‘ನೃತ್ಯ ದರ್ಪಣ್’ – ದಶಮಾಧ್ಯಾಯದ ‘ತಾಳ್ ತರಂಗ್’
ಬೆಂಗಳೂರು:ಕಣ್ಮನ ಸೂರೆಗೊಳ್ಳುವ ‘ತಾಳ್ ತರಂಗ್’ – ಒಂದೇ ವೇದಿಕೆಯ ಮೇಲೆ ವಿವಿಧ ಕಲಾ ಪ್ರಕಾರಗಳ ರಸದೌತಣ ನೀಡುವ ಒಂದು ವಿಶಿಷ್ಟ ಪ್ರಯೋಗ. ಈ ಹೊಸ ಪರಿಕಲ್ಪನೆಯ ಕಾರ್ಯಕ್ರಮವನ್ನು ಬೆಂಗಳೂರಿನ ಕಲಾರಸಿಕರ ಸಮ್ಮುಖ ಅರ್ಪಣೆ ಮಾಡುತ್ತಿರುವವರು ‘ನೃತ್ಯ ದರ್ಪಣ್’ ಅಕಾಡೆಮಿ. ವರ್ಷ ಪೂರ್ತಿ ನಿರಂತರ ಸಕ್ರಿಯರಾಗಿರುವ ಪ್ರಯೋಗಶೀಲ ಕಥಕ್ ನೃತ್ಯಗಾರ್ತಿ ವೀಣಾ ಆರ್. ಭಟ್ ಕಳೆದ ಒಂದೂವರೆ ದಶಕಕ್ಕೂ ಹೆಚ್ಚಿನ ಕಾಲದಿಂದ ‘ನೃತ್ಯದರ್ಪಣ್’ -ಕಥಕ್ ನೃತ್ಯಶಾಲೆಯ ಅರ್ಟಿಸ್ಟಿಕ್ ಡೈರೆಕ್ಟರ್ ಆಗಿ ಉತ್ತಮ ಗುರುವಾಗಿ ಜನಪ್ರಿಯತೆ ಪಡೆದಿದ್ದು, ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಯಶಸ್ವಿಯಾಗಿ ಸಮ್ಮೋಹಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಇವರ ವಿಶಿಷ್ಟ ಪರಿಕಲ್ಪನೆಯ ‘‘ತಾಳ್ ತರಂಗ್’ – ಹತ್ತನೆಯ ಅಧ್ಯಾಯವು ಇದೇ ಡಿಸೆಂಬರ್ ತಿಂಗಳ 7 ನೇ ತಾ. ಭಾನುವಾರ ಸಂಜೆ 4 .30 ಕ್ಕೆ ಜೆ.ಸಿ. ರಸ್ತೆಯ ಎ.ಡಿ.ಎ. ರಂಗಮಂದಿರದಲ್ಲಿ – ವರ್ಣರಂಜಿತ ಕಾರ್ಯಕ್ರಮ ವೈವಿಧ್ಯಪೂರ್ಣ ನೃತ್ಯೋಲ್ಲಾಸದಿಂದ ಕಲಾರಸಿಕರ ಮನಸ್ಸನ್ನು ತಣಿಸಲಿದೆ.
ಈ ಕಾರ್ಯಕ್ರಮದಲ್ಲಿ ಹೆಸರಾಂತ ಕಲಾವಿದರು ಭಾಗವಹಿಸುತ್ತಿದ್ದು, ಅವರು- ಗುರು ವಿ. ಅಕ್ಷರ ಭಾರಧ್ವಾಜ್ ಮತ್ತು ಅವರ ತಂಡ -ಭರತನಾಟ್ಯ ( ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್), ಗುರು ಶ್ವೇತಾ ವೆಂಕಟೇಶ್ – ಕಥಕ್ (ನಿರಂತರ ಸ್ಕೂಲ್ ಬೆಂಗಳೂರುನ್ಸ್), ಗುರು ಕರ್ಪಗಂ ಮತ್ತು ಶಿಷ್ಯರು- ಕುಚಿಪುಡಿ ( ಎಸ್.ಬಿ.ಎಲ್.ಕೆ.ಸಿ ), ಗುರು ಸೋಮಾ ದಾಸ್ ಮತ್ತು ಶಿಷ್ಯರು – ಕಥಕ್ (ನೂಪುರ ಧ್ವನಿ ಡ್ಯಾನ್ಸ್ ಅಕಾಡೆಮಿ), ವಿ.ಶುಭಾ ನಾಗರಾಜನ್ ಮತ್ತು ವಿ. ರಾಧಿಕಾ ಮಕರಂ – ಒಡಿಸ್ಸಿ – ಯುಗಳ ನೃತ್ಯ, ಕಾರ್ತೀಕ್ ತಂತ್ರಿ ಮತ್ತು ತಂಡದವರಿಂದ ಸಮಕಾಲೀನ ನೃತ್ಯ (ಆಬ್ಸ್ಟ್ರಾಟಿಕ್ಸ್ ಕ್ರಿಯೇಟಿವ್ ಡ್ಯಾನ್ಸ್ ಕಂಪೆನಿ), ವಿ. ಗೌರಿ ಸಾಗರ್ ಶಿಷ್ಯರಿಂದ ಭರತನಾಟ್ಯ ಮತ್ತು ವಿ. ವೀಣಾ ಭಟ್ ಮತ್ತು ಸುಚೇತಾ ಶಿಷ್ಯರಿಂದ ಕಥಕ್ ( ಶ್ರೀಕಂಟೇಶ್ವರ ಸ್ಕೂಲ್), ಹಾಗೂ ದಶಮ ಅಧ್ಯಾಯದಲ್ಲಿ ವಿ. ವೀಣಾ ಭಟ್- ಅರ್ಟಿಸ್ಟಿಕ್ ಡೈರೆಕ್ಟರ್ ಅವರಿಂದ ಕಥಕ್ ಮತ್ತು ದಶಮ ಅಧ್ಯಾಯದಲ್ಲಿ ಭರತನಾಟ್ಯ – ಗುರು ಸುನಿತಾ ಎಂ.ಡಿ ಮತ್ತು ಅವರ ಶಿಷ್ಯರಿಂದ ಭರತನಾಟ್ಯ. ವಿಶೇಷ ಕಾರ್ಯಕ್ರಮವಾಗಿ ಡಾ. ರಾಗಶ್ರೀ ಭಾರಧ್ವಾಜ್ ಮತ್ತು ತಂಡದಿಂದ ಕಲೆಗಳ ಉತ್ಸವ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಯಿ ವೆಂಕಟೇಶ್- ಅಧ್ಯಕ್ಷರು- ಕರ್ನಾಟಕ ನೃತ್ಯ ಕಲಾ ಪರಿಷತ್ ಮತ್ತು ಲೇಖಕಿ, ರಂಗಕರ್ಮಿ, ಅಂಕಣಕಾರ್ತಿ ಹಾಗೂ ನೃತ್ಯ- ನಾಟಕ ವಿಮರ್ಶಕಿ ಲಿಪಿಪ್ರಾಜ್ಞೆ ವೈ.ಕೆ.ಸಂಧ್ಯಾ ಶರ್ಮ ಭಾಗವಹಿಸಲಿದ್ದಾರೆ. ರಂಗಗೀತೆಗಳೊಂದಿಗೆ ನಿರೂಪಣೆ ರಂಗ ಮತ್ತು ಚಲನಚಿತ್ರ ನಟಿ ರೋಹಿಣಿ ರಘುನಂದನ್.





