ಪಟ್ಟಣದ ಕನ್ನಡ ಭವನದಲ್ಲಿ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಕೆ ಎನ್ ರಾಜಣ್ಣ ಭಾಗಿ
ಮಧುಗಿರಿ: ಪಟ್ಟಣದ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ತಾಲೂಕು ಆರ್ಯ ಈಡಿಗರ ಸಂಘದ ವತಿಯಿಂದ ಶ್ರೀ ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಮಾತನಾಡಿದರು.
ಬಂಗಾರಪ್ಪ ಹಾಗೂ ಆರ್.ಎಲ್. ಜಾಲಪ್ಪ ರವರು ಮೆಚ್ಚುವಂತಹ ನಾಯಕರಾಗಿದ್ದು,ಮುಂದಿನ ಪೀಳಿಗೆಗೆ ಸಮಾಜದ ಒಳಿತುಗಾಗಿ ದುಡಿದವರು ಬಂಗಾರಪ್ಪ ಆರ್. ಎಲ್. ಜಾಲಪ್ಪ ಇವರು ನಮಗೆಲ್ಲ ಮಾದರಿ ಹೆಣ್ಣು ಮಕ್ಕಳಿಗಾಗಿ ರಾತ್ರಿ ಶಾಲೆ ಪ್ರಾರಂಭಿಸಿ,
ಪೂರ್ವಜರ ಸಂದೇಶಗಳನ್ನು ಪಾಲಿಸಿ ಯುವ ಪೀಳಿಗೆಗೆ ನಾರಾಯಣ ಗುರುಗಳ ಪರಿಚಯ ಮಾಡಿಸಿ ಇತಿಹಾಸ ತಿಳಿಸುವಂತಾಗಬೇಕು,ರಾಜಕೀಯದಲ್ಲಿ ಏರು ಪೇರು ಸಾಮಾನ್ಯವಾಗಿ ರುತ್ತೆ,
ಮಹನೀಯರ ತತ್ವ ಸಿದ್ದಾಂತಗಳು ಮೆಚ್ಚುವಂಥದ್ದು ಹಾಗೂ ಈಡಿಗ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಭಾರಿ ಸ್ವಂತ ಕಟ್ಟಡ ದಲ್ಲಿ ಜಯಂತಿ ಆಚರಣೆಗೆ ಅವಕಾಶ ಮಾಡಿ ಕೊಡುವೆ ಮಧುಗಿರಿ ಸಾಮಾನ್ಯ ಕ್ಷೇತ್ರವಾಗಿದು ಸಚಿವನಾಗಿ ಅಧಿಕಾರ ಅನುಭವಿಸಲಿಕೆ ನೀವೆಲ್ಲಾ ಕಾರಣ ಆ ಸ್ಥಾನ ಹೋಯಿತು ಆದರೆ ಈಗ ಶಾಸಕನಾಗಿ ಉಳಿಯುವುದಕ್ಕೆ ನೀವು ನೀಡಿದ ಮತ ಭಿಕ್ಷೆಯೇ ಕಾರಣ ಇದನ್ನು ನಾ ಮರೆಯಲಾರೆ ರಾಜಕೀಯದಲ್ಲಿ ಅಧಿಕಾರಗಳಿಸಿ ಯುವಕರು ಹೋರಾಟದ ಮನೋಭಾವನೆ ಬೆಳಿಸಿಕೊಳ್ಳಿ
ಕುಲ ಕಸುಬಿನ ಜೊತೆಗೆ ಕರಕುಶಲ ಕೆಲಸ ರೂಢಿಸಿಕೊಳ್ಳ ಬೇಕು
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುತ್ತಿರುವ ಕಾರ್ಯ ಉತ್ತಮವಾಗಿದೆ ಎಲ್ಲರೂ ಸ್ವಾಭಿಮಾನದ ಬದುಕು ನಡೆಸಬೇಕು ಎಂದು ಸಚಿವ ಹಾಗೂ ಶಾಸಕರಾದ ಕೆ.ಎನ್. ರಾಜಣ್ಣ ರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪುರಸ್ಕಾರ ಪಡೆದ ನೀವು ಸಮಾಜಕ್ಕೆ ಅಸ್ತಿ ಯಾಗಿ ಜೊತೆಗೆ ಪಾಲಕರಿಗೆ ಗೌರವ ತನ್ನಿ ಸಾಹಿತಿ ಮಲನ ಮೂರ್ತಿ ಮಾತನಾಡಿ ಪ್ರೀತಿ ವಿಶ್ವಾಸ ನಂಬಿಕೆಗೆ ಹೆಸರಾದವರು ಕೆ ಎನ್ ರಾಜಣ್ಣ ಎಂದು ಬಣ್ಣಿಸಿದರು.
ಕಿರುತೆರೆ ನಿರ್ಮಾಪಕ ರವಿ ಆರ್ ಗರಣಿ ಮಾತನಾಡಿ, ನೇರ ನುಡಿಯ ಜನರಿಗಾಗಿ ಇರುವ ನಾಯಕ ಕೆ. ಎನ್. ರಾಜಣ್ಣರವರು ಕಿರುತೆರೆಯಲ್ಲಿ ಕೆಲಸ ಮಾಡುತ್ತಿರುವರ ಸಮಸ್ಯೆಗೆ ಸ್ಪಂದಿಸಿದ್ದಾರೆ, ಬಂಗಾರಪ್ಪ ನಂತರದ ಅಹಿಂದ ಶಕ್ತಿ ಅಂದರೆ ರಾಜಣ್ಣ,ಕಟ್ಟಕಡೆಯ ವ್ಯಕ್ತಿಗೆ ಶಕ್ತಿ ಯಾಗಿರುವ ಕೆ ಎನ್ ಆರ್ ರವರಿಗೆ ಬೆಂಬಲಿಸಿ ಎಂದು ಮಾಜಿ ಸಚಿವರ ಬಗ್ಗೆ ಗುಣಗಾನ ಮಾಡಿದರು.
ವಿದ್ಯಾಭ್ಯಾಸ ಕೊಡಿಸಬೇಕು ಸರಕಾರದ ಯೋಜನೆಯನ್ನು ಪಡೆದು ಅಭಿವೃದ್ದಿಯಾಗಿ ಕಲಿತ ಶಾಲೆ ಹಾಗೂ ಊರನ್ನು ಮರೆಯಬಾರದು, ಸತ್ಯ ಹೇಳುದು ಕಷ್ಟ ಯಾರೇ ಬಂದ್ರು ಕಾನೂನು ಪ್ರಕಾರ ಸರ್ಕಾರದ ಸವಲತ್ತು ಮಾಡಿ ಎಂಬ ಮಾತ್ತನ್ನೂ ಅಧಿಕಾರಿಗಳಿಗೆ ರಾಜಣ್ಣ ರವರು ಸಭೆಗಳಲ್ಲಿ ತಿಳುವಳಿಕೆ ನೀಡಿದ್ದರು ಎಂದು ತಹಸೀಲ್ದಾರ್ ಹೆಚ್. ಶ್ರೀನಿವಾಸ ಸ್ಮರಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಮಂಜುನಾಥ್ ಅವರು, ಸಂಘದ ಅಧ್ಯಕ್ಷರಾದ ಜಯರಾಮ್ ಅವರು, ಉಪವಿಭಾಗ ಅಧಿಕಾರಿಗಳಾದ ಗೊಟೂರು ಶಿವಪ್ಪನವರು, ತಹಸೀಲ್ದಾರ್ ಶ್ರೀನಿವಾಸ್ ಅವರು, ಇ.ಓ ಲಕ್ಷಣ್ ಅವರು, ಡಿ.ವೈ.ಎಸ್.ಪಿ ಮಂಜುನಾಥ್ ಅವರು,nಕಿರುತೆರೆ ನಿರ್ಮಾಪಕರು ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷರಾದ ರವಿ.ಆರ್ ಗರಣಿ ಅವರು, ಲೋಕಸೇವಾ ಆಯೋಗದ ಮಾಜಿ ಸದಸ್ಯರಾದ ಲಕ್ಷ್ಮೀನರಸಯ್ಯನವರು, ಲಕ್ಷ್ಮೀನಾರಾಯಣ್ ಅವರು, ಶ್ರೀನಿವಾಸಮೂರ್ತಿ ಅವರು ಸೇರಿದಂತೆ ಅನೇಕ ಮುಖಂಡರುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ : ಹರೀಶ್ ಸಿ ಎ