ಸರ್ವ ಸದಸ್ಯರ ವಾರ್ಷಿಕ ಸಭೆ
ಯಳಂದೂರು: ತಾಲ್ಲೂಕಿನ ಮದ್ದೂರು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2023- 24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯಿತು
ಈ ಸಭೆಯಲ್ಲಿ ಸಂಘದ ವ್ಯವಹಾರದ ಲೆಕ್ಕಚಾರ ಮಂಡಿಸಿದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಾದ ಎಂ ರಂಗಸ್ವಾಮಿ ನಮ್ಮ
ಸಂಘದಿಂದ ರೈತರು ಬೆಳೆ ಬೆಳೆಯಲು ಕೃಷಿ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದೆ ಎಂದರು. ಈ ಸಂಘವು ದಿನಾಂಕ 31/03/2024ಕ್ಕೆ ಪೂರ್ಣ ಷೇರುದಾರರು 1018ರಷ್ಟ ಜನರಿದ್ದು ಷೇರು ಬಂಡವಾಳ 1973600/ರೂಗಳನ್ನು ಹೊಂದಿರುತ್ತದೆ
ಈ ಸಂಘವು 127 ಜನ ಸದಸ್ಯರಿಗೆ 13439000/ರೂಗಳನ್ನು ಕೆ ಸಿ ಸಿ ಕಬ್ಬು ಬೆಳೆ ಸಾಲವಾಗಿ 0/ಬಡ್ಡಿ ದರದಲ್ಲಿ ನೀಡಲಾಗಿದೆ
ಪರಿಶಿಷ್ಟ ಜಾತಿಯ 36 ಸದಸ್ಯರುಗಳಿಗೆ 1312000/ರೂಗಳನ್ನು ಹಾಗೂ ಪರಿಶಿಷ್ಟ ಪಂಗಡದ 3 ಸದಸ್ಯರಿಗೆ 270000/ಲಕ್ಷ ರೂಪಾಯಿಗಳನ್ನು ಹಾಗೂ ಇತರೆ ವರ್ಗದ 88 ಸದಸ್ಯರುಗಳಿಗೆ 11857000/ಲಕ್ಷ ರೂಪಾಯಿಗಳ ಸಾಲ ಹಂಚಿಕೆ ಮಾಡಲಾಗಿದೆ ಈ ಸಂಘವು 2023/24ನೇ ಸಾಲಿನ ಅಡಿಟ್ ವರದಿಯ ಪ್ರಕಾರ ಸಂಘಕ್ಕೆ ನಿವ್ವಳ ಲಾಭ 193353/ರೂಗಳು ಬಂದಿರುತ್ತದೆ ಎಂದು ತಿಳಿಸಿದರು
ವಿಶೇಷವೇನೆಂದರೆ ನಮ್ಮ ಸಂಘಕ್ಕೆ 2023/24ನೇ ಸಾಲಿಗೆ ಉತ್ತಮ ಸಂಘವಾಗಿ ಕಾರ್ಯನಿರ್ವಹಣಾ ಮಾಡುತ್ತಿದೆ ಎಂದು ಎಂ.ಡಿ.ಸಿ.ಸಿ ಬ್ಯಾಂಕ್ ನಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು ಎಂದು ತಿಳಿಸಿದರು
ನಂತರ ಸಂಘದ ಅಧ್ಯಕ್ಷರಾದ ಎಸ್ ಬಾಲರಾಜ್ ರವರು ಮಾತನಾಡಿ ನಮ್ಮ ಸಂಘದಲ್ಲಿ ಕೃಷಿಮಾಡುವ ಸದಸ್ಯ ರೈತರ ಅಭಿವೃದ್ದಿಗಾಗಿ ಸಂಘವು ಹಲವು ರೀತಿಯಲ್ಲಿ ಸಹಕಾರ ನೀಡುತ್ತ ಬಂದಿದ್ದು ರೈತರಿಗಾಗಿ ಹಲವು ಬಗೆಯ ಸಾಲ ಸೌಲಭ್ಯವನ್ನು ಸಂಘದಿಂದ ನೀಡಲಾಗಿದೆ ಎಂದರು.
ಸಂಘದಿಂದ ಮಧ್ಯಮಾವದಿ ಸಾಲ, ಪಿಗ್ಮಿ ಸಾಲ, ಸ್ವಸಹಾಯ ಸಂಘಗಳ ಸಾಲ, ಬೆಳೆಸಾಲ, ಮುಂತಾದ ಚಟುವಟಿಕೆಗಳ ಮೂಲಕ ಸಂಘವು ವ್ಯವಹರಿಸುತ್ತ ಬಂದಿದ್ದು ಬಡಜನರ ಹಾಗೂ ಅರ್ಥಿಕವಾಗಿ ದುರ್ಬಲರಾಗಿರುವ ಜನರ ಅರ್ಥಕತೆಯನ್ನು ಉತ್ತಮ ಪಡಿಸಲು ಸಹಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು
ಸಂಘದ ಸದಸ್ಯರುಗಳಿಗೆ ಸಾಲಸೌಲಭ್ಯ ನೀಡಿ ರೈತರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಲವನ್ನು ನೀಡಲಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸಂಘದ
ಉಪಾದ್ಯಕ್ಷರಾದ ಪುಟ್ಟಮಾದಪ್ಪ. ಸಂಘದ ಸದಸ್ಯರಾದ ಶ್ರೀ ಕಂಠ ರ್ಮೂತಿ.ಅಶೋಕ್.ಎಂ ಶಿವಮೂರ್ತಿ.ನಂಜುಂಡಸ್ವಾಮಿ.ಶ್ರೀನಿವಾಸ್ ಮೂರ್ತಿ.ಎಸ್ ನಾಗರಾಜ್.ಕುಮಾರ್.ಲಕ್ಷ್ಮಮ್ಮ.ಅರುಂಧತಿ.ಎಂ ಪ್ರೇಮ ರವರುಗಳು ಹಾಗೂ ಸಂಘದ ಮಾರಾಟ ಗುಮಾಸ್ತ ಎಸ್ ಮಾದೇಶ್.ಹಾಗೂ ಸಂಘದ ಸರ್ವ ಸದಸ್ಯರು ಈ ಸಭೆಯಲ್ಲಿ ಹಾಜರಿದ್ದರು
ವರದಿ ಆರ್ ಉಮೇಶ್ ಮಲಾರಪಾಳ್ಯ