ಹನುಮ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ
ಕೊಳ್ಳೇಗಾಲ:ಡಿ 3 ರಂದು ಕೊಳ್ಳೇಗಾಲ ಪಟ್ಟಣದಲ್ಲಿ ನಡೆಯಲಿರುವ ಹನುಮ ಜಯಂತಿ ಅಂಗವಾಗಿ ಪಟ್ಟಣ ಠಾಣೆಯಲ್ಲಿ ಸಿ.ಪಿ.ಐ ಶಿವಮಾದಯ್ಯ ನೇತ್ರತ್ವದಲ್ಲಿ ಪಟ್ಟಣದ ಮುಖಂಡರು ಹಾಗೂ ಹನುಮ ಗೆಳಯ ಬಳಗದ ಸದಸ್ಯರುಗಳ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಲಾಯಿತ್ತು ಪಟ್ಟಣ ಠಾಣಾ ಪಿ.ಎಸ್.ಐ ವರ್ಷ ರವರು ಉಪಸ್ಥಿತರಿರುತ್ತಾರೆ.
ಸಭೆಯಲ್ಲಿ ಸರ್ಕಾಲ್ ಇನ್ಸ್ಪೆಕ್ಟರ್ ಶಿವಮಾದಯ್ಯಮಾತನಾಡಿ ಮಾನ್ಯ ಡಿಜಿ ಸಾಹೇಬರ ಆದೇಶದಂತೆ ಮೆರವಣಿಗೆಯಲ್ಲಿ ಡಿಜೆ ನಿಷೇಧ ಪಟಾಕಿ ನಿಷೇಧ ಮಾಡಲಾಗಿದೆ ಆದ್ದರಿಂದ ಶಾಂತಿಯುತವಾಗಿ ಕಾರ್ಯಕ್ರಮ ಸಾಮರಸ್ಯ ಕಾಪಾಡುವುದು ಯಾವ ಮಾರ್ಗದಲ್ಲಿ ಪರ್ಮಿಷನ್ ಪಡೆದಿರುತ್ತಾರೆ ಅದೇ ಮಾರ್ಗದಲ್ಲಿ ಮೆರವಣಿಗೆ ಸಾಗುವುದು ಸ್ವಯಂಸೇವಕರು ಜಾಗೃತಿ ವಹಿಸಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿರುತ್ತಾರೆ





