ಭರ್ಜರಿ ಪ್ರಚಾರ ಮಾಡುತ್ತಿರುವ ಶಾಸಕ ಎ‌.ಆರ್ ಕೃಷ್ಣಮೂರ್ತಿ.

ಯಳಂದೂರು: ಚಾಮರಾಜನಗರ ಲೋಕಸಭಾ ಚುನಾವಣೆಯ ಕಾಂಗ್ರೇಸ್ ಪಕ್ಷದ ಆಭ್ಯರ್ಥಿ ಸುನೀಲ್ ಬೋಸ್ ಪರ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್ ಕೃಷ್ಣಮೂರ್ತಿರವರು ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಭರ್ಜರಿ ಪ್ರಚಾರ ಮಾಡಿದರು.

2023 ರ ವಿಧಾನಸಬಾ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತನೀಡಿ ಗೆಲ್ಲಿಸಿದ್ದೀರಿ ಹಾಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ರವರಿಗು ಹೆಚ್ಚಿನ ಮತನೀಡಿ ಗೆಲ್ಲಿಸಬೇಕು ಎಂದು ಹೊನ್ನೂರು ಗ್ರಾಮಸ್ಥರಲ್ಲಿ‌ಮನವಿ ಮಾಡಿದರು.

ನಾನು ಶಾಸಕನಾದ ನಂತರ ಎಲ್ಲಾ ಸಮುದಾಯಗಳಿಗೂ ಅನುದಾನ ನೀಡಿದ್ದೇನೆ ಇನ್ನೂ ಮುಂದಿನ ದಿನಗಳಲ್ಲೂ ಹೆಚ್ಚಿನ ಅಭಿವೃದ್ಧಿ ಕಾರ್ಯವನ್ನು‌ಕ್ಷೇತ್ರದಲ್ಲಿ ಕೈಗೊಳ್ಳುತ್ತೇನೆ ಎಂದರು
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರೇಂಟಿ ಗಳನ್ನು ಜಾರಿ ಮಾಡಿ ಸರ್ವಜನರಿಗೂ ಅನುಕೂಲ ಮಾಡಿದ್ದೇವೆ ಈಗ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಬ್ಬ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ, ಹಾಗೂ ರೈತರಿಗೆ ಸಾಲ ಮನ್ನ ಮಾಡುವ ಗ್ಯಾರೇಂಟಿಯನ್ನು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಕಾರ್ಜುನ್ ಖರ್ಗೆ ಸಾಹೇಬರು ಮತ್ತು ರಾಹುಲ್ ಗಾಂಧಿಯವರು ಘೋಷಣೆ ಮಾಡಿದ್ದಾರೆ .ಹಾಗಾಗಿ ಜನಪರವಾದ ಯೋಜನೆಯನ್ನು ಜಾರಿಗೆ ತಂದಿರುವ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು

ಈ ಸಂಧರ್ಭದಲ್ಲಿ ಗ್ಯಾರೇಂಟಿ ಯೋಜನೆಯ ಜಿಲ್ಲಾಧ್ಯಕ್ಷ ಹಾಗೂ ಯಳಂದೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೊಂಗನೂರು ಚಂದ್ರು, ಜಿಲ್ಲಾ ಪಂಚಾಯತಿ ಮಾಜಿ ಉಪಾಧಕ್ಷ ಯರಿಯೂರು ಯೋಗೇಶ್, ಜಿಲ್ಲಾ ಕಾಂಗ್ರೇಸ್ ವಕ್ತಾರ ವಡಗೆರೆ ದಾಸ್, ಚಾಮುಲ್ ನಾಮನಿರ್ದೇಶನ ಸದಸ್ಯ ಕಮರವಾಡಿ ರೇವಣ್ಣ, ಎಸ್ಸಿ ಎಸ್ಟಿ ಸಮಿತಿಯ ಸದಸ್ಯ ರಾಜೇಂದ್ರ, ಮಾಜಿ ತಾ.ಪಂ ಅಧ್ಯಕ್ಷ ನಿರಂಜನ್ ಕುಮಾರ್ ಹೊನ್ನೂರು ಗ್ರಾ.ಪಂ ಅಧ್ಯಕ್ಷ ರೂಪೇಸ್, ಗ್ರಾ.ಪಂ ಮಾಜಿ ಅಧ್ಯಕ್ಷ ಸಿದ್ದಪ್ಪಸ್ವಾಮಿ, ಹಾಗೂ ಗ್ರಾಮಸ್ಥರು ಹಾಜರಿದ್ದರು

ವರದಿ ಆರ್ ಉಮೇಶ್ ಮಲಾರಪಾಳ್ಯ