ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಅವಿರೋಧ ಆಯ್ಕೆ: ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆ.

ಯಳಂದೂರು. ರಾಜ್ಯ ಸರ್ಕಾರಿ ನೌಕರ ಸಂಘದ 2024-29 ರ ಅವಧಿಯ ನಿರ್ದೇಶಕರ ಚುನಾವಣೆಯಲ್ಲಿ ವಿವಿಧ ಇಲಾಖೆಯ 19 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಖಜಾನೆ ಇಲಾಖೆಯ ನವೀನ್ ಕುಮಾರ್, ತೋಟಗಾರಿಕೆ ಸುರೇಶ್, ಧರ್ಮೇಂದ್ರ ಪಿಡಬ್ಲ್ಯೂಡಿ ಇಲಾಖೆ,ವೇಲು ಟಿ ಪಿ, ಮಹೇಶ್ ಬಿ ಓ ಕಚೇರಿ, ನದೀಮ್ ಷರೀಫ್ ಕಾನೂನು ಇಲಾಖೆ, ಮಹೇಶ್ ಕುಮಾರ್ ಪದವಿಪೂರ್ವ ಕಾಲೇಜು, ಕೀರ್ತಿ ಪ್ರಸಾದ್ ಭೂಮಾಪನ, ವೆಂಕಟರಂಗಶೆಟ್ಟಿ ಕೃಷಿ ಇಲಾಖೆ, ಬಸವರಾಜ್ ಪಶು ಇಲಾಖೆ, ಭಾರತಿ ಎಚ್.ಆರ್. ಆರೋಗ್ಯ ಇಲಾಖೆ, ಮಾನಸ ಬಿಸಿಎಂ, ಜಗದೀಶ್ ಆರೋಗ್ಯ ಇಲಾಖೆ, ಸಂಪಿಗಯ್ಯ ಆರೋಗ್ಯ ಇಲಾಖೆ, ಶಶಿಕಲಾ ಆರೋಗ್ಯ ಇಲಾಖೆ, ರಾಜೇಂದ್ರ ಪ್ರಭು ಸಮಾಜ ಕಲ್ಯಾಣ ಇಲಾಖೆ, ಪ್ರದೀಪ್ ಕುಮಾರ್ ರೇಷ್ಮೆ ಇಲಾಖೆ, ಸರಸ್ವತಿ ಸಿಡಿಪಿಓ ಇಲಾಖೆ, ಹಾಗೂ ಆರೋಕ್ಯ ರಾಜ್ .ಆರ್ ಡಿ ಪಿ ಆರ್ ಇಲಾಖೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಸಿಲ್ದಾರ್ ಜಯಪ್ರಕಾಶ್ ರವರು ತಿಳಿಸಿದ್ದಾರೆ.

ಈ ವೇಳೆ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೈ. ಎಂ.ಮಂಜುನಾಥ್ ಮಾತನಾಡಿ ನೌಕರ ಸಂಘದಿಂದ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸುಮಾರು 250 ಮಕ್ಕಳಿಗೆ ಪ್ರಶಸ್ತಿ ಪುರಸ್ಕಾರ ಮಾಡಿದ್ದೇವೆ, ಹಲವು ನೌಕರರ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಹಲವು ಹೋರಾಟ ಸಂಘಟನೆಗಳಲ್ಲಿ ತೊಡಗಿಕೊಂಡು ಯಶಸ್ವಿಯಾಗಿದ್ದೇವೆ, ಇದಕ್ಕೆಲ್ಲ ಮೂಲ ಕಾರಣ ನಮ್ಮ ಹೆಮ್ಮೆಯ ರಾಜ್ಯಾಧ್ಯಕ್ಷರದ ಷಡಕ್ಷರಿ ರವರು ಎಂದರು.

ಕಾರ್ಯದರ್ಶಿ ಅಮ್ಮನಪುರ ಮಹೇಶ್ ಮಾತನಾಡಿ ನಮ್ಮ ಅವಧಿಯಲ್ಲಿ ಎಲ್ಲಾ ನೌಕರರ ಸಹಕಾರದಿಂದ ನಮ್ಮ ಯಳಂದೂರು ಶಾಖೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದೆ ಎಂದು ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದೆ, ನಮ್ಮ ಸಂಘದಿಂದ ದಿನದರ್ಶಿಕೆ, ಐಡಿ ಕಾರ್ಡ್ ಬಿಡುಗಡೆ ಮಾಡಿದ್ದೇವೆ, ಕುಂದು ಕೊರತೆಗಳಲ್ಲಿ ಭಾಗಿಯಾಗಿದ್ದೇವೆ, ಕೆಲವು ನೌಕರರ ವರ್ಗಾವಣೆಯನ್ನು ತಡೆಗಟ್ಟಿದ್ದೇವೆ, ನಮ್ಮ ಶಾಖೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ, ನಮಗೆ ಹಿಂದೆ ಉತ್ತಮವಾದ ವ್ಯವಸ್ಥೆಗಳು ಇರಲಿಲ್ಲ ಸೂಕ್ತವಾದ ಬಿಲ್ಡಿಂಗ್ ವ್ಯವಸ್ಥೆ ಕೂಡ ಆಗಿದೆ, ನೀವು ಸಹಕಾರ ಕೊಟ್ಟ ಕಾರಣದಿಂದಾಗಿ ರ್ಯಾಲಿ,ಪ್ರತಿಭಟನೆ, ಹೋರಾಟಗಳನ್ನು ನಡೆಸಿದ್ದೇವೆ,ನೂತನವಾಗಿ ಆಯ್ಕೆಯಾಗಿರುವ ನಿರ್ದೇಶಕರು ತಮ್ಮ ಕಚೇರಿಯಲ್ಲಿ ಒಳ್ಳೆತರದಲ್ಲಿ ಇದ್ದೀರಾ ಎಂದು ತಿಳಿಯುತ್ತದೆ. ಅವಿರೋಧವಾಗಿ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರಿಗೂ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು

ವರದಿ ಆರ್ ಉಮೇಶ್ ಮಲಾರಪಾಳ್ಯ