*ರಾಜ್ಯಮಟ್ಟಕ್ಕೆ ಆಯ್ಕೆಯಾದ ಆದರ್ಶ ಶಾಲೆಯ ವಿದ್ಯಾರ್ಥಿಗಳು..*
ಯಳಂದೂರು. ತಾಲ್ಲೂಕಿನ ಮೆಲ್ಲಹಳ್ಳಿಯ ಆದರ್ಶ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯಳಂದೂರು ಇದೆ ತಾಲ್ಲೂಕಿನ ಟಿ. ಹೊಸೂರು ಗ್ರಾಮದ ವಕೀಲರಾದ ಎಮ್. ಸಂತೋಷ್ ಮತ್ತು ಶ್ರುತಿ ಯವರ ಮಗಳಾದ ಸಾಧನ ಎಸ್. ಗೌಡ ಮತ್ತು ದೇವರ ಹಳ್ಳಿ ಗ್ರಾಮದ ಸಿಂಚನ, ಹಾಗೂ ಮೋಕ್ಷ, ಪಾರ್ವತಿ, ಮೋನಿಷಾ, ತನ್ಮಯಿ, ಕೀರ್ತನ ಈ ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧ ಪಟ್ಟಂತೆ ಹವಮಾನ ವೈಪರಿತ್ಯದಿಂದ ಉಂಟಾಗುವ ದುಷ್ಪರಿಣಾಮದ ಬಗ್ಗೆ ನಾಟಕವನ್ನು ನಿರೂಪಿಸಿದ್ದು, ತಾಲ್ಲೂಕು ಮಟ್ಟ ಹಾಗೂ ಜಿಲ್ಲಾಮಟ್ಟ ಮತ್ತು ರಾಮನಗರದ ವಿಭಾಗಿಯ ಮಟ್ಟದಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮತ್ತು ಡ್ರಾಮಾ ಶಿಕ್ಷಕರಿಗೆ ಹಾಗೂ ಶಾಲೆಯ ಮುಖ್ಯ ಶಿಕ್ಷಕರಿಗೆ ಪೋಷಕರು ಹಾಗೂ ತಾಲ್ಲೂಕಿನ ಜನತೆ ಅಭಿನಂದನೆಗಳನ್ನು ತಿಳಿಸಿದರು. ಈ ವಿದ್ಯಾರ್ಥಿಗಳು ಈ ಮೂಲಕ ಸಾಧನೆಗೈದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು
ವರದಿ ಆರ್ ಉಮೇಶ್ ಮಲಾರಪಾಳ್ಯ