ಸೆಪ್ಟೆಂಬರ್ 24ರಂದು 5ನೇ ಮಾಹಿತಿ ಹಕ್ಕು ದಿನಾಚರಣೆ ಆಚರಣೆ

ಕುಣಿಗಲ್‌: ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಐದನೇ ವರ್ಷದ ಮಾಹಿತಿ ಹಕ್ಕು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ

ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹೆಚ್ ಜಿ ರಮೇಶ್‌ ತಿಳಿಸಿದ್ದಾರೆ ಮಾದ್ಯಮಗಳೊಂದಿಗೆ ಅವರು ಮಾತನಾಡುತ್ತಾ ಪಾರದರ್ಶಕ ಆಡಳಿತ ನೀಡಲು ಅಂದಿನ

ಕಾಂಗ್ರೆಸ್‌ ನೇತೃತ್ವದ ಸರ್ಕಾರ ನೇರವಾಗಿ ಸಾರ್ವಜನಿಕರು ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಮಾಹಿತಿ ಪಡೆದು ಅದನ್ನು ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡುವುದು ಅಲ್ಲಿಯೂ ನ್ಯಾಯ ಸಿಗದಿದ್ದರೆ ಮೇಲ್ಮನವಿ ಸಲ್ಲಿಸಬಹುದು ಆ ನಿಟ್ಟಿನಲ್ಲಿ ಸರ್ಕಾರ ಮಾಹಿತಿ ಹಕ್ಕು (ಆರ್‌ಟಿಐ) ಜಾರಿಗೊಳಿಸಿತ್ತು. ಈ ಬಗ್ಗೆ ಅದೆಷ್ಟೋ ಜನರಿಗೆ ಸನರ್ಪಕ ಮಾಹಿತಿಯ ಕೊರತೆ ಉಂಟಾಗಿದ್ದರಿಂದ ಸಾರ್ವಜನಿಕರ ಸಮಸ್ಯೆ,ಮತ್ತು ಈ ಕಾಯ್ದೆಯ ನಿಯಮಗಳನ್ನು,ಸಮರ್ಪಕವಾಗಿ ತಿಳಿದುಕೊಂಡಂತಹ ಶಾಮಾಜಿಕ ಹೋರಾಟಗಾರರು,ಆಗಿದ್ದ ರಮೇಶ್ ರಾಜ್ಯದ್ಯಂತ ಸಂಘಟನೆಯನ್ನು ಕಟ್ಟಿ ಆ ಮೂಲಕ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುತ್ತಾ ಬಂದಿದ್ದು ಇದೀಗ ಈ ಸಂಘಟನೆಗೆ ಐದನೇ ವರ್ಷದ ದಿನಾಚರಣೆಯನ್ನು ಮಾಡಲು ಮುಂದಾಗಿರುವುದು ಶ್ಲಾಘನೀಯ ಇದೇ ತಿಂಗಳು 24 ರ ಗುರುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ ನಯನ ಸಭಾಂಗಣದಲ್ಲಿ ಬೆಳಿಗ್ಗೆ 10:30ಕ್ಕೆ ಹಮ್ಮಿಕೊಂಡಿದದ್ದು ವೇದಿಕೆಯ ದಿವ್ಯಸಾನಿಧ್ಯವನ್ನು ಕುಣಿಗಲ್ ತಾಲ್ಲೂಕಿನ ಬೆಟ್ಟಹಳ್ಳಿ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ,ಮೈಸೂರಿನ ಉರಿಲಿಂಗ ಮಠದ ಪೀಠಾಧ್ಯಕ್ಷರಾದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಮತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹಾಗು ಮಾಜಿ ಲೋಕಾಯುಕ್ತರಾದ ಎನ್.ಸಂತೋಷ್ ಹೆಗ್ಡೆ ರವರು,ಮುಖ್ಯ ಅಥಿತಿಗಳಾಗಿ ಐ.ಪಿ.ಎಸ್ ಅಧಿಕಾರಿ ಶ್ರೀಮತಿ ರೂಪ ಮೌದ್ಗಿಲ್ ರವರು,ಬೆಂಗಳೂರು ಮಾಹಿತಿ ಹಕ್ಕು ಕೇಂದ್ರದ ವೀರೇಶ್ ಬೆಳ್ಳೂರ್,ರಾಜ್ಯ ಮಾಹಿತಿ ಹಕ್ಕು ಮತ್ತು ಸಾನಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯಾದ್ಯಕ್ಷ ಚೆನ್ನಯ್ಯ ಎಂ.ವಸ್ತ್ರದ್ ಅವರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರುಗಳು ಪಧಾದಿಕಾರಿಗಳು ಬಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ