ಹಾರೋಹಳ್ಳಿ ಪಂಚಾಯ್ತಿ ಅಧ್ಯಕ್ಷರಾಗಿ ಮಂಜುಳಮ್ಮ ಉಪಾಧ್ಯಕ್ಷರಾಗಿ ಮಂಜುಳ ಅವಿರೋಧ ಆಯ್ಕೆ
ದೇವನಹಳ್ಳಿ:ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕು ಹಾರೋಹಳ್ಳಿ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಎಸ್. ಮಂಜುಳಮ್ಮ ಅಧ್ಯಕ್ಷರಾಗಿ ಆಯ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳ ಅವರು ಅವಿರೋಧ ವಾಗಿ ಆಯ್ಕೆಯಾದರು.
ಚುನಾಯಿತರನ್ನು ಸನ್ಮಾನಿಸಿದ ದಿನ್ನೂರು ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಪೂರೈಕೆ ಸಚಿವರಾದ ಕೆಎಚ್ ಮುನಿಯಪ್ಪ ಅವರು ತಾಲೂಕಿನ ಅಭಿವೃದ್ಧಿಗಾಗಿ ನಾನಾ ಯೋಜನೆಗಳ ಮೂಲಕ ಅನುದಾನಗಳನ್ನು ತರುವ ಮೂಲಕ ಕ್ಷೇತ್ರದ ಸರ್ವತೋಮುಖ ಅಭಿವೃ ದ್ಧಿಗೆ ಶ್ರಮಿಸುತಿದ್ದಾರೆಂದರು.
ಕಾಂಗ್ರೆಸ್ ಯುವ ಮುಖಂಡ ರಘು ಅವರು ಮಾತ ನಾಡಿ, ಹಾರೋಹಳ್ಳಿ ಗ್ರಾಮ ಪಂಚಾಯತಿ ನೂತನ ಕಟ್ಟಡ ಅಭಿವೃದ್ಧಿಗೆ ಸಚಿವರು ಹೆಚ್ಚಿನ ಸಹಕಾರ ನೀಡಿ ದ್ದಾರೆ ಅವರ ಮಾರ್ಗದರ್ಶನದಂತೆ ಮುಂಬರುವ ತಾಲೂಕು ಪಂಚಾಯತಿ ಜಿಲ್ಲಾ ಪಂಚಾಯತಿ ಚುನಾ ವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್ ಆರ್. ರವಿಕುಮಾರ್, ಚನ್ನಹಳ್ಳಿ ರಾಜಣ್ಣ, ಅನಂತಕುಮಾರಿ
ಚಿನ್ನಪ್ಪ, ರಘು, ರಾಮಚಂದ್ರಪ್ಪ, ಅಮರ್ ನಾಥ್, ತಿಮ್ಮಹಳ್ಳಿ ಅಶ್ವತಪ್ಪ, ತಾ. ಪಂ. ಚೖತ್ರ ವೀರೇಗೌಡ, ನಟರಾಜು, ರಾಜೇಶ್, ಚಿಕ್ಕನಹಳ್ಳಿ ವೆಂಕಟೇಶ್, ಯಲಿಯೂರು ಸುನೀಲ್, ಗೊಡ್ಲು ಮುದ್ದೇನಹಳ್ಳಿ ಮುನಿರಾಜು, ಹಾರೋಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಮ, ಮನೋಹರ್, ಸತೀಶ್, ಶಂಕರ್, ಶ್ರೀನಿವಾಸ್, ನರಸಮ್ಮ, ಹರೀಶ್, ಬುಳ್ಳಹಳ್ಳಿ ಮಂಜುಳ, ಗ್ರಾಮ ಸ್ಥರು ಹಾಜರಿದ್ದರು.





