ಅರಳು ಮಲ್ಲಿಗೆ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ನಿರ್ಮಲಮ್ಮ, ಉಪಾಧ್ಯಕ್ಷರಾಗಿ ಡಿ. ಆರ್. ದ್ರುವಕುಮಾರ್ ಆಯ್ಕೆ
ದೊಡ್ಡಬಳ್ಳಾಪುರ:ಅರಳುಮಲ್ಲಿಗೆ ಗ್ರಾಮಪಂಚಾಯ್ತಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಕರೇನಹಳ್ಳಿ ವಾರ್ಡಿನ ನಿರ್ಮಲಮ್ಮ ಅಧ್ಯಕ್ಷರಾಗಿ ಹಾಗೂ ಡಿ. ಆರ್. ದ್ರುವಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಮಾಜಿ ಶಾಸಕರಾದ ಅಪ್ಕಾರನಹಳ್ಳಿ ವೆಂಕಟರಮಣಯ್ಯ,ಬಿ. ಡಿ. ಸಿ. ಸಿ. ಬ್ಯಾಂಕ್ ನಿರ್ದೇಶಕರಾದ ಚುಂಚಗೌಡರು,ನಗರಸಭಾ ಸದಸ್ಯರಾದ ಶಿವಶಂಕರ್ ಚಂದ್ರ ಮೋಹನ್, ನಾಗರಾಜು, ಕಾಂಗ್ರೆಸ್ ಮುಖಂಡರಾದ ಭೀಮಣ್ಣ, ಮಂಜುನಾಥ್ ಮುಂತಾದವರು ಅಭಿನಂದಿಸಿದ್ದಾರೆ.