--ಜಾಹೀರಾತು--

ನಾಲ್ಕನೇ ವಾರ್ಡ್ ಅರೇಹಳ್ಳಿ ಗುಡ್ಡದಹಳ್ಳಿ ಯನ್ನು ಮಾದರಿ ವಾರ್ಡ್ ಮಾಡುವ ಗುರಿ ನನ್ನದು–ಶ್ರೀನಿವಾಸ ರೆಡ್ಡಿ

On: December 19, 2025 6:59 PM
Follow us:
--विज्ञापन यहां--

Whatsapp Channel

Join Now

Telegram Group

Join Now
Spread the love

ನಾಲ್ಕನೇ ವಾರ್ಡ್ ಅರೇಹಳ್ಳಿ ಗುಡ್ಡದಹಳ್ಳಿ ಯನ್ನು ಮಾದರಿ ವಾರ್ಡ್ ಮಾಡುವ ಗುರಿ ನನ್ನದು.. ಶ್ರೀನಿವಾಸ ರೆಡ್ಡಿ

ದೊಡ್ಡಬಳ್ಳಾಪುರ:4 ನೇ ವಾರ್ಡ್ ಅರೇಹಳ್ಳಿ ಗುಡ್ಡದಹಳ್ಳಿ ಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಸಮಸ್ಯೆಗಳಿಗೆ ಪರಿಹಾರ ಹುಡುಕಿ ಮಾದರಿ ವಾರ್ಡ್ ಮಾಡುವ ಗುರಿ ನನ್ನದು ಎಂದು ಶ್ರೀನಿವಾಸ ರೆಡ್ಡಿ ಹೇಳಿದರು.

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿಯ ಚುನಾವಣೆಯಲ್ಲಿ ಅರೇಹಳ್ಳಿ ಗುಡ್ಡದಹಳ್ಳಿ ನಾಲ್ಕನೇ ವಾರ್ಡಿನಿಂದ ಪಕ್ಷೇತರವಾಗಿ ಸ್ಪರ್ದಿಸಿರುವ ಶ್ರೀನಿವಾಸ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ ಭಾಷೆಟ್ಟಿ ಹಳ್ಳಿ ಗ್ರಾಮ ಪಂಚಾಯ್ತಿ ಅವಧಿ ಮುಗಿದು ನಾಲ್ಕು ವರ್ಷಗಳಾಗಿವೆ. ಈ ಅವಧಿಯಲ್ಲಿ ಜನ ಪ್ರತಿನಿದಿಗಳಿಲ್ಲದ ಕಾರಣ ಅರೇಹಳ್ಳಿ ಗುಡ್ಡದಹಳ್ಳಿ ಗ್ರಾಮಗಳಲ್ಲಿ ಸಮಸ್ಯೆಗಳು ಹೇರಳವಾಗಿದ್ದು ಪರಿಹಾರಕ್ಕಾಗಿ ಜನ ಸಾಮಾನ್ಯರು ಪರದಾಡುವಂತಾಗಿದೆ. ಈಗ ಭಾಷೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆ ಗೇರಿದೆ. ಈಗ ಮೊದಲ ಬಾರಿಗೆ ಪಟ್ಟಣ ಪಂಚಾಯ್ತಿ ಚುನಾವಣೆ ನಡೆಯಲಿದ್ದು ತಾನು ನಾಲ್ಕನೇ ವಾರ್ಡ್ ಅರೇಹಳ್ಳಿ ಗುಡ್ಡದಹಳ್ಳಿ ನಾಲ್ಕನೇ ವಾರ್ಡಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದೇನೆ. ನಾನು ಅರೇಹಳ್ಳಿ ಗುಡ್ಡಹಳ್ಳಿ ಸೇರಿದಂತೆ ಭಾಷೆಟ್ಟಿ ಹಳ್ಳಿ ವ್ಯಾಪ್ತಿಯಲ್ಲಿ ಚಿರಪರಿಚಿತನಾಗಿದ್ದೇನೆ. ಪ್ರಸ್ತುತ ನಾಲ್ಕನೇ ವಾರ್ಡ್ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದ ಪ್ರದೇಶವಾಗಿದೆ. ಭಾಷೆಟ್ಟಿ ಹಳ್ಳಿ ವ್ಯಾಪ್ತಿಯಲ್ಲಿ ನೂರಾರು ಕೈಗಾರಿಕೆಗಳಿದ್ದು ಪಂಚಾಯ್ತಿ ಅತ್ಯಂತ ಶ್ರೀಮಂತ ಪಂಚಾಯ್ತಿ ಎಂಬ ಹೆಸರಿದೆ. ಆದರೆ ವಾಸ್ತವವಾಗಿ ಇಲ್ಲಿನ ಗ್ರಾಮಗಳು ಬಡವಾಗಿವೆ ಎಂಬುದು ಸಾರ್ವತ್ರಿಕ ಸತ್ಯ. ಪ್ರಮುಖವಾಗಿ ಇಲ್ಲಿನ ಸಮಸ್ಯೆ ಗಳ ಬಗ್ಗೆ ನನಗೆ ಅರಿವಿದೆ. ಹಾಗಾಗಿ ಸಮಸ್ಯೆ ಗಳ ಪರಿಹಾರ ಕ್ಕಾಗಿ ನಾನು ಸ್ಪರ್ಧೆಗಿಳಿದಿದ್ದೇನೆ. ಮುಖ್ಯವಾಗಿ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು. ಮುಖ್ಯವಾಗಿ ಗ್ರಾಮದ ಬೀದಿಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ. ಅದಕ್ಕಾಗಿ ಹೈಮಾಸ್ಕ್ ದೀಪಗಳ ಅಳವಡಿಕೆ. ಕುಡಿಯುವ ನೀರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದು. ಕೆರೆ ಶುದ್ದೀಕರಿಸಿ, ದಿನನಿತ್ಯ ವಾಯು ವಿಹಾರಕ್ಕೆ ಬರುವ ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ವಾಕಿಂಗ್ ಪಾತ್ ನಿರ್ಮಿಸುವುದು, ವಾರ್ಡ್ ವ್ಯಾಪ್ತಿಯ ಆಟದ ಬಯಲಿನಲ್ಲಿ ಮಕ್ಕಳಿಗೆ ಮನರಂಜನೆ ಹಾಗೂ ಕ್ರೀಡೆ ಗಾಗಿ ಪರಿಕರಗಳನ್ನು ಒದಗಿಸುವುದು. ಊರಿನ ಮಧ್ಯಭಾಗದಲ್ಲಿ ವಿದ್ಯುತ್ ದೀಪದ ಜೊತೆಗೆ ಅಪರಾಧಗಳನ್ನು ನಿಯಂತ್ರಿಸಲು ಸಿ. ಸಿ. ಟಿ. ವಿ. ಗಳನ್ನು ಅಳವಡಿಸುವುದು. ಇವೆಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಕೊಡಿಸುವುದು. ಈಗಾಗಲೇ ಉದ್ಯೋಗಕ್ಕಾಗಿ ಪರ ರಾಜ್ಯಗಳಿಂದ ವಲಸೆ ಬಂದು ನಮ್ಮ ಪರಿಸರವನ್ನು ಹಾಳುಗೆಡುವುತ್ತಿರುವ ವಲಸಿಗರನ್ನು ನಿಯಂತ್ರಿಸುವುದು. ಭೂಮಿ ಕಳೆದುಕೊಂಡ ರೈತರ ಬದುಕಿನ ಆಸರೆಗಾಗಿ ಹೋರಾಟ ಮಾಡುವುದು ಸೇರಿದಂತೆ ಹತ್ತು ಹಲವು ಯೋಜನೆಗಳ ಅನುಷ್ಠಾನಗಳ ಗುರಿ ನನ್ನದು. ಈ ಎಲ್ಲಾ ಪ್ರಗತಿಯ ಗುರಿಯನಿಟ್ಟುಕೊಂಡು ಚುನಾವಣೆಗೆ ಸ್ಪರ್ದಿಸಿದ್ದೇನೆ. ಈಗಾಗಲೇ ನಾನು ಸಮಾಜಮುಖಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದೇನೆ. ಪಕ್ಷತೀತವಾಗಿ, ಜಾತ್ಯತೀತವಾಗಿ ಸ್ಥಳೀಯರು ನನ್ನ ಜೊತೆಗಿದ್ದಾರೆ. ಆದ್ದರಿಂದ ನಾಲ್ಕನೇ ವಾರ್ಡಿನ ಮತದಾರ ಬಂದುಗಳು ನನ್ನನ್ನು ಆಶೀರ್ವದಿಸಿ ಗೆಲ್ಲಿಸುತ್ತಾರೆಂಬ ವಿಶ್ವಾಸ ನನ್ನದು ಎಂದು ಶ್ರೀನಿವಾಸ್ ರೆಡ್ಡಿ ಹೇಳಿದರು.