ವಿಜಯಪುರ ಪಟ್ಟಣದ ದೇವನಹಳ್ಳಿ ರಸ್ತೆಯ ವೀರಾಂಜೆನೇಯಸ್ವಾಮಿ ದೇವಾಲಯದಲ್ಲಿ ಇಂದು ಅದ್ದೂರಿ ಹನುಮ ಜಯಂತಿ ಆಚರಣೆ
ವಿಜಯಪುರ:- ಹನುಮ ಜಯಂತಿ (ಹನುಮಾನ್ ವ್ರತ) ಎಂದರೆ ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ 13ನೇ ದಿನದಂದು ಆಚರಿಸಲಾಗುವ ಒಂದು ಉಪವಾಸ ಆಚರಣೆ. ಈ ಹಬ್ಬವನ್ನು ಕರ್ನಾಟಕದಲ್ಲಿ ಹನುಮ ಜಯಂತಿ’ ಎಂದೂ ಕರೆಯುತ್ತಾರೆ ಎಂದು ದೇವಾಲಯದ ಪ್ರಾದಾನ ಅರ್ಚ ಕರಾದ ಲೋಕನಾಥ ಚಾರ್ಯ ಹೇಳಿದರು.
ವಿಜಯಪುರ ಪಟ್ಟಣದ ದೇವನಹಳ್ಳಿ ರಸ್ತೆಯ ವೀರಾಂಜೆನೇಯಸ್ವಾಮಿ ದೇವಾಲಯದಲ್ಲಿ ಇಂದು ಅದ್ದೂರಿ ಹನುಮ ಜಯಂತಿ (ಹನುಮ ವೃತ) ಕಾರ್ಯ ಕ್ರಮದಲ್ಲಿ ಮಾತನಾಡಿ ಈ ದಿನ ವಿಶೇಷವಾಗಿ ಶ್ರೀ ಅಭಯ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಹನುಮಾನ್ ಜಯಂತಿಯ ಪ್ರಯುಕ್ತ 108 ಲೀಟರ್ ಕ್ಷೀರಭಿಷೇಕ ನೆರವೇರಿದ್ದು ಇದು ಭಗವಾನ್ ಹನುಮಂತನ ಅನುಗ್ರಹ ಮತ್ತು ರಕ್ಷಣೆ ಪಡೆಯಲು ಮೀಸಲಾಗಿದೆ. ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಿಸುವುದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಆಧ್ಯಾತ್ಮಿಕ ಏಳಿಗೆ, ರಕ್ಷಣೆ ಮತ್ತು ಕುಟುಂಬ ಕಲ್ಯಾಣವನ್ನು ಒಳಗೊಂಡಿವೆ ಎಂದು ನಂಬಲಾಗಿದೆ ಎಂದರು.
ಕಾರ್ಯ ಕ್ರಮದಲ್ಲಿ ಬೆಂ .ಗ್ರಾಂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಪೂಜಾ ಕಾರ್ಯ ಕ್ರಮದಲ್ಲಿ ಬಾಗವಹಿಸಿದ್ದರು.





