ಅರವಿಂದ ಶಾಲೆಯಲ್ಲಿ ವಿದ್ಯಾ ಸಂಕಲ್ಪ ಕಾರ್ಯಕ್ರಮ

ದೊಡ್ಡಬಳ್ಳಾಪುರ:ರೋಟರಾಕ್ಟ್ ಬೆಂಗಳೂರು,
ಬಸವೇಶ್ವರನಗರ(ರೋಟರಾಕ್ಟ್ ಡಿಸ್ಟ್ರಿಕ್ಟ್ 3192) ಹಾಗೂ ಸುಚೇತನಾ ಎಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್(ರಿ) ರವರುಗಳು ಜಂಟಿಯಾಗಿ ಆಯೋಜಿಸಿದ್ದ “ವಿದ್ಯಾ ಸಂಕಲ್ಪ” ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಅರವಿಂದ ಪ್ರಾರ್ಥಮಿಕ ಪಾಠ ಶಾಲಿಯ 30 ಮಕ್ಕಳಿಗೆ ವಾರ್ಷಿಕ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವಿದ್ಯಾ ಸಂಲಕ್ಪ ಯೋಜನೆಯು ಕಳೆದ 4 ವರ್ಷದಿಂದ ಪ್ರಾರಂಭವಾಗಿದ್ದು ಮುಂಬರುವ ವರ್ಷಗಳಲ್ಲಿಯೂ ಮುಂದುವರೆಸಿಕೊಂಡು ಹೋಗಲಾಗುವುದು. ಜೊತೆಗೆ ಕನ್ನಡ ಮಾಧ್ಯಮಕ್ಕೆ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆಯನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಶ್ರೀ ಅರವಿಂದ ವಿದ್ಯಾ ಸಂಸ್ಥೆಯ ಖಜಾಂಚಿ ವೆಂಕಪ್ಪರವರು, , ಶಾಲಾ ಪ್ರಾಂಶುಪಾಲರು ಶ್ರೀಮತಿ ಸರ್ವಮಂಗಳ, ಹಿರಿಯ ಶಿಕ್ಷಕ ವಸಂತ್ ರಾಜ್, ಸುರೇಶ್, ರೋಟರಾಕ್ಟ್ ಹಾಗೂ ಸುಚೇತನ ತಂಡದ ಮಂಜುನಾಥ್ ನಾಗ್,ಚೇತನ್, ದೀಪಿಕಾ,ಅಭಿಷೇಕ್ , ನಮಿತಾ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಬಹಳ ಶ್ಲಾಘನೀಯವಾಗಿ ನೆರವೇಸಿದರು