ವಿಜೃಂಭಣೆಯಿಂದ ಜರುಗಿದ ಲಕ್ಷ್ಮೀ ಭೂ ವರಹಾಸ್ವಾಮಿ ತೇರು

ಯಳಂದೂರು : ಪಟ್ಟಣದ ಲಕ್ಷ್ಮಿ ಭೂ ವರಹಾಸ್ವಾಮಿ ರಥೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು

ಹೋಳಿ ಹಬ್ಬದ ಹಿನ್ನೆಲೆ ಪ್ರತಿವರ್ಷದಂತೆ ಈ ವರ್ಷವೂ ಕೂಡ ಬಹಳ ವಿಜೃಂಭಣೆಯಿಂದ ಲಕ್ಷ್ಮಿ ಭೂ ವರಹಾಸ್ವಾಮಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ನಂತರ ರಥೋತ್ಸವವು ಜರುಗಿತು ಶಂಖ ಜಾಗಟೆ ನಾದಗಳೊಂದಿಗೆ ಆರಂಭಗೊಂಡ ರಥವು ಪಟ್ಟಣದ ದೊಡ್ಡ ಅಂಗಡಿ ಬೀದಿ ಎಸ್ ಬಿ‌ ಐ ಸರ್ಕಲ್ ಮೂಲಕ ಸಾಗಿ ಭಕ್ತರು ರಥವನ್ನು ಎಳೆದು ದೇವಾಲಯ ತಲುಪಿದರು. ದಾರಿಯುದ್ದಕ್ಕೂ ಭಕ್ತರು ಹಣ್ಣು ಕಾಯಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ಬೆಳಗ್ಗೆ 12.35 ರಿಂದ 1.35ರ ಸಮಯದ ಶುಭ ಮಹೂರ್ತದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿ ಭಾವದಿಂದ ದೇವರಿಗೆ ಜೈಕಾರ ಹಾಕುತ್ತ ರಥ ಎಳೆದರು.

ಭಕ್ತರಿಗೆ ದೇವಾಲಯದಿಂದ ಅನ್ನ ಸಂತರ್ಪಣೆ, ಪ್ರಸಾದ ವಿತರಣೆಮಾಡಲಾಯಿತು. ದಾರಿಯುದ್ದಕ್ಕೂ ನೀರು ಮಜ್ಜಿಗೆ ಪಾನಕ ವಿತರಿಸಲಾಯಿತು. ದೇವಾಲಯದಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ನಂತರ ಯುವಕರು ಪರಸ್ಪರ ಬಣ್ಣ ಎರಚುವುದರ ಮೂಲಕ ಕುಣಿದು ಕುಪ್ಪಳಿಸಿ ಹೋಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ವರದಿ ಆರ್ ಉಮೇಶ್ ಮಲಾರಪಾಳ್ಯ