ತೂಬಗೆರೆ ಶಾಲೆಗೆ ಮುಶಾಶಿ ಕಂಪನಿಯಿಂದ ಕಂಪ್ಯೂಟರ್ ಟಿ. ವಿ. ಪೀಠೋಪಕರಣ ವಿತರಣೆ
ದೊಡ್ಡಬಳ್ಳಾಪುರ:ತೂಬಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಮುಸಾಶಿ ಕಂಪನಿಯ ಸಿಎಸ್ಆರ್ ನಿಧಿಯಿಂದ ಕಂಪ್ಯೂಟರ್ ಟಿವಿ ಪೀಠೋಪಕರಣ ಪ್ರೊಜೆಕ್ಟರ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ಲಾನ್ ಡೈರೆಕ್ಟರ್ ಸುಧಾಕರ್ ರವರು ನೀವು ಸ್ವಾಗತ ಕೋರಿದ ಬಗೆ ನನಗೆ ಇಷ್ಟವಾಯಿತು. ಈ ಸಣ್ಣ ಪ್ರಮಾಣದ ಸೇವೆ ಮಾಡಲು ಅನುವು ಮಾಡಿಕೊಟ್ಟ ಶಾಲಾ ಸಿಬ್ಬಂದಿ ವರ್ಗಕ್ಕೆ ಶಿಕ್ಷಣ ಇಲಾಖೆಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ನೀವು ಚೆನ್ನಾಗಿ ಓದಿ ಇದೇ ತರ ಕಂಪನಿಗಳಲ್ಲಿ ಉನ್ನತ ಹುದ್ದೆ ಅಲಂಕರಿಸಬೇಕೆಂದು ಆಶಿಸುತ್ತೇನೆ. ನಾನು ಶಾಲಾ ಸಿಬ್ಬಂದಿ ವರ್ಗಕ್ಕೆ ಕೋರಿಕೊಳ್ಳುವುದೇನೆಂದರೆ ಎಲ್ಲ ಉಪಕರಣಗಳ ಸದುಪಯೋಗ ಮಕ್ಕಳು ಪಡೆಯಲು ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪನವರು ನಾನು ಕೂಡ ಈ ಶಾಲೆಯಲ್ಲೇ ಓದಿದ್ದೇನೆ ನಾನು ಕೂಡ ಐಬಿಎಮ್ ಕಂಪನಿಯಲ್ಲಿ 23 ವರ್ಷ ಕೆಲಸ ಮಾಡಿದ್ದೇನೆ ನೀವು ಕೂಡ ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ನಾನು ಮುಸಾಸೆ ಕಂಪನಿಗೆ ಧನ್ಯವಾದವನ್ನು ತಿಳಿಸುತ್ತಿದ್ದೇನೆ. ಸಹಾಯವನ್ನು ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಮುಸಸಿ ಕಂಪನಿಯ ಡೈರೆಕ್ಟರ್ ನಬುಹೀರೋ ಸೀನಿಯರ್ ಸೀನಿಯರ್ ಮ್ಯಾನೇಜರ್ ಸುದರ್ಶನ್ ಶೆಟ್ಟಿ ಸೀನಿಯರ್ ಇಂಜಿನಿಯರ್ ರಾಘವೇಂದ್ರ ಕಂಪನಿಯ ಅಧಿಕಾರಿಗಳು,ಶಿಕ್ಷಣ ಇಲಾಖೆಯ ಅಧಿಕಾರಿಗಳು,ಶಾಲಾ ಸಿಬ್ಬಂದಿ ವರ್ಗ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.