--ಜಾಹೀರಾತು--

*ಜಾತ್ರೆ- ರಥೋತ್ಸವಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬ- ಶಾಸಕ ಹೆಚ್.ಟಿ.ಮಂಜು*

On: December 2, 2025 9:37 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

*ಜಾತ್ರೆ- ರಥೋತ್ಸವಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬ- ಶಾಸಕ ಹೆಚ್.ಟಿ.ಮಂಜು*

ಕೆ.ಆರ್.ಪೇಟೆ,ಡಿ.02: ತಾಲ್ಲೂಕಿನ ಕಸಬಾ ಹೋಬಳಿಯ ಹರಿಹರಪುರ ಗ್ರಾಮದಲ್ಲಿ ಹನುಮಜಯಂತಿ ಅಂಗವಾಗಿ ಗ್ರಾಮದೇವತೆ ಶ್ರೀ ಆಂಜನೇಯಸ್ವಾಮಿಯವರ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.
ಕ್ಷೇತ್ರದ ಶಾಸಕರಾದ ಹೆಚ್.ಟಿ.ಮಂಜು ಮತ್ತು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವರು ರಥೋತ್ಸವಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು ಹಬ್ಬ ಹರಿದಿನಗಳು, ಜಾತ್ರೆ-ರಥೋತ್ಸವಗಳು ನಮ್ಮ ಸಂಸ್ಕೃತಿ ಪರಂಪರೆಯ ಪ್ರತಿಬಿಂಬಗಳಾಗಿವೆ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಎಲ್ಲರೂ ಸೇರಿ ನಮ್ಮ ಹಿರಿಯರು ಆಚರಣೆ ಮಾಡಿಕೊಂಡು ಬರುತ್ತಿರುವ ಹಬ್ಬಗಳನ್ನು, ಜಾತ್ರೆ, ರಥೋತ್ಸವಗಳನ್ನು ಮುನ್ನಡೆಸಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಸಣ್ಣ ಪುಟ್ಟ ಗೊಂದಲಗಳಿಗೆ ಆಸ್ಪದ ಕೊಡದೆ ಎಲ್ಲರೂ ಒಗ್ಗಟ್ಟಿನಿಂದ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಜಾನಪದ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಹೋಗಬೇಕು ಎಂದು ಶಾಸಕರು ಸಲಹೆ ನೀಡಿದರು. ಈ ಭಾರಿ ನಮ್ಮ ಹರಿಹರಪುರ ಗ್ರಾಮದ ಶ್ರೀ ಆಂಜನೇಯಸ್ವಾಮಿ ರಥೋತ್ಸವಕ್ಕೆ ಕೋಡಿಮಠದ ಜಗದ್ಗುರು ಶ್ರೀ ಶ್ರೀ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಭಾಗವಹಿಸಿರುವುದು ಇವರ ಪಾದಸ್ಪರ್ಷದಲ್ಲಿ ತಾಲ್ಲೂಕಿನ ಮಹಾಜನತೆಗೆ ಒಳ್ಳೆಯದಾಗಲಿ, ಮಳೆ ಬೆಳೆ ಚನ್ನಾಗಿ ಆಗಲಿ, ರೈತರು ಸಮೃದ್ದಿಯಾಗಿ ಬೇಸಾಯ ಮಾಡುವಂತಾಗಲಿ ಎಂದು ಶಾಸಕ ಹೆಚ್.ಟಿ.ಮಂಜು ಆಶಯ ವ್ಯಕ್ತಪಡಿಸಿದರು.
ರಥೋತ್ಸವದ ದಿವ್ಯ ಸಾನಿಧ್ಯವನ್ನು ಅರಸೀಕೆರೆ ಹಾರನಹಳ್ಳಿ ಕೋಡಿಮಠದ ಶ್ರೀಗಳು ವಹಿಸಿದ್ದರು. ಸಮಾಜ ಸೇವಕ ಆರ್.ಟಿ.ಓ.ಮಲ್ಲಿಕಾರ್ಜುನ್, ಮಾಜಿ ಸಚಿವ ನಾರಾಯಣಗೌಡ, ಸಾಹಿತಿ ಹೆಚ್.ವಿ.ಗಣೇಶ್, ಮಾಜಿ ಶಾಸಕ ಬಿ.ಪ್ರಕಾಶ್, ತಾಲ್ಲೂಕು ಟಿಎಪಿಸಿಎಂಎಸ್ ಅಧ್ತಕ್ಷ ಬಲದೇವ್, ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರತಿಶ್ರೀಧರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರತೇಜಸ್ವಿ, ಮುಖಂಡರಾದ ಮಹಾದೇವೇಗೌಡ, ಹೆಚ್.ವೈ.ಜಯಕುಮಾರ್, ಬಲರಾಮೇಗೌಡ, ಹರಿಹರಪುರ ನರಸಿಂಹ, ಎಲ್.ಐ.ಸಿ.ನಾರಾಯಣ್ ಸೇರಿದಂತೆ ಸಾವಿರಾರು ಮಂದಿ ಭಕ್ತಾಧಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಕೋಡಿಮಠದ ಶ್ರೀಗಳನ್ನು ಬೆಳ್ಳಿ ಪಲ್ಲಕ್ಕಿಯ ಮೇಲೆ ಗ್ರಾಮದ ರಾಜಬೀದಿಗಳಲ್ಲಿ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಡೊಳ್ಳು ಕುಣಿತ, ವೀರಗಾಸೆ ಕುಣಿತ, ಗೊಂಬೆ ಕುಣಿತ, ಪೂಜಾ ಕುಣಿತ, ಕೋಲಾಟ ಪ್ರದರ್ಶನಗಳು ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ರಂಗನ್ನು ಹೆಚ್ಚಿಸಿದ್ದವು.
ಚಿತ್ರಶೀರ್ಷಿಕೆ:02.ಕೆ.ಆರ್.ಪಿ-01: ಕೆ.ಆರ್.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಹರಿಹರಪುರ ಗ್ರಾಮದಲ್ಲಿ ಹನುಮಜಯಂತಿ ಅಂಗವಾಗಿ ಗ್ರಾಮದೇವತೆ ಶ್ರೀ ಆಂಜನೇಯಸ್ವಾಮಿಯವರ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.