ದೊಡ್ಡಬಳ್ಳಾಪುರ: ಪ್ರೀತಂ ಶ್ರೇಯಕರವರ ವರ್ಗಾವಣೆಯಿಂದ ತೆರವಾಗಿದ್ದ ನಗರ ಪೋಲೀಸ್ ಠಾಣೆ ಇನ್ಸ್ ಪೆಕ್ಟರ್ ಸ್ಥಾನಕ್ಕೆ ನೂತನ ಇನ್ಪೆಕ್ಟರ್ ಆಗಿ ಅಮರೇಶ್ ಗೌಡ ರವರು ಅಧಿಕಾರ ಸ್ವೀಕರಿಸಿದರು.
ನಗರ ಪೋಲಿಸ್ ಠಾಣೆಯಲ್ಲಿ ಇಂದು ಅಮರೇಶ್ ಗೌಡ ರವರಿಗೆ ಸಿಬ್ಬಂದಿಗಳು ಹೂಗುಚ್ಚ ನೀಡಿ ಸ್ವಾಗತಿಸಿದರು.
ಈ ವೇಳೆ ನಗರ ಪೋಲಿಸ್ ಠಾಣೆಯ ಪ್ರೊ ಪಿ ಎಸ್ ಐ ತೇಜಸ್ ,ಸಿಬ್ಬಂದಿಗಳಾದ ಮುನಿರಾಜು ,ಕರಾರ್ ಹುಸೇನ್ , ನಾಗರಾಜು,ಪುಟ್ಟ ನರಸಿಂಹಯ್ಯ,ವಸಂತ್,ರೂಪೇಶ್ ಯಾದವ್ ಇದ್ದರು.
ಅಮರೇಶ್ ಗೌಡರವರು ಮೂಲತಹ ದೇವನಹಳ್ಳಿ ತಾಲ್ಲೂಕಿನ ಸಾದಹಳ್ಳಿ ಗ್ರಾಮದವರಾಗಿದ್ದು ಪೋಲಿಸ್ ಇನ್ಸ್‌ಪೆಕ್ಟರ್ ಆಗಿ ತುಮಕೂರು, ಬೆಂಗಳೂರು ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆಂದು ಮೂಲಗಳು ತಿಳಿಸಿವೆ.