*ನಿವೃತ್ತ ಇಂಜಿನಿಯರ್ ಹೆಚ್.ವಿ.ಗಣೇಶ್ ನಿಧನ*
ಕೆ.ಆರ್.ಪೇಟೆ: ತಾಲ್ಲೂಕಿನ ಹರಿಹರಪುರ ಗ್ರಾಮದ ನಿವಾಸಿಗಳಾದ ನಿವೃತ್ತ ಇಂಜಿನಿಯರ್ ಹೆಚ್.ವಿ.ಗಣೇಶ್(78) ಅವರು ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಮಣಿಪಾಲ್ ಆಸ್ಪತ್ರೆಯ ಕೀಲು- ಮೂಳೆ ತಜ್ಞ ವೈದ್ಯ ಡಾ.ಹೆಚ್.ಜಿ.ರವಿಕಿರಣ್ ಸೇರಿದಂತೆ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಪಾರ್ಥೀವ ಶರೀರವನ್ನು ಮೈಸೂರಿನ ಶಿವರಾತ್ರೇಶ್ವರನಗರದಲ್ಲಿರುವ ಮೃತರ ನಿವಾಸದಲ್ಲಿ ಬುಧವಾರ ಬೆಳಿಗ್ಗೆ 8ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. ಅನಂತರ ಅಂತ್ಯಕ್ರಿಯೆಯನ್ನು ಡಿ.10ರಂದು ಬುಧವಾರ ಮಧ್ಯಾಹ್ನ 1ಗಂಟೆಗೆ ಹುಟ್ಟೂರು ಹರಿಹರಪುರ ಗ್ರಾಮದಲ್ಲಿ ನೆರವೇರಿಸಲಾಗುವುದು. ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತ ಹೆಚ್.ವಿ. ಗಣೇಶ್ ಅವರು ನಾಟಕ ರಚನೆಕಾರರಾಗಿ ಹಲವು ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ರಚಿಸಿ ನಿರ್ದೇಶನ ಮಾಡಿರುತ್ತಾರೆ. ನಾಟಕಗಳಲ್ಲಿ ತಾವೂ ಸಹ ರಂಗಭೂಮಿ ಕಲಾವಿದರಾಗಿ ಅಭಿನಯಿಸಿದ್ದಾರೆ. ಸಾಹಿತಿಗಳಾಗಿ ಹಲವು ಪುಸ್ತಕಗಳನ್ನು ಬರೆದು ಪ್ರಕಟಣೆ ಮಾಡಿರುತ್ತಾರೆ . ಶ್ರೀಯುತ ಗಣೇಶ್ ಅವರು ನೀರಾವರಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳಲ್ಲಿ ಸುಮಾರು 35ವರ್ಷಗಳ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ಉತ್ತಮ ಹೆಸರು ಪಡೆದಿದ್ದರು.
ನಿವೃತ್ತಿಯ ನಂತರ ಮೈಸೂರಿನ ಶಿವರಾತ್ರೇಶ್ವರ ನಗರದಲ್ಲಿ ಕುಟುಂಬ ಸಮೇತ ವಾಸವಿದ್ದರು. ಮೈಸೂರಿನಲ್ಲಿರುವ ಕೆ.ಆರ್.ಪೇಟೆ ತಾಲ್ಲೂಕು ಮೈಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾಗಿ ಸಂಘಟನೆಯಲ್ಲಿಯೂ ತೊಡಗಿಸಿಕೊಂಡಿದ್ದರು.
ಮೃತರ ನಿಧನಕ್ಕೆ ತಾಲ್ಲೂಕಿನ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.





