ಮಳೆ ಅರ್ಭಟ, ರಾಜಘಟ್ಟ ಗ್ರಾಮದಲ್ಲಿನ ಮನೆಗಳಿಗೆ ನುಗ್ಗಿದ ಮಳೆ ನೀರು
ದೊಡ್ಡಬಳ್ಳಾಪುರ : ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ, ರಾಜಘಟ್ಟ ಗ್ರಾಮದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ, ಇಡೀ ರಾತ್ರಿ ಜಾಗರಣೆ ಇದ್ದ ಕುಟುಂಬಗಳು ಮನೆಯಿಂದ ಮಳೆನೀರು ಹೊರ ಹಾಕಲು ಹರಸಾಹಸ ಪಟ್ಟರು.
ಮಳೆಯ ಅರ್ಭಟದಿಂದ ರಾಜಘಟ್ಟ ಗ್ರಾಮದಲ್ಲಿನ 1ನೇ ವಾರ್ಡ್ ನಲ್ಲಿರುವ 10ಕ್ಕೂ ಹೆಚ್ಚು ಮನೆಗಳಿಗೆ ಮಳೆನೀರು ನುಗ್ಗಿದೆ, ಗಿರೀಶ್, ಲಕ್ಷ್ಮಮ್ಮ, ಮಂಜುನಾಥ್ ಭಯ್ಯರವರ ಮನೆಗಳಿಗೆ ಮಳೆನೀರು ನುಗ್ಗಿದೆ, ಕುಟುಂಬಗಳ ನೇರವಿಗೆ ಧಾವಿಸಿದ ಗ್ರಾಮಾಭಿವೃದ್ಧಿ ಯುವಕರ ಸಂಘದ ಸದಸ್ಯರಾದ ಅನಂತ್. ಮಾರುತಿ.. ಆಕಾಶ್.. ಗಣೇಶ್, ರಾಕೇಶ್, ಸಂದೀಪ್ ರವರು ಮಳೆನೀರು ಹೊರ ಹಾಕಲು ಶ್ರಮಿಸಿದರು.
ರಾಜಘಟ್ಟ ಗ್ರಾಮ ಎತ್ತರ ಪ್ರದೇಶದಲ್ಲಿದ್ದು, ಕೆರೆ ತಗ್ಗಿನ ಪ್ರದೇಶದಲ್ಲಿದೆ, ಎಷ್ಟೇ ಮಳೆ ಬಂದರು ಸಹಜವಾಗಿ ನೀರು ಕೆರೆಗೆ ಹರಿದು ಹೋಗುತ್ತಿತ್ತು, ಅದರೆ ಗ್ರಾಮದಲ್ಲಿನ ಚರಂಡಿಗಳ ಕಾಮಾಗಾರಿ ಕಳಪೆಯಾಗಿದ್ದು, ನೀರು ಸರಗವಾಗಿ ಹರಿದು ಹೋಗದೆ ಮನೆಗಳಿಗೆ ನುಗ್ಗುತ್ತಿದೆ. ಕಳಪೆ ಕಾಮಾಗಾರಿ ಮತ್ತು ಅವೈಜ್ಞಾನಿಕ ಕಾಮಾಗಾರಿಯಿಂದ ಅಮಾಯಕ ಗ್ರಾಮಸ್ಥರು ಕಷ್ಟಪಡುತ್ತಿದ್ದಾರೆಂದು ಗ್ರಾಮಸ್ಥರಾದ ಗಣೇಶ್ ರಾಜಘಟ್ಟ ಗ್ರಾಮ ಪಂಚಾಯಿತಿ ವಿರುದ್ಧ ತಮ್ಮ ಬೇಸರವನ್ನ ವ್ಯಕ್ತಪಡಿಸಿದರು.