ಕರ್ನಾಟಕ ಪ್ರಾಂತ ಪ್ರಾತ ಕೃಷಿ ಮತ್ತು ಗ್ರಾಮೀಣ ನರೇಗಾ ಕೂಲಿ ಕೂಲಿಕಾರ್ಮಿಕರ ಪ್ರತಿಭಟನೆ 
ಕೆ.ಆರ್.ಪೇಟೆ:ತಾಲ್ಲೂಕು ಕರ್ನಾಟಕ ಪ್ರಾಂತ ಕೃಷಿ ಮತ್ತು ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಪದಾಧಿಗಳು ಹಾಗೂ ಸದಸ್ಯರು ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು, ತಾಲ್ಲೂಕು ಘಟಕದ ಅಧ್ಯಕ್ಷ ಗಂಗೇನಹಳ್ಳಿ ಗಿರೀಶ್ ನೇತೃತ್ವದಲ್ಲಿ ಸಾವಿರಾರು ಕೃಷಿ ಕೂಲಿಕಾರ್ಮಿಕರು ಪಟ್ಟಣದ ತಾಲ್ಲೂಕು ಪಂಚಾಯತ್ ಕಚೇರಿ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಪ್ರಾಂತ ಪ್ರಾತ ಕೃಷಿ ಮತ್ತು ಗ್ರಾಮೀಣ ನರೇಗಾ ಕೂಲಿ ಕೂಲಿಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ಅವರು ಮಾತನಾಡಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದಿನಕ್ಕೆ ಕನಿಷ್ಠ 600ರೂ ಕೂಲಿ ನಿಗದಿ ಮಾಡಬೇಕು. ವಾರ್ಷಿಕ 200ಮಾನವ ದಿನಗಳ ಕಾಲ ಕೂಲಿ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಬೆಳಿಗ್ಗೆ, ಸಂಜೆ ಎಂ ಎಂ ಎಸ್ ಹಾಜರಾತಿಯನ್ನು ರದ್ದು ಮಾಡಬೇಕು. ನರೇಗಾ ಕೂಲಿ ಮಾಡುವ ಕಾರ್ಮಿಕರಿಗೆ ಸ್ಥಳದಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸೆ, ಪ್ರಯಾಣ ಭತ್ಯೆ ನೀಡಬೇಕು. ಹಿರಿಯ ನಾಗರೀಕರಿಗೆ ಹಾಗೂ ಮಹಿಳೆಯರಿಗೆ ಶೇ.10 ಕಾಮಗಾರಿ ಮಾಡುವುದರಿಂದ ರಿಯಾಯಿತಿ ನೀಡಬೇಕು. ಕೂಲಿ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಬೇಕು. ಕಡಿಮೆ ಕೂಲಿ ಹಾಕಿರುವ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಇಂಜಿನಿಯರ್ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಜೆಸಿಬಿ ಯಂತ್ರಗಳಿಂದ ಕೆಲಸ ಮಾಡುವುದನ್ನು ರದ್ದು ಮಾಡಬೇಕು. ಜಾಬ್ ಕಾರ್ಡ್ ಹೊಂದಿರುವ ಎಲ್ಲರಿಗೂ ಕೆಲಸ ನೀಡಿ ಕೂಲಿ ಹಣವನ್ನು ಸಕಾಲಕ್ಕೆ ಖಾತೆ ಜಮಾ ಮಾಡಬೇಕು ಎಂದು ಒತ್ತಾಯ ಮಾಡಿದರು.
ಕಡಿಮೆ ಕೂಲಿ ಹಾಕಿರುವ ನರೇಗಾ ಇಂಜಿನಿಯರ್ ಪಾರ್ಥ, ಲಕ್ಷ್ಮೀಪುರ ಪಿಡಿಓ ಸುರೇಶ್ ಬಾಬು ಅವರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಕೆ.ವಿನೋದ್ ಕುಮಾರ್ ಅವರನ್ನು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಂತ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಶಿವಮಲ್ಲು, ಜಿಲ್ಲಾ ಕಾರ್ಯದರ್ಶಿ ಹಮುಮೇಶ್, ಜಿಲ್ಲಾ ಉಪಾಧ್ಯಕ್ಷ ಎನ್.ಸುರೇಂದ್ರ, ತಾಲ್ಲೂಕು ಅಧ್ಯಕ್ಷ ಹೆಚ್.ಗಿರೀಶ್, ಕಾರ್ಯದರ್ಶಿ ಗೋಪಾಲ್, ಉಪಾಧ್ಯಕ್ಷ ಸುರೇಶ್, ಸಂಘಟನಾ ಕಾರ್ಯದರ್ಶಿ ಜಾಹೀರ್ , ಮಂಡ್ಯ ತಾಲ್ಲೂಕು ಅಧ್ಯಕ್ಷ ಅಮಾಸಣ್ಣ, ಮದ್ದೂರು ಅರುಣ್‌ಕುಮಾರ್, ಅಬ್ದುಲ್, ನಂದೀಶ್, ಸಿದ್ದಯ್ಯಮತ್ತಿತರರು ಸೇರಿದಂತೆ ಸುಮಾರು 1000ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಧ್ಯಾಹ್ನ ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನಂತರ ನರೇಗಾ ಸಹಾಯಕ ನಿರ್ದೇಶಕ ಕೆ.ವಿನೋದ್ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಸೂಕ್ತ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದರು.





