ಬೆಂಗಳೂರು ಗ್ರಾ:ಆಹಾರ ನಾಗರೀಕ ಸರಬರಾಜು ಹಾಗು ಗ್ರಾಹಕರ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪರವರ ಅದ್ಯಕ್ಷತೆಯಲ್ಲಿ ಸೆಪ್ಟೆಂಬರ್ 20 ರಂದು ದೇವನಹಳ್ಳಿಯ ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಸಂಪರ್ಕ ಸಭೆ ಏರ್ಪಡಿಸಲಾಗಿದೆ ಎಂದು ಜಿಲ್ಲಾದಿಕಾರಿ ಡಾ.ಶಿವಶಂಕರ್ ತಿಳಿಸಿದ್ದಾರೆ. ಜಿಲ್ಲಾದಿಕಾರಿ ಜಿ ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ,ಜಿಲ್ಲಾ ಪೋಲಿಸ್ ಅದೀಕ್ಷಕರ ಉಪಸ್ಥಿತಿಯಲ್ಲಿ ಬೆಳಿಗ್ಗೆ 11:00 ಘಂಟೆಗೆ ಸಾರ್ವಜನಿಕ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದ್ದು, ಈ ಸಭೆಯಲ್ಲಿ ದೇವನಹಳ್ಳಿ ತಾಲ್ಲೋಕಿನ ಎಲ್ಲಾ ತಾಲ್ಲೋಕು ಮಟ್ಟದ ಇಲಾಖೆಗಳ ಅಧಿಕಾತಿಗಳು ಹಾಜರಿರಲಿದ್ದು ಸಾರ್ವಜನಿಕರ ಕುಂದು ಕೊರತೆಗಳ ಅಹವಾಲುಗಳನ್ನು ಆಲಿಸುವುದಲ್ಲದೆ ಸ್ಥಳದಲ್ಲಿಯೇ ಪರಿಹಾರ ನೆಡೆಸಲು ಕ್ರಮ ವಹಿಸಲಾಗುವುದು.ಸಾರ್ವಜನಿಕರು ಕುಂದು ಕೊರತೆಗಳು/ಅಹವಾಲುಗಳು ಇದ್ದಲ್ಲಿ ಈ ಸಭೆಗೆ ಆಗಮಿಸಿ ಸಾರ್ವಜನಿಕ ಸಂಪರ್ಕ ಸಭೆಯನ್ನು ಯಶಸ್ವಿಗಿಳಿಸಬೇಕೆಂದು ಜಿಲ್ಲಾದಿಕಾರಿ ಡಾ.ಶಿವಶಂಕರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ‌.