ಯುವ ಬ್ರಿಗೇಡ್ ಸಂಸ್ಥಾಪಕ ಸೂಲಿಬೆಲೆ ಚಕ್ರವರ್ತಿಗೆ ಪಿತೃವಿಯೋಗ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಸಂತಾಪ : ಪಂಚಭೂತಗಳಲ್ಲಿ ಲೀನವಾದ ಸುಬ್ರಾಯ್ ಶೇಠ್

ಸೂಲಿಬೆಲೆ:ವಾಗ್ಮಿ ಹಾಗೂ ಯುವ ಬ್ರಿಗೇಡ್ ಸಂಸ್ಥಾಪಕ ಸೂಲಿಬೆಲೆ ಚಕ್ರವರ್ತಿ ತಂದೆ ದೇವಿದಾಸ್ ಸುಬ್ರಾಯ್ ಸೇಠ್ (82) ಇಹಲೋಕ ತ್ಯಜಿಸಿದ್ದಾರೆ.

ಮೂಲತ: ಹೊನ್ನಾವರದವರಾದ ದೇವಿದಾಸ್ ಸುಬ್ರಾಯ್ ಸೇಠ್ ಇಲ್ಲಿನ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಜೀವನ ಪ್ರಾರಂಭಿಸಿ ಇಲ್ಲಿಯೇ ನೆಲೆ ಕಂಡುಕೊಂಡಿದ್ದರು, 33 ವರ್ಷಗಳ ಕಾಲ ವಿವೇಕಾನಂದ ವಿದ್ಯಾಭಿವೃದ್ದಿ ಸಂಸ್ಥೆಯ ಅಡಿಯಲ್ಲಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು, ನಿವೃತ್ತಿ ನಂತರ ವಿವೇಕಾನಂದ ಪ್ರೌಢಶಾಲೆಯ ಆಶ್ರಯದಲ್ಲಿದ್ದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುಮಾರು 8ವರ್ಷಗಳ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಸದಾ ಕ್ರಿಯಾಶೀಲರಾಗಿದ್ದು ದೇವಿದಾಸ್ ಸುಬ್ರಾಯ್ ಸೇಠ್ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರಂತರವಾಗಿ ಅಭಿವೃದ್ದಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.

ಇತ್ತೀಚಿಗೆ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಸೆ. 7 ರಂದು ಭಾನುವಾರ ಬೆಳಿಗ್ಗೆ 8ಗಂಟೆ ಸಮಯದಲ್ಲಿ ತಮ್ಮ ಸ್ವಗೃಹ ಸೂಲಿಬೆಲೆ ಶಾರಧ ಮಂದಿರದಲ್ಲಿ ಕೊನೆಯುಸಿರೆಳದಿದ್ದಾರೆ.

ಅಂತಿಮ ದರ್ಶನ:ಇಲ್ಲಿನ ಶಾರಾಧಾ ಮಂದಿರದಲ್ಲಿ ದೇವಿದಾಸ್ ಸುಬ್ರಾಯ್ ಸೇಠ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ.ವಿಜಯೇಂದ್ರ, ಶಾಸಕ ಶರತ್ ಬಚ್ಚೇಗೌಡ, ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡ, ಯುವ ಮುಖಂಡ ಜಿ.ನಾರಾಯಣಗೌಡ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ, ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಜಿ.ಪಂ.ಮಾಜಿ ಅಧ್ಯಕ್ಷ ವಿ.ಪ್ರಸಾಧ್, ವಿವೇಕಾನಂದ ವಿದ್ಯಾಭಿವೃದ್ದಿ ಸಂಘದ ಮಾಜಿ ಅಧ್ಯಕ್ಷ ಎಸ್.ಆರ್.ರಂಗನಾಥ್,ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಕುಡಚಿ ಮಾಜಿ ಶಾಸಕ ಪಿ.ರಾಜೀವ್, ಸೇರಿದಂತೆ ಅಪಾರ ಸಂಖ್ಯೆಯ ಹಳೆಯ ವಿದ್ಯಾರ್ಥಿಗಳು ಅಭಿಮಾನಿ ವರ್ಗ ದರ್ಶನ ಪಡೆದುಕೊಂಡರು.

ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ಬ್ರಾಹ್ಮಣ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ಪ್ರಕ್ರಿಯೆಗಳನ್ನು ದಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಿದರು.

33 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರಕ್ಕೆ ದೇವಿದಾಸ್ ಸುಬ್ರಾಯ್ ಸೇಠ್ ಅವರ ಸೇವೆ ಅನನ್ಯ ಇಂತಹ ಸಮಾಜಿಕ ಕಾಳಜಿಯ ವ್ಯಕ್ತಿಯನ್ನು ಸಮಾಜ ಕಳೆದುಕೊಂಡಿರುವುದು ಶೈಕ್ಷಣಿಕ ಕ್ಷೇತ್ರಕ್ಕೆ ನಷ್ಟವಾಗಿದೆ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಯಂದ್ರ ತಿಳಿಸಿದರು.

80 ವರ್ಷಗಳ ವಯೋಮಾನದಲ್ಲೂ ಸಮಾಜಿಕ ನಾಡಿ ಮಿಡಿತವಾಗಿ ಸಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ದೇವಿದಾಸ್ ಸುಬ್ರಾಯ್ ಸೇಠ್ ನಿಧನ ಸಮಾಜಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಸೂಲಿಬೆಲೆಯಲ್ಲಿ ದೇವಿದಾಸ್ ಸುಬ್ರಾಯ್ ಸೇಠ್ ರ ಅಂತಿಮ ದರ್ಶನ ಪಡೆದ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ದೊಡ್ಡಬಳ್ಳಾಪುರ ಶಾಸಕ ದೀರಜ್ ಮುನಿರಾಜು, ಇತರರು ಇದ್ದರು.