ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಸದಸ್ಯರಾಗಿ ವೆಂಕಟೇಶ್ ನೇಮಕ

ದೊಡ್ಡಬಳ್ಳಾಪುರ : ಕಾಂಗ್ರೆಸ್ ಮುಖಂಡರಾದ ಎಂ. ವೆಂಕಟೇಶ್ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಸದಸ್ಯರಾಗಿ ನೇಮಕವಾಗಿದ್ದು, ಸದಸ್ಯರಾಗಿ ನೇಮಕನಾಗಲು ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪಿ, ಮಾಜಿ ಶಾಸಕರಾದ ಟಿ.ವೆಂಕಟರಮಣಯ್ಯ, ಆರ್.ಜಿ.ವೆಂಕಟಚಾಲಯ್ಯ, ಗೋವಿಂದರಾಜು ನಾರನಹಳ್ಳಿ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಧನ್ಯವಾದ ಸಲ್ಲಿಸದರು.

ದೊಡ್ಡಬಳ್ಳಾಪುರ ಕಸಬಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಎಂ. ವೆಂಕಟೇಶ್ ರವರು ಹಲವು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ಕೆಲಸ ಮಾಡಿದವರು, ದೊಡ್ಡಬಳ್ಳಾಪುರ ನಗರದಲ್ಲಿ ಅವರ ಪಕ್ಷ ಸಂಘಟನೆಯ ಕೆಲಸ ಗುರುತಿಸಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಜೊತೆಗೆ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನ ರಾಜ್ಯ ಸರ್ಕಾರದ ನೇಮಕ ಮಾಡಿದ್ದು, ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಾಜೇಶ್ .ಎಸ್ ಸೂಳಿಕೇರಿ ತಕ್ಷಣಕ್ಕೆ ಜಾರಿ ಬರುವಂತೆ ಆದೇಶ ಹೊರಡಿಸಿದ್ದಾರೆ. ಅಧ್ಯಕ್ಷರಾಗಿ ಚುಂಚೇಗೌಡ, ಸದಸ್ಯರಾಗಿ ರಾಮಕೃಷ್ಣಯ್ಯ, ಎಂ.ವೆಂಕಟೇಶ್ ಮತ್ತು ಅಂಜಮಮೂರ್ತಿರನ್ನ ನೇಮಕ ಮಾಡಿ ಆದೇಶಿಸಿದೆ.

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ನೇಮಕರಾದ ವೆಂಕಟೇಶ್ ಮಾತನಾಡಿ, ಪಕ್ಷದ ಸಂಘಟನೆಗಾಗಿ ಕೆಲಸ ಮಾಡಿದ್ದನ್ನು ಪಕ್ಷದ ಮುಖಂಡರನು ಗುರುತಿಸಿ ನನಗೆ ಅವಕಾಶ ಕೊಟ್ಟಿದ್ದಾರೆ, ಕೊಟ್ಟ ಅವಕಾಶವನ್ನ ದೊಡ್ಡಬಳ್ಳಾಪುರ ನಗರದ ಸಮಗ್ರ ಅಭಿವೃದ್ಧಿಗಾಗಿ ಬಳಸಿಕೊಳ್ಳುವೆ, ಶತಮಾನಗಳ ಹಿಂದೆಯೇ ಮೈಸೂರು ನಗರವನ್ನ ವ್ಯವಸ್ಥಿತ ನಗರವನ್ನಾಗಿ ನಿರ್ಮಾಣ ಮಾಡಲಾಗಿತ್ತು, ಮೈಸೂರು ನಗರದಂತೆ ದೊಡ್ಡಬಳ್ಳಾಪುರ ನಗರವನ್ನ ವ್ಯವಸ್ಥಿತ ನಗರವನ್ನಾಗಿ ಮಾಡುವ ಆಸೆ ನನಗಿದೆ ಎಂದರು.