ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕಲೆಗಳಿಗೆ ಪ್ರೋತ್ಸಾಹಿಸಬೇಕು : ವೆಂಕಟರಮಣಸ್ವಾಮಿ
ಚಾಮರಾಜನಗರ:ಸೆ.21, ವಿದ್ಯಾರ್ಥಿಗಳಿಗೆ ಆಸಕ್ತಿ ಇರುವ ಕಲೆಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ದಲಿತ ಮುಖಂಡ, ಕಲಾವೇದಿಕೆಯ ಕಲಾ ಪೋಷಕರಾದ ವೆಂಕಟರಮಣಸ್ವಾಮಿ(ಪಾಪು) ತಿಳಿಸಿದರು.
ನಗರದ ಪಚ್ಚಪ್ಪ ಸರ್ಕಲ್ ಹತ್ತಿರವಿರುವ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ರಾಷ್ಟ್ರೀಯ ಚಲನಚಿತ್ರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ನಾನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮೈಸೂರಿನ ಡಿ.ಆರ್.ಸಿ ಚಿತ್ರಮಂದಿರದಲ್ಲಿ ‘ಅನ್ನ’ ಚಿತ್ರವನ್ನು ನೋಡಿದೆ.ಆ ಚಿತ್ರದಲ್ಲಿ ಅನ್ನದ ಮಹತ್ವ ಬಗ್ಗೆ ಅದ್ಭುತವಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಶಾಲೆಯ ನಂದನ್ ಕುಮಾರ್ ಹಾಗೂ ಕೃಷಿಕ ಮತ್ತು ರಮೇಶ್ ತುಂಬಾ ಅದ್ಭುತವಾದ ನಟನೆ ಮಾಡಿ ನಮ್ಮ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.ಅದೇ ರೀತಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲಿ ಎಂದು ಆಶೀರ್ವದಿಸಿದರು.
ಇದೇ ವೇಳೆ ‘ಅನ್ನ’ ಚಿತ್ರದಲ್ಲಿ ನಟಿಸಿರುವ ನಂದನ್ ಕುಮಾರ್ ಹಾಗೂ ಕೃಷಿಕ ಹಾಗೂ ರಮೇಶ್ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಲಾವೇದಿಕೆಯ ಜಿಲ್ಲಾ ಅಧ್ಯಕ್ಷ ಎಚ್ ಎಂ.ಶಿವಣ್ಣ ಮಂಗಲ ಹೊಸೂರು, ಪ್ರಧಾನ ಕಾರ್ಯದರ್ಶಿ ಚಂದಕವಾಡಿ ಡಿ.ರಾಜಣ್ಣ, ಹೋರಾಟಗಾರ ನಮ್ಮನೆ ಪ್ರಶಾಂತ್ , ಗಡಿನಾಡು ಹೋರಾಟಗಾರ ಪಣ್ಯದುಂಡಿ ರಾಜು, ರೆಡ್ ಕ್ರಾಸ್ ನ ಎಲ್ ಸುರೇಶ್, ಕಲಾವಿದ ಯಳಂದೂರು ನಾಗೇಂದ್ರ, ಕೊಂಬುಕಹಳೆ ರವಿಪ್ರಸಾದ್, ಸಂಘದ ಜಂಟಿ ಕಾರ್ಯದರ್ಶಿ ಜೋಸೆಫ್ ಎನ್, ಸದಸ್ಯರಾದ ಬಂಗಾರು, ವಸಂತ, ಶಿಕ್ಷಕರಾದ ರೀಟಾ ಜೈನ್, ಜೂಲಿಯಾನ, ಮರಿಯಾ ಜೊಸ್, ಆರೋಗ್ಯ ಮೇರಿ, ಎಸ್ ಡಿ ಎಂ ಸಿ ಸದಸ್ಯರಾದ ಅತ್ತೀಕ್ ಖಾನ್, ಪ್ರದೀಪ್ ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ