ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು
ದೊಡ್ಡಬಳ್ಳಾಪುರ: ದಿನಾಂಕ:-21-09-2024 ರಂದು ಬೆಳಗ್ಗೆ ದೊಡ್ಡಬಳ್ಳಾಪುರ ಮತ್ತು ವಡ್ಡರಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ಅಪರಿಚಿತ ಗಂಡಸು ಸುಮಾರು 70 ರಿಂದ 75 ವರ್ಷದವನು ರೈಲಿಗೆ ಸಿಕ್ಕಿ ಮೃತಪಟ್ಟಿದ್ದು ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 190/2024 ಕಲಂ 194 BNSS ರೀತ್ಯಾ ಪ್ರಕರಣ ಧಾಖಲು ಮಾಡಿಕೊಂಡಿದ್ದು ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.
*ಚಹರೆ* – 5.5ಅಡಿ ಎತ್ತರ, ಕಪ್ಪು ಬಿಲಿ ಮಿಶ್ರಿತ ಬಣ್ಣ ತಲೆಯಲ್ಲಿ ಸುಮಾರು 1.5 ಇಂಚು ಉದ್ದದ ಬಿಳಿ ಕೂದಲು,ದುಂಡು ಮುಖ ಇದ್ದು ಸಾಧಾರಣವಾದ ಮೈಕಟ್ಟು,ಹೊಂದಿರುತ್ತಾರೆ.ಬಿಳಿ ಗಡ್ಡಾ ಮೀಸೆ ಹೊಂದಿರುತ್ತಾನೆ
*ಬಟ್ಟೆಗಳು* – ಬಿಳಿ ಬಣ್ಣದ ಚೌಕಲಿ ಶರ್ಟ್ , ಕಪ್ಪುಬಣ್ಣದ Pantಸೊಂಟದಲ್ಲಿ ಕಪ್ಪು ನೈಲಾನ್ ಉಡದಾರ ಕಪ್ಪು ಸ್ವೆಟ್ಟರ್ ಕಡು ಹಸಿರು ಒಳಚಡ್ಡಿ ಮತ್ತು ಕಂದು ಮತ್ತು ಕ್ರೀಂ ಮಿಶ್ರಿತ ಮಂಕಿ ಕ್ಯಾಪ್ ತಿಳಿ ಕಂದು ಬಣ್ಣದ ಕೆಂಪನಯ ಬಾರ್ಡರ್ ಇರುವ ಶಾಲು ಕಪ್ಪು ಬಣ್ಣದ ಬೆಲ್ಟ್ ಚಪ್ಪಲಿ ಇದ್ದು ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, ಸಂಪರ್ಕಿಸಲು ಕೋರಿದೆ.
Post Views: 159