ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕನ್ನಡ ಪಕ್ಷ ಬೆಂಬಲ…. ಡಿ. ಪಿ. ಆಂಜನೇಯ

ದೊಡ್ಡಬಳ್ಳಾಪುರ:ಸೈದ್ದಾಂತಿಕಾ ನೆಲೆಗಟ್ಟಿನಲ್ಲಿ ಹಾಗೂ ಕನ್ನಡ ನಾಡು ನುಡಿ, ನೆಲ ಜಲ ಉಳಿವಿಗಾಗಿ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕನ್ನಡ ಪಕ್ಷ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ಕನ್ನಡ ಪಕ್ಷದ ಹಿರಿಯ ಮುಖಂಡ ಡಿ. ಪಿ. ಆಂಜನೇಯ ಹೇಳಿದ್ದಾರೆ.

ನಗರದ ಕನ್ನಡ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಆಂಜನೇಯ, ಚುನಾವಣೆಗಳು ಸಿದ್ಧಾಂತದ ಆದರದ ಮೇಲೆ ನಡೆಯಬೇಕು. ಆದರೆ ಪ್ರಸ್ತುತ ಧರ್ಮಗಳ ಅದಾರದ ಮೇಲೆ ಪ್ರಧಾನಿ ಮೋದಿ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸಿರುವ ಮೋದಿ ಯವರ ಬರವಸೆಗಳು ಕೇವಲ ಬರವಸೆಗಳಾಗಿ ಉಳಿದಿವೆ. ದೇಶದಲ್ಲಿ ನಿರುದ್ಯೋಗ, ರೈತರ ಸಮಸ್ಯೆ, ಆಂತರಿಕ ಸಮಸ್ಯೆಗಳು ತಾಂಡವ ವಾಡುತ್ತಿವೆ. ರೈತರ ಹಾಗೂ ಮಣಿಪುರದ ಹೋರಾಟಗಳನ್ನು ಪರಿಹರಿಸಲು ಮೋದಿ ವಿಫಲರಾಗಿದ್ದಾರೆ. ಸಮಸ್ಯೆಗಳು ವಿಕೋಪಕ್ಕೆ ಹೋದರು ಮೌನಕ್ಕೆ ಶರಣಾಗಿರುವುದು ಸಮಂಜಸವಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಮೋದಿ ಸರ್ಕಾರ ಸಂಪೂರ್ಣ ಮಲತಾಯಿ ದೋರಣೆ ತಾಳಿದೆ. ರಾಜ್ಯದ ಸಮಸ್ಯೆಗಳನ್ನು ಪ್ರಧಾನಿ ಹಾಗೂ ಸಂಬಂಧ ಪಟ್ಟ ಸಚಿವರ ಬಳಿ ಹೇಳಿ ಪರಿಹಾರ ಒದಗಿಸುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ದಬ್ಬಾಳಿಕೆ, ಸಂವಿಧಾನದ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದರ ವಿರುದ್ಧ ದ್ವನಿ ಎತ್ತಿದರೆ ದೇಶ ದ್ರೋಹದ ಪಟ್ಟ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಆಡಳಿತ ವೈಖರಿ ಟೀಕಿಸಿದರೆ ಐ. ಟಿ…. ಈ. ಡಿ. ದಾಳಿ ನಡೆಸಿ ಬಾಯಿ ಮುಚ್ಚಿಸುವ ಕೆಲಸ ನಡೆದಿದೆ. ಎಂದು ಆಂಜಿನೇಯ ಹೇಳಿದರು.

ಕನ್ನಡ ಪಕ್ಷದ ಹಿರಿಯ ಮುಖಂಡ, ಹೋರಾಟಗಾರ ಸಂಜೀವ್ ನಾಯಕ ಮಾತನಾಡಿ ಕನ್ನಡ ಪಕ್ಷದ ಸಿದ್ಧಾಂತಕ್ಕೂ ಬಿಜೆಪಿ ಸಿದ್ಧಾಂತಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಆದ್ದರಿಂದ ಈ ಬಾರಿ ಕನ್ನಡ ಪಕ್ಷ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ. ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕುಟುಂಬದ ರಾಜಕೀಯ ಅಸ್ತಿತ್ವಕ್ಕೋಸ್ಕರ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ದೇಶದ ಇತಿಹಾಸದಲ್ಲಿ ಬಡತನ, ನಿರುದ್ಯೋಗ, ಮೂಲಭೂತಸಮಸ್ಯೆಗಳು ದಾಖಲೆಯತ್ತ ಸಾಗಿವೆ. ಇದಕ್ಕೆ ಕಡಿವಾಣ ಹಾಕದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಧರ್ಮಗಳ ಹಾಗೂ ಭಾವನೆಗಳ ಮೇಲೆ ಚುನಾವಣೆ ನಡೆಸುತ್ತಿದೆ. ಇನ್ನೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾಕರ್ರವರು ಕೋವಿಡ್ ಸಮಯದಲ್ಲಿ ಜನ ಸಾಮಾನ್ಯರ ದುಃಖ ದುಮ್ಮಾನಗಳಿಗೆ ಸ್ಪಂದಿಸದೆ ಕೋವಿಡ್ ಪರಿಕರಗಳ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಿರುವುದನ್ನು ಬಿಜೆಪಿ ಯವರೇ ಹೇಳಿದ್ದಾರೆ. ಈ ಮೊದಲು ಕನ್ನಡ ಪಕ್ಷ ಜೆಡಿಎಸ್ ಪಕ್ಷವನ್ನು ಬೆಂಬಲಿಸಿತ್ತು. ಈಗ ಬಿಜೆಪಿ ಜೊತೆ ದಳ ಮೈತ್ರಿ ಮಾಡಿಕೊಂಡಿರುವುದರಿಂದ ನಮ್ಮ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ನೀಡಲಾಗುವುದು ಎಂದು ಸಂಜೀವ್ ನಾಯಕ ಹೇಳಿದರು.

ತಾಲೂಕು ಕನ್ನಡ ಪಕ್ಷದ ಅಧ್ಯಕ್ಷ ವೆಂಕಟೇಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮುನಿಪಾಪಯ್ಯ, ರಂಗನಾಥ್, ಕುಮಾರ್, ಮಂಜುನಾಥ್, ಮುನಿರಾಜು ಸೇರಿದಂತೆ ಹಲವು ಕನ್ನಡ ಪಕ್ಷದ ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.