ಮನೆಗೆ ನುಗ್ಗಿದ ಟಿಪ್ಪರ್ ಲಾರಿ ಮನೆ ಕಾಂಪೌಂಡ್ ಸೇರಿ 3 ಬೈಕ್ ಗಳು ಜಖಂ

ದೊಡ್ಡಬಳ್ಳಾಪುರ : ಮಧ್ಯರಾತ್ರಿ ನಿದ್ದೆಗಣ್ಣಿನಲ್ಲಿದ್ದ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮನೆಗೆ ನುಗ್ಗಿಸಿದ್ದಾನೆ, ಮನೆಯ ಮುಂದೆ ನಿಲ್ಲಿಸಿದ 3 ಬೈಕ್ ಗಳು ಜಖಂ ಗೊಡಿದಲ್ಲದೆ ಮನೆಯ ಕಾಂಪೌಂಡ್ ಹಾನಿಯಾಗಿದೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ರಾತ್ರಿ 1:30 ರ ಸಮಯದಲ್ಲಿ ಘಟನೆ ನಡೆದಿದ್ದು, ದೊಡ್ಡಬಳ್ಳಾಪುರ ಕಡೇಯಿಂದ ಮಳೆಕೋಟೆ ಕಡೆಗೆ ಹೋಗುತ್ತಿದ್ದ ಟಿಪ್ಪರ್, ರಸ್ತೆ ಬದಿಯಲ್ಲಿರುವ ಅಭಿ ಎಂಬುವರ ಮನೆಗೆ ನುಗ್ಗಿದೆ, ಮೊದಲಿಗೆ ಲಾರಿ ಮನೆ ಮುಂಭಾಗದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಯ ಲಾರಿಯ ವೇಗ ಕಡಿತವಾಗಿದೆ, ಇದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಒಂದು ವೇಳೆ ಲಾರಿ ನೇರವಾಗಿ ಮನೆಗೆ ನುಗಿದ್ರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು.

ರಾಜಘಟ್ಟ ಗ್ರಾಮದಲ್ಲಿ ಕ್ರಷರ್ ಲಾರಿಗಳ ಹಾವಳಿ ಹೆಚ್ಚಾಗಿದೆ, ಚಿಕ್ಕಬಳ್ಳಾಪುರದಲ್ಲಿರುವ ಕ್ರಷರ್ ಗಳಿಂದ ಜಲ್ಲಿಕಲ್ಲುಗಳನ್ನ ಸಾಗಿಸುವ ಟಿಪ್ಪರ್ ಲಾರಿಗಳು ರಾಜಘಟ್ಟ ಗ್ರಾಮದ ಮೂಲಕವೇ ಸಂಚಾರಿಸುತ್ತವೆ, ಆದರೆ ಅವುಗಳ ವೇಗಕ್ಕೆ ನಿಯಂತ್ರಣವೇ ಇಲ್ಲ, ರಸ್ತೆಯಲ್ಲಿ ಬ್ಯಾರಿಕೇಡ್ ಗಳನ್ನ ಹಾಕಿ ಗ್ರಾಮ ವ್ಯಾಪ್ತಿಯಲ್ಲಿ ಅವುಗಳ ವೇಗಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರಾದ ಗಣೇಶ್ ರಾಜಘಟ್ಟ ಮನವಿ ಮಾಡಿದ್ದಾರೆ.