ಸರ್ಕಾರಿ ನೌಕರರ ಸಂಘದ ಚುನಾವಣೆ : ಶಾಲೆಗಳಿಗೆ ತೆರಳಿ ಭರ್ಜರಿ ಪ್ರಚಾರ ನಡೆಸುತ್ತಿರುವ ಅಭ್ಯರ್ಥಿ ಆರ್ ಗೋವಿಂದರಾಜು

ಯಳಂದೂರು. ಯಳಂದೂರು ತಾಲೂಕಿನಲ್ಲಿ ಈ ಬಾರಿ ಸರ್ಕಾರಿ ನೌಕರರ ಸಂಘದ ಚುನಾವಣೆ ಸಾಕಷ್ಟು ರಂಗೇರುತ್ತಿದೆ ಸಾಮಾನ್ಯ ಚುನಾವಣೆಯನ್ನು ಮೀರಿಸುವ ಮಟ್ಟದಲ್ಲಿ ನಡೆಯುತ್ತಿದೆ,

ತಾಲೂಕು ಶಾಖೆಗಳ ನಿರ್ದೇಶಕರ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಅಂತ್ಯಗೊಂಡಿದ್ದು ಉಳಿದ ಅಭ್ಯರ್ಥಿಗಳಿಗೆ ಇದೆ ತಿಂಗಳು 28 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರವನ್ನು ನಡೆಸುತ್ತಿದ್ದಾರೆ.

ಹೆಚ್ಚಿನ ಸಂಖ್ಯೆಯ ಮತದಾರರನ್ನು ಹೊಂದಿರುವ ಶಿಕ್ಷಕರ ವಲಯದಲ್ಲಿ ಅಭ್ಯರ್ಥಿಗಳು ಶಿಕ್ಷಕರ ಮನೆಗಳಿಗೆ ಭೇಟಿ ನೀಡುವುದು ಹಾಗೂ ಶಾಲೆಗಳಿಗೆ ತೆರಳಿ ಮನವೊಲಿಸುವ ಪ್ರಯತ್ನದಲ್ಲಿ ಅಭ್ಯರ್ಥಿಗಳು ಚುರುಕಾಗಿ ದ್ದಾರೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯ ಅಭ್ಯರ್ಥಿ ಆರ್ ಗೋವಿಂದರಾಜು ರವರು ಇಂದು ಶಾಲೆಗಳಿಗೆ ತೆರಳಿ ಮತಯಾಚಿಸಿದರು. ಇದೇ ತಿಂಗಳು 28 ರಂದು ನಡೆಯುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಾನು ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೀನಿ, ಆದ್ದರಿಂದ ಗೌರವಾನ್ವಿತ ಶಿಕ್ಷಕರಾದ ತಾವು ತಮ್ಮ ಅಮೂಲ್ಯವಾದ ಮತವನ್ನು ನೀಡಿ ನಿಮ್ಮಗಳ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಬೇಕೆಂದು ಅಭ್ಯರ್ಥಿಯಾದ ಆರ್ ಗೋವಿಂದರಾಜು ರವರು ಮನವಿ ಮಾಡಿಕೊಂಡರು.
ವರದಿ ಆರ್ ಉಮೇಶ್ ಮಲಾರಪಾಳ್ಯ