ಕೆಂಪನಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ ನಡೆಯಿತು
ಸಂತೇಮರಹಳ್ಳಿ :- ಸಮೀಪದ ಕೆಂಪನಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾದೇಶ್ ಕಣ್ಣೇಗಾಲ ಮಾತನಾಡಿ ಈಗಾಗಲೇ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ವಾರ್ಡ್ ಸಭೆ ಮಾಡಿದ್ದು ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸಿ ಗ್ರಾಮ ಸಭೆಯಲ್ಲಿ ಫಲನುಭವಿಗಳ ಹೆಸರನ್ನು ಅಧಿಕೃತವಾಗಿ ತಿಳಿಸಲಾಗಿದೆ, ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ 43 ಮನೆಗಳು ಮಂಜೂರಾಗಿದ್ದು ಹಾಗೂ ಬಸವ ವಸತಿ ಯೋಜನೆಯಡಿ 56 ಮನೆಗಳು ಮಂಜೂರಾಗಿದ್ದು ಮುಂಬರುವ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರತಿಯೊಂದು ಗ್ರಾಮಗಳಿಗೂ ಮನೆ ನೀಡಲಾಗುವುದು ಸಾರ್ವಜನಿಕರು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಹಾಗೂ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬರುವಂತಹ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ( ಸಮಾಜ ಕಲ್ಯಾಣ ಇಲಾಖೆ )ನೋಡಲ್ ಅಧಿಕಾರಿ ಚಿಕ್ಕಬಸವಯ್ಯ , ಉಪಾಧ್ಯಕ್ಷೆ ಶಿಲ್ಪ ಎಸ್ , ಸದಸ್ಯರಾದ ಸವಿತಾ ಲಕ್ಷ್ಮಣ, ಮಹದೇವಸ್ವಾಮಿ, ಸೋಮಣ್ಣ, ಪ್ರಕಾಶ್, ಕೆ ಸಿ ನಾಗರಾಜ್, ಸವಿತಾ ನಾಗರಾಜ್, ಶಾಕಮ್ಮ, ಶಾಂತಮೂರ್ತಿ, ರಾಮನಾಯಕ್, ತಾಯಮ್ಮ, ಗೀತಾ, ರಾಮಸ್ವಾಮಿ ಎಚ್ ಎಂ ಗಾಯತ್ರಿ, ಪಿ ಡಿ ಓ ರಾಮೇಗೌಡ ಸಿಬ್ಬಂದಿವರ್ಗ ಹಾಗೂ ಸಾರ್ವಜನಿಕರು ಹಾಜರಿದ್ದರು.
ವರದಿ ಆರ್ ಉಮೇಶ್