ಗೌಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ತಪಾಸಣೆ ಹಾಗೂ ಗ್ರಾಮ ಸಭೆ
ಯಳಂದೂರು:ತಾಲ್ಲೊಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ
2023-24ನೇ ಸಾಲಿನ ನರೇಗಾ ಹಾಗೂ 15 ನೇ ಹಣಕಾಸು ಯೋಜನೆಗಳ ಗ್ರಾಮ ಸಭೆ ನಡೆಯಿತು
ಗ್ರಾಮದ ಗ್ರಾ.ಪಂ ಕಚೇರಿ ಆವರಣದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಭಾಗ್ಯಮ್ಮ ರವರ ಅಧ್ಯಕ್ಷ ತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ನರೇಗಾ ಯೋಜನೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿ,
ವಿವಿಧ ಇಲಾಖೆಗಳಲ್ಲಿ ದೊರೆಯುವ ಸವಲತ್ತುಗಳ ಬಗ್ಗೆ
ಹಾಗೂ ರಾಜ್ಯ ಸರಕಾರದ ಕಟ್ಟುನಿಟ್ಟಿನ ಆದೇಶ ಇರುವುದರಿಂದ ನರೇಗಾ ಯೋಜನೆಯನ್ನು ಗ್ರಾಮ ಪಂಚಾಯಿತಿಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಚನೆ ಬಂದಿರುವುದರಿಂದ ಸಾರ್ವಜನಿಕರು ಸಹಕಾರ ನೀಡಬೇಕೆಂದು ತಿಳಿಸಿದರು.
ನಂತರ ಲೆಕ್ಕ ತಪಾಸಣೆ ತಾಲ್ಲೂಕು ಸಂಯೋಜಕರಾದ ಪ್ರಸನ್ನ ಮಾತನಾಡಿ 2023-24 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ವತಿಯಿಂದ 61 ಕಾಮಗಾರಿಗಳು ನಡೆದಿವೆ, ಅದರಲ್ಲಿ ಕೃಷಿ ಇಲಾಖೆ ವತಿಯಿಂದ 10 ಕಾಮಗಾರಿ, ತೋಟಗಾರಿಕೆ ಇಲಾಖೆ ವತಿಯಿಂದ 11 ಕಾಮಗಾರಿ, ಅರಣ್ಯ ಇಲಾಖೆ ವತಿಯಿಂದ 13 ಕಾಮಗಾರಿ ನಿರ್ವಹಣೆ ಮಾಡಲಾಗಿದ್ದು ಒಟ್ಟು 2..51 ಕೋಟಿ ರೂಗಳನ್ನು ಖರ್ಚು ಮಾಡಲಾಗಿದ್ದು ಈ ಕಾಮಗಾರಿಗಳಲ್ಲಿ ಲೋಪ ದೋಷಗಳಿದ್ದರೆ ದೂರು ನೀಡಬಹುದೆಂದು ತಿಳಿಸಿ ಸಾರ್ವಜನಿಕರಿಗೆ ವರದಿ ಮಂಡಿಸಿದರು.
ನಂತರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿರುವ ಗೌಡಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ ಚರಂಡಿ ಹೋಳು ತೆಗೆಸಬೇಕು, ವಿದ್ಯುತ್ ದೀಪ ಅಳವಡಿಸಿ, ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.
ಈ ಸಭೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಭಾಗ್ಯಮ್ಮ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ , ನರೇಗಾ ಲೆಕ್ಕ ತಪಾಸಣೆ ಅಧಿಕಾರಿ ಪ್ರಸನ್ನ,, ಗ್ರಾಮ ಪಂಚಾಯತಿಯ ಸದಸ್ಯರಾದ ಪುಷ್ಪವತಿ, ಪ್ರಭುಸ್ವಾಮಿ, ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಗ್ರಾಮದ ಮುಖಂಡರು
ಸಾರ್ವಜನಿಕರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ