ದೇಶದ ಷೇರು ಮಾರುಕಟ್ಟೆ ನಿರಂತರ ಕುಸಿತ: ಮಧ್ಯಮ ವರ್ಗದ ಕನಸುಗಳಿಗೆ ಕೊಳ್ಳಿ ಇಟ್ಟ ಕೇಂದ್ರ ಬಿಜೆಪಿ ಸರ್ಕಾರ
ದೇವನಹಳ್ಳಿ:- ದೇಶದ ಶೇರು ಮಾರುಕಟ್ಟೆ ನಿರಂತರ ಕುಸಿತದಿಂದ ಮಧ್ಯಮ ವರ್ಗದ ಕನಸುಗಳಿಗೆ ಕೊಳ್ಳಿ ಯಿಟ್ಟ ಏಕೈಕ ಸರ್ಕಾರವಿದ್ದರೆ ಅದು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವಾಗಿದೆ ಕೆಪಿಸಿಸಿ ಸದಸ್ಯ ಚಿನ್ನಪ್ಪ ಟೀಕಿಸಿದರು.
ದೇವನಹಳ್ಳಿ ತಾಲೂಕಿನ ಕೋರಮಂಗಲದಲ್ಲಿ ನಡೆದ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ಚೆನ್ನೇಗೌಡ ಉಪಾಧ್ಯಕ್ಷ ಸ್ಥಾನಕ್ಕೆ ಕನಕರತ್ನಮ್ಮ ಅವರು ಚುನಾವಣೆ ನಡೆದಿದ್ದು ಅವಿರೋಧವಾಗಿ ಆಯ್ಕೆಯಾದವರನ್ನು ಅಭಿನಂದಿ ಸಿದ ನಂತರ ಮಾತನಾಡಿ, ದೇವನಹಳ್ಳಿ ತಾಲೂಕಿನಲ್ಲಿ ಆದಾಯ ಮೂಲಗಳಿದ್ದ ಗ್ರಾಮ ಪಂಚಾಯಿತಿಗಳಲ್ಲಿ ಕೋರಮಂಗಲ ಕೂಡ ಒಂದಾಗಿದೆ ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪ ಅವರಲ್ಲಿ ಒತ್ತಡ ತರುತ್ತೇವೆ.
ದೇಶದಲ್ಲಿ ಮಾನವ ಸಂಪನ್ಮೂಲ ಕೊರತೆ ಎದುರಿಸು ತ್ತಿದ್ದು ಉದ್ಯೋಗವಕಾಶಗಳು ಕಡಿತ ಮಾಡಿದ್ದಲ್ಲದೇ ನಿರು ದ್ಯೋಗ, ಬಡತನ ದೇಶದಾದ್ಯಂತ ಜನ ಸಾಮಾ ನ್ಯರನ್ನು ಕಾಡುತ್ತಿದ್ದು, ಇತ್ತೀಚೆಗೆ ನಡೆದ ಬಿಹಾರ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ನಿಂದ ಅಲ್ಲಿನ ಮತದಾರರ ಹಕ್ಕನ್ನು ಕಸಿಯುವ ಮೂಲಕ ಕುತಂತ್ರ ದಿಂದ ಚುನಾವಣೆ ಎದುರಿಸಿ ಅಧಿಕಾರದ ಅಮಲಿನಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ತೇಲಾಡುತ್ತಿರುವುದು ಖಂಡನೀಯ.
ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ 8.5 ರಷ್ಟು ಷೇರು ಮಾರುಕಟ್ಟೆ ಏರಿಕೆಯಲ್ಲಿತ್ತು ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ 0.90ರಷ್ಟು ರೂಪಾಯಿ ಮೌಲ್ಯ ಕುಸಿದಿರು ವುದು ಪ್ರಧಾನಿಗಳ ಅಜ್ಞಾನದ ಕೊರತೆ ಎಂದು ದೂರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನ್ನೂರು ವೆಂಕಟೇಶ್ ಮಾತನಾಡಿ ಕೋರಮಂಗಲ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಪಂಚಾಯಿತಿಯ ಅಭಿವೃದ್ಧಿಗೆ ಶ್ರಮಿಸಬೇಕು ಗ್ರಾಮಸ್ಥರ ಸೇವೆ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಮುಂದಿನ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯತಿಗಳಿಗೆ ಸ್ಪರ್ಧೆ ಮಾಡುವ ಆಕಾಂಕ್ಷಿ ಗಳಿಗೆ ಮುಂದಿನ ಭವಿಷ್ಯವಿದೆ ಎಂದು ಸಲಹೆ ನೀಡಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಹಾರೋಹಳ್ಳಿ ಚಂದ್ರಪ್ಪ, ವೆಂಕಟಗಿರಿಕೋಟಗ ಗ್ರಾಮ ಪಂಚಾ ಯಿತಿ ಮಾಜಿ ಅಧ್ಯಕ್ಷ ಅಮರ್ ನಾಥ್, ಕೋರ ಮಂಗಲ ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್ ಕುಮಾರ್, ಪುಷ್ಪ ಶಿವರಾಜು, ಮಂಜುಳಾ ಅಂಬ ರೀಶ್, ಗಾಯಿತ್ರಿ ತಿಲಕ್, ಗ್ರಾಮದ ಮುಖಂಡ ರಾದ ಚಿನ್ನಪ್ಪ ವೆಂಕಟೇಶ್ ಬೈರಪ್ಪ ರಮೇಶ್ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.





