ಪಟ್ಟಣ ಪಂಚಾಯ್ತಿ ಚುನಾವಣೆ.. ಚಿನ್ಹೆ ಗಾತ್ರ ವ್ಯತ್ಯಾಸ ಕಾಂಗ್ರೆಸ್ ಜೆಡಿಎಸ್ ಜಂಟಿ ಪ್ರತಿಭಟನೆ
ದೊಡ್ಡಬಳ್ಳಾಪುರ: ನಗರ ಗ್ರಾಮ ಪಂಚಾಯಿತಿ ಯಿಂದ ಪಟ್ಟಣ ಪಂಚಾಯಿತಿ ಯಾಗಿದ್ದು ಡಿ 21 ರಂದು ನೆಡೆಯಲಿರುವ ಚುನಾವಣೆ ರಾಷ್ಟೀಯ ಪಕ್ಷಗಳು ಸೇರಿದಂತೆ ಸ್ವತಂತ್ರ ಪಕ್ಷಗಳು ಕಣದಲ್ಲಿದ್ದು ಆದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಈ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಬಿಜೆಪಿಗೆ ಸೆಡ್ಡು ಹೊಡೆದಿದೆ.
ಅದರು ಇಂದು ಕಾಂಗ್ರೆಸ್ ಜೊತೆ ಜೆಡಿಎಸ್ ಮುಖಂಡರು ದೊಡ್ಡಬಳ್ಳಾಪುರ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದೆ.
ಚುನಾವಣೆ ಪ್ರಚಾರ ಬಿಟ್ಟು ಪ್ರತಿಭಟನೆಗೆ ಕಾರಣ ಏನು ಎಂಬುದಾದರೆ, ಡಿ.21ರಂದು ನಡೆಯಲಿರುವ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಳಸುವ ಇವಿಎಂ ಯಂತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಚಿನ್ನೆಗಳನ್ನು ಚಿಕ್ಕದಾಗಿ ಮುದ್ರಿಸಿ, ಬಿಜೆಪಿ ಇತರೆ ಬೇರೆ ಪಕ್ಷದ ಚಿನ್ನೆ ದೊಡ್ಡದಾಗಿ ಮುದ್ರಿಸಿದ್ದಾರೆ ಎಂಬ ಆರೋಪಿಸಿ ಎರಡು ಪಕ್ಷಗಳು ಪ್ರತಿಭಟನೆಗೆ ಮುಂದಾಗಿದೆ .
ಈ ವಿಚಾರವಾಗಿ ಮಾಜಿ ಶಾಸಕರಾದ ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಪ್ರತಿಭಟನೆಯಲ್ಲಿ ಬಾಗವಹಿಸಿ ಕೊಡಲೆ ಚಿನ್ನೆಗಳು ಸಮಾನಾಗಿ ಮುದ್ರಿಸಿ ಈ ಚುನಾವಣೆಗೆ ಅವಕಾಶ ಮಾಡಿ ಕೂಡ ಬೇಕೇಂದು ಚುನಾವಣಾಧಿಕಾರಿ ಗೆ ಮನವಿ ಕೂಟ್ಟರು
ಈ ಸಂದರ್ಭದಲ್ಲಿ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಅಪ್ಪಿವೆಂಕಟೇಶ್, ಆದಿತ್ಯ ನಾಗೇಶ್, ಲಾವಣ್ಯ ನಾಗರಾಜ್, ರಾಮಾಂಜಿನಪ್ಪ, ಜೆಡಿಎಸ್ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ ವಕ್ತಾ ಕುಂಟನಹಳ್ಳಿ ಮಂಜುನಾಥ್, ಮುಖಂಡರಾ ತೂಬಗೆರೆ ಹೋಬಳಿ ಅಧ್ಯಕ್ಷ ಜಗನ್ನಾಥ ಬಾಶೆಟ್ಟಿಹಳ್ಳಿ ಜೆಡಿಎಸ್ ಅಭ್ಯರ್ಥಿಗಳಾದ ವಿಶ್ವನಾಥ್, ನಾಗರಾಜ್, ಮಧನ್, ಶ್ರೀನಿವಾಸ್, ಮುಖಂಡರಾದ ಸೋನು, ರಿಯಾಜ್, ಶ್ರೀನಿವಾಸ್, ಮುನೇಗೌಡ ಮತ್ತಿತರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಚುನಾವಣೆ ಅಧಿಕಾರಿಗಳು ಮನವಿ ಪತ್ರ ಸ್ವೀಕರಿಸಿ, ಲೋಪವಾಗಿದ್ದರೆ ಸರಿಪಡಿಸಿ, ಚುನಾವಣೆ ಆಯೋಗದ ನಿಯಮದಂತೆ ಚಿನ್ನೆ ಅಳವಡಿಸುವ ಭರವಸೆ ನೀಡಿದರು.





