ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಎಸ್.ಮಂಜುಳಾ, ಉಪಾಧ್ಯಕ್ಷೆಯಾಗಿ ಮಂಜುಳಮ್ಮ ಆಯ್ಕೆ 
ವಿಜಯಪುರ: ವಿಜಯಪುರ ಹೋಬಳಿ, ಹಾರೋಹಳ್ಳಿ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ, ಅಧ್ಯಕ್ಷರಾಗಿ ಎಸ್.ಮಂಜುಳಾ ಅವರು, 8 ಮತಗಳು ಪಡೆದು ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಬುಳ್ಳಹಳ್ಳಿಯ ಮಂಜುಳಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಧನಂಜಯ ಅವರು ಘೋಷಣೆ ಮಾಡಿದರು.
ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಒಟ್ಟು 12 ಮಂದಿ ಸದಸ್ಯರು ಹಾಜರಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಎಸ್.ಮಂಜುಳಾ, ಹಾಗು ಎನ್.ಮಂಜುಳಾ ಅವರು, ನಾಮಪತ್ರಗಳು ಸಲ್ಲಿಸಿದ್ದರು. ಎಸ್.ಮಂಜುಳಾ ಅವರಿಗೆ 8 ಮತಗಳು ಬಂದಿದ್ದು, ಎನ್.ಮಂಜುಳಾ ಅವರಿಗೆ 4 ಮತಗಳು ಬಂದಿವೆ.
ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಮ್ಮ ಅವರು ಮಾತ್ರ ನಾಮಪತ್ರವನ್ನು ಸಲ್ಲಿಸಿದ್ದರಿಂದ ಅವರು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
————————————————————————–
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿ ಆಯ್ಕೆಯಾಗಿ, ಅಧ್ಯಕ್ಷ ಸ್ಥಾನಕ್ಕೆ, ಪಕ್ಷ ಬೆಂಬಲಿತ ಅಭ್ಯರ್ಥಿಯಾಗಿದ್ದ ಎಸ್.ಮಂಜುಳಾ ಅವರ ವಿರುದ್ಧವೇ ಸ್ಪರ್ಧಿಸಿ 4 ಮತಗಳು ಪಡೆದುಕೊಂಡಿರುವ ಸದಸ್ಯೆ ಎನ್.ಮಂಜುಳಾ ಅವರ ಪಕ್ಷ ವಿರೋಧಿ ಚಟುವಟಿಕೆಗೆ, ಪಕ್ಷದ ಜಿಲ್ಲಾಧ್ಯಕ್ಷರ ನಿರ್ದೇಶನದ ಮೇರೆಗೆ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ಹೇಳಿದರು.
ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷೆ, ಉಪಾಧ್ಯಕ್ಷೆಯನ್ನು ಕೆಪಿಸಿಸಿ ಕಾರ್ಯದರ್ಶಿ ವಿ ಮಂಜುನಾಥ್, ಹಾರೋಹಳ್ಳಿ ರಘು, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್, ಎಸ್.ಆರ್.ರವಿಕುಮಾರ್, ಬಯಪಾ ನಿರ್ದೇಶಕ ವಿ.ರಾಮಚಂದ್ರಪ್ಪ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿಚಿನ್ನಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಚೈತ್ರಾವೀರೇಗೌಡ, ವಿಜಯಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವೀರೇಗೌಡ, ಮಾಜಿ ಸದಸ್ಯೆ ಅನ್ನಪೂರ್ಣಚಂದ್ರಪ್ಪ, ಚೀಮಾಚನಹಳ್ಳಿ ರಾಮಚಂದ್ರಪ್ಪ, ಭುವನಹಳ್ಳಿ ಮುನಿರಾಜು, ಬಿಜ್ಜವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನೇಗೌಡ, ಕೋರಮಂಗಲ ಪಂಚಾಯಿತಿ ಅಧ್ಯಕ್ಷ ಧನಂಜಯ, ಧರ್ಮಪುರ ಕೃಷ್ಣಪ್ಪ, ಯಲುವಹಳ್ಳಿ ನಟರಾಜ್. ವೆಂಕಟಗಿರಿಕೋಟೆ ಆರ್.ಅಮರನಾಥ್, ತಿಮ್ಮಹಳ್ಳಿಮನೋಹರ್, ಚಿಕ್ಕನಹಳ್ಳಿ ಸುಭ್ರಮಣಿ, ಗೊಡ್ಲುಮುದ್ದೇನಹಳ್ಳಿ ಮುನಿರಾಜು, ಹಾರೋಹಳ್ಳಿ ಚಂದ್ರಪ್ಪ, ಚಿಕ್ಕನಹಳ್ಳಿ ಸೀನಪ್ಪ, ಗುತ್ತಿಗೆದಾರ ಚಿಕ್ಕನಹಳ್ಳಿ ವೆಂಕಟೇಶಪ್ಪ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಶುಭ ಹಾರೈಸಿದರು.
08.ವಿಜಯಪುರ 01: ವಿಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿರುವ ಆಯ್ಕೆಯಾಗಿರುವ ಎಸ್.ಮಂಜುಳಾ ಹಾಗೂ ಉಪಾಧ್ಯಕ್ಷೆ ಮಂಜುಳಮ್ಮ ಅವರನ್ನು ಮುಖಂಡರು ಅಭಿನಂದಿಸಿದರು.





