--ಜಾಹೀರಾತು--

*ಕನ್ನಡ ನಾಡು-ನುಡಿ, ನೆಲ-ಜಲದ ಸಂರಕ್ಷಣೆ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ನಿರ್ಮೂಲನೆಗೆ ಜಯ ಕರ್ನಾಟಕ ಸಂಘಟನೆಯು ಬದ್ಧತೆಯಿಂದ ಹೋರಾಟ ಮಾಡುತ್ತಿದೆ __ಡಾ.ಜಗದೀಶ್ *

On: December 16, 2025 6:00 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

*ಕನ್ನಡ ನಾಡು-ನುಡಿ, ನೆಲ-ಜಲದ ಸಂರಕ್ಷಣೆ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ನಿರ್ಮೂಲನೆಗೆ ಜಯ ಕರ್ನಾಟಕ ಸಂಘಟನೆಯು ಬದ್ಧತೆಯಿಂದ ಹೋರಾಟ ಮಾಡುತ್ತಿದೆ __ಡಾ.ಜಗದೀಶ್ *

ಕೃಷ್ಣರಾಜಪೇಟೆ:ಕನ್ನಡ ನಾಡು-ನುಡಿ, ನೆಲ-ಜಲದ ಸಂರಕ್ಷಣೆ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ನಿರ್ಮೂಲನೆಗೆ ಜಯ ಕರ್ನಾಟಕ ಸಂಘಟನೆಯು ಬದ್ಧತೆಯಿಂದ ಹೋರಾಟ ಮಾಡುತ್ತಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಜಗದೀಶ್ ಹೇಳಿದರು.ಅವರು ಕೃಷ್ಣರಾಜಪೇಟೆ ಪಟ್ಟಣದ ಪುರಸಭಾ ಕಾರ್ಯಾಲಯದ ಪಕ್ಕದ ಮೈದಾನದಲ್ಲಿ ಜಯ ಕರ್ನಾಟಕ ಸಂಘಟನೆ ಆಯೋಜಿಸಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ನಿವೃತ್ತ ಯೋಧರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಿ, ಗೌರವಿಸಿ ಮಾತನಾಡಿದರು._

_ಕರ್ನಾಟಕ ರಾಜ್ಯದ ಹೆಮ್ಮೆಯ ಕನ್ನಡಪರ ಸಂಘಟನೆ ಯಾಗಿರುವ ಜಯ ಕರ್ನಾಟಕ ಸಂಘಟನೆಯು ಅಣ್ಣಾ ಮುತ್ತಪ್ಪ ರೈ ಅವರ ನೇತೃತ್ವದಲ್ಲಿ ಆರಂಭವಾಗಿ, ಬದ್ಧತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾ, ಕನ್ನಡ ಭಾಷೆ, ನೆಲ ಜಲ ಹಾಗೂ ಸಂಸ್ಕೃತಿಯನ್ನು ಉಳಿಸುವ ದಿಕ್ಕಿನಲ್ಲಿ ನಾಡಿನಾದ್ಯಂತ ಹೋರಾಟ ನಡೆಸುತ್ತಿದೆ. ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ದಿಕ್ಕಿನಲ್ಲಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಬದ್ಧತೆಯಿಂದ ಹೋರಾಟ ನಡೆಸಿದ್ದಾರೆ ಎಂದು ತಿಳಿಸಿದ ಡಾ. ಜಗಧೀಶ್ ಕನ್ನಡದ ನೆಲದಲ್ಲಿ ವಾಸಿಸುವ ಅನ್ಯ ಭಾಷಿಕರು ಕನ್ನಡವನ್ನು ಕಲಿತು, ಕನ್ನಡ ಭಾಷೆಯನ್ನು ಕಲಿತು ಕನ್ನಡದಲ್ಲಿಯೇ ವ್ಯವಹರಿಸ ಬೇಕು ಎಂಬ ಸಂದೇಶವನ್ನು ನೀಡುವ ಜೊತೆಗೆ, ಕನ್ನಡ ನೆಲ ಜಲ, ಭಾಷೆ ಹಾಗೂ ಸಂಸ್ಕೃತಿಗೆ ಧಕ್ಕೆ ಉಂಟಾದ ಸಮಯದಲ್ಲಿ ಯಾವುದೇ ಹೋರಾಟಕ್ಕೆ ನಮ್ಮ ಸಂಘಟನೆಯ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಂತೆ ಸನ್ನದ್ಧರಾಗಿದ್ದಾರೆ ಎಂದು ಜಗದೀಶ್ ಹೇಳಿದರು. ಕನ್ನಡದ ನೆಲದಲ್ಲಿ ಯಾವುದೇ ರೀತಿಯ ಗಲಾಟೆ ಗದ್ದಲಗಳು ನಡೆಯದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಿರುವ ಪೊಲೀಸರು ಅಕಾಲಿಕವಾಗಿ ನಿಧನರಾದರೆ ರಾಜ್ಯ ಸರ್ಕಾರವು ಕೇವಲ 20 ಲಕ್ಷ ರೂಗಳ ಪರಿಹಾರವನ್ನು ನೀಡುತ್ತಿತ್ತು. ಆದರೆ ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ನಾವು ಹೋರಾಟ ನಡೆಸಿದ ನಂತರ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿಗಳನ್ನು ನೀಡುವುದನ್ನು ಜಾರಿಗೆ ತಂದಿದೆ ಇದು ಜಯ ಕರ್ನಾಟಕ ಸಂಘಟನೆಯ ಹೋರಾಟದ ಶಕ್ತಿ. ನಮ್ಮ ನೆಲ, ಜಲ ಹಾಗೂ ಭಾಷೆಗೆ ವಿಪತ್ತು ಎದುರಾದ ಸಂದರ್ಭದಲ್ಲಿ ನಾವು ಯಾವುದೇ ಹೋರಾಟ ಹಾಗೂ ತ್ಯಾಗ, ಬಲಿದಾನಕ್ಕೆ ಸಿದ್ಧರಾಗಿದ್ದೇವೆ ಎಂದು ಡಾ. ಜಗಧೀಶ್ ಗುಡುಗಿದರು._

_ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಪನಹಳ್ಳಿ ಗವಿಮಠದ ಪೂಜ್ಯ ಸ್ವಾಮಿಗಳಾದ ಶ್ರೀಸ್ವತಂತ್ರ ಚನ್ನವೀರಯ್ಯ ಸ್ವಾಮೀಜಿ, ತೊಂಡೆಕಾಯಿ ಬಾಳೆಹೊನ್ನೂರು ಶಾಖ ಮಠದ ಪೂಜ್ಯ ಸ್ವಾಮೀಜಿಗಳಾದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೆಡದಹಳ್ಳಿಯ ಪಂಚಭೂತೇಶ್ವರ ಮಠದ ಸ್ವಾಮೀಜಿಗಳಾದ ಶ್ರೀ ರುದ್ರಮುನಿ ಸ್ವಾಮೀಜಿ ಅವರು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಆದಿಚುಂಚನಗಿರಿ ಯ ಹೇಮಗಿರಿ ಶಾಖಾಮಠದ ಗೌರವ ಕಾರ್ಯದರ್ಶಿಗಳಾದ ಡಾ.ಜೆ.ಎನ್.ರಾಮಕೃಷ್ಣೇಗೌಡ, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ರಾಜ್ಯ ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಎ.ಬಿ. ಕುಮಾರ್, ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ, ಜಯಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಗೌರವಾಧ್ಯಕ್ಷ ಮುನಿಸ್ವಾಮಿ, ರಾಜ್ಯ ಉಪಾಧ್ಯಕ್ಷ ವಿಜಯಾ ಗೌಡ, ಮಂಡ್ಯ ಜಿಲ್ಲಾಧ್ಯಕ್ಷ ಡಾ. ಯೋಗಣ್ಣ, ಹಾಸ್ಯ ನಟರಾದ ಟೆನ್ನಿಸ್ ಕೃಷ್ಣ, ಕಿರುತೆರೆ ಕಲಾವಿದರಾದ ಶಿವಣ್ಣ, ಚಾರ್ಲಿ ಕುಮಾರ್, ನಂದೀಶ್, ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ ಗೌಡ, ತಾಲೂಕು ಯುವ ಘಟಕದ ಅಧ್ಯಕ್ಷ ಕಾಮನಹಳ್ಳಿ ಕೆ. ಎಲ್.ಮಹೇಶ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸರಸ್ವತಿ, ರತ್ನಮ್ಮ, ಮಧು, ಕುಮಾರ್ ಸೇರಿದಂತೆ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು._

_ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ಡಾ. ಪ್ರಶಾಂತ್ ಚಕ್ರವರ್ತಿ, ವಡಕಹಳ್ಳಿ ಮಂಜೇಗೌಡ, ಮಿಲ್ಟ್ರಿ ಸುಕುಮಾರ್, ಡಾ.ಶ್ರೀಕಾಂತ್, ಡಾ.ಕಾವ್ಯ, ಪತ್ರಕರ್ತ ಕಾಡು ಮೆಣಸ ಚಂದ್ರು ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದ್ದರು. ತುಮಕೂರಿನ ದರ್ಶನ್ ಮೆಲೋಡೀಸ್ ಸುಗಮ ಸಂಗೀತ ತಂಡದ ಗಾಯಕರು ಗೀತ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು._
*_ವರದಿ: ಸಾಯಿಕುಮಾರ್. ಎನ್. ಕೆ_*

 

Read this too

*ಜಯಕರ್ನಾಟಕ ಸಂಘಟನೆಯು ಕನ್ನಡ ನಾಡು-ನುಡಿ, ನೆಲ-ಜಲ ಸಂರಕ್ಷಣೆಗೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದೆ* ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್

ಭರವಸೆಯ ನೃತ್ಯಕಲಾವಿದೆ ವಿದಿತಾ ನವೀನ್ ರಂಗಪ್ರವೇಶ

ಗೋಮಾಳ ಒತ್ತುವರಿ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಪಂಚ ಗ್ಯಾರೆಂಟಿ ಯೋಜನೆ ಫಲಾನುಭವಿಗಳ ಕುಂದು ಕೊರತೆ ಸಭೆ ಮಹಿಳಾ ಸಬಲೀಕರಣ ಆರ್ಥಿಕ ಪರಿಸ್ಥಿತಿ ಸುಧಾರಣೆ – ಚಿಕ್ಕ ಹುಲ್ಲೂರು ಬಚ್ಚೇಗೌಡ

ಮಕ್ಕಳ ವಾಕ್ ಮತ್ತು ಶ್ರವಣ ಸಮಸ್ಯೆ ಪರಿಹರಿಸುವ ಪ್ರಯಾಸ್ ಯೋಜನೆ ರಾಜ್ಯದಲ್ಲೇ ಮಾದರಿ : ಜಿಲ್ಲಾಧಿಕಾರಿ ಶಿಲ್ಪಾ ನಾಗ್

*ಭಾರತ ಸರ್ಕಾರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವರು ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹುಟ್ಟು ಹಬ್ಬದ ಅಂಗವಾಗಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಜೆಡಿಎಸ್ ಕಾರ್ಯಕರ್ತರಿಂದ ಹಣ್ಣು ಹಂಪಲು ವಿತರಣೆ*