಿದೆ. ಆದ್ದರಿಂದ ನಮ್ಮ ಸಮಾಜಕ್ಕೆ ಮೀಸಲಾತಿ ಸಿಕ್ಕಾಗ ಮಾತ್ರ ನಮ್ಮ ಮಕ್ಕಳ ವಿದ್ಯಾಭ್ಯಾಸ,ಉದ್ಯೋಗ ಉಚಿತವಾಗಿ ಸಿಗುತ್ತದೆ ಆದುದರಿಂದ ರಾಜ್ಯದಾದ್ಯಂತ ನಮ್ಮ ಸಮಾಜವು ಸಂಘಟಿತವಾಗಬೇಕು ಹಾಗೂ ತಾಲೂಕು, ಹೋಬಳಿ, ಬೂತ್ ಮಟ್ಟದಿಂದ ಯುವಕರನ್ನು ಸಮಾಜಕ್ಕೆ ಪರಿಚಯಿಸಬೇಕೆಂದು ಸಭೆಯಲ್ಲಿ ಮುಖಂಡರುಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಲಕ್ಷ್ಮಿ ಕೆ.ಪಿ. ನಂಜುಂಡಿ ವಿಶ್ವಕರ್ಮ, ಐಶ್ವರ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಕದಲೂರು ಬಸವರಾಜು, ಮಾಜಿ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಸೌಭಾಗ್ಯ,ರಾಮಚಂದ್ರ, ಲೋಕೇಶ್ , ಯಳಂದೂರಿ ಸೌಭಾಗ್ಯಮ್ಮ ಸೋಮಾಚಾರಿ, ಯಳಂದೂರು ತಾಲೂಕು ಅಧ್ಯಕ್ಷ ಮುಳ್ಳೂರು ಪಿ.ಸಿದ್ದಪ್ಪಾಜಿ, ವಿಶ್ವಕರ್ಮ ಸಮಾಜ ಅಧ್ಯಕ್ಷ ಕೆಪಿ. ಸಿದ್ದಪ್ಪಾಜಿ, ಉಪಾಧ್ಯಕ್ಷ ಶಿವಶಂಕರ್, ಚಾಮರಾಜನಗರ ಮುಖಂಡರಾದ ಮಂಜುನಾಥ್ ವಿಶ್ವಕರ್ಮ, ನಾಗೇಂದ್ರ ವಿಶ್ವಕರ್ಮ, ಯರಗನಹಳ್ಳಿ ಸುಬ್ರಹ್ಮಣ್ಯ, ಹನೂರು ಸಿದ್ದರಾಜು, ಜಗದೀಶ, ರವಿ, ತಮ್ಮಡಹಳ್ಳಿಯ ಲೋಕೇಶ್,ವಾಸು, ಮಹದೇವಸ್ವಾಮಿ, ನಾಗರಾಜಚಾರಿ ರಮೇಶ್,ಪ್ರಸಾದ್, ಶಂಕರ್, ಯಳಂದೂರಿನ ನಾಗರಾಜಚಾರಿ, ಮಾಜಿ ಅಧ್ಯಕ್ಷರಾದ ರವಿ ಕೊಳ್ಳೇಗಾಲ, ರಾಜೇಶ, ಮಂಟೇಸ್ವಾಮಿ ಸೂರ್ಯ ಪ್ರಕಾಶ್, ನಾಗೇಂದ್ರ, ಗೌತಮ್, ಶಾಂತರಾಜು, ಪುಟ್ಟಸ್ವಾಮಿ, ಬಾಪು ನಗರದ ರಾಜೇಶ್ ಟೈಲರ್, ಶ್ರೀಕಂಠ ಸೇರಿದಂತೆ ಇತರರು ಭಾಗವಹಿಸಿದ್ದರು.

ವರದಿ: ಆರ್ ಉಮೇಶ್ ಮಲಾರಪಾಳ್ಯ