ನೌಕರರು ತಮ್ಮ ಸೇವೆಯನ್ನು ಸಕಾಲದಲ್ಲಿ ಎಲ್ಲರಿಗೂ ತಲುಪಿಸಬೇಕು–ಉಪನಿರ್ದೆಶಕ ರಾಮಚಂದ್ರ ರಾಜೇಅರಸ್
ಚಾಮರಾಜನಗರ: ನೌಕರರು ತಮ್ಮ ಪ್ರಾಮಾಣಿಕ ಸೇವೆಯನ್ನು ಸಕಾಲದಲ್ಲಿ ತಲುಪಿಸಲು ಮುಂದಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ರಾಮಚಂದ್ರ ರಾಜೇಅರಸ್ ಅವರು ತಿಳಿಸಿದರು.
ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ನಲ್ಲಿ ಬೋಧಕೇತರ ಅಧಿಕಾರಿಗಳ ಸಿಬ್ಬಂದಿಗಳ ಶೈಕ್ಷಣಿಕ ಕಾರ್ಯಗಾರ ಹಾಗೂ ನೂತನ ವರ್ಷದ 2025 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಂದು ಶಿಕ್ಷಣ ಇಲಾಖೆಯಿಂದ ಈ ರೀತಿ ಕಾರ್ಯಕ್ರಮ ಮಾಡುತ್ತಿರುವುದು ಕುಟುಂಬದ ಕಾರ್ಯಕ್ರಮ ಎಂದು ಹೇಳಬಹುದು. ಬೇರೆಯವರು ಮಾತನಾಡಿಕೊಳ್ಳುವಂತೆ ನಮ್ಮ ಇಲಾಖೆ ಮಾದರಿಯಾಗಬೇಕು ಎಲ್ಲಾ ಇಲಾಖೆಗಳಲ್ಲೂ ಸಂಘಗಳು ರಚನೆಯಾಗಿವೆ ಸಂಘಗಳ ರಚನೆಯ ಉದ್ದೇಶವೇನೆಂದರೆ ಕರ್ತವ್ಯದಲ್ಲಿರುವಾಗ ಅಡಚಣೆಯಾದಾಗ ಸಂಘದ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಆದ್ದರಿಂದ ಎಲ್ಲರೂ ಸಂಘಟಿತರಾಗಿ ಉತ್ತಮ ಕೆಲಸ ನಿರ್ವಹಿಸಿ ನಮ್ಮ ಜಿಲ್ಲೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ರೇಣುಕಾದೇವಿ ಮಾತನಾಡಿ, ಶಿಕ್ಷಣ ಇಲಾಖೆಯ ಉತ್ತಮ ಕೆಲಸಗಳಲ್ಲಿ ನಿಮ್ಮ ಪಾತ್ರವೂ ಮುಖ್ಯವಾಗಿರುತ್ತದೆ ಇದಕ್ಕೆ ಕಾರಣ ಈ ಹಿಂದಿನ ಶ್ರಮ ವಾಗಿರುತ್ತದೆ ಅಲ್ಲದೆ ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರ ಜೊತೆಗೆ ನಿಮ್ಮ ಪಾತ್ರವೂ ಬಹು ಮುಖ್ಯವಾಗಿ ಇರುತ್ತದೆ ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಿ ಉತ್ತಮ ಕೆಲಸ ಮಾಡಿ ಶಿಕ್ಷಣ ಇಲಾಖೆಗೆ ಕೀರ್ತಿ ತರಬೇಕು ಎಂದು ತಿಳಿಸಿದರು.
ಇದೆ ವೇಳೆ ನಿವೃತ್ತ ನೌಕರರು ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಬೋಧಕೇತರ ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಯಟ್ ನ ಪ್ರಾಂಶುಪಾಲ ಕಾಶಿನಾಥ್.ಎಂ, ಹಿರಿಯ ಸಹಾಯಕ ನಿರ್ದೇಶಕ ಶಶಿಧರನ್.ಎಂ, ಉಪ ನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕರಾದ ಲಕ್ಷ್ಮಿಕಾಂತ ಎಂ.ಎಚ್, ಜಮುನಾ ರಾಣಿ.ಆರ್, ಶಾಲಾ ಶಿಕ್ಷಣ ಇಲಾಖೆಯ ಮಲ್ಲಿಕಾರ್ಜುನ, ನಾಗೇಂದ್ರ ಬಿ.ಎನ್, ಶಶಿಕುಮಾರ್ ಸಿ.ವಿ, ಚಂದ್ರಪ್ರಭ, ಗಿರೀಶ್ ಬಿ.ಪಿ, ಅನ್ನಪೂರ್ಣ ಎಪಿಸಿ, ಕುಮಾರಸ್ವಾಮಿ ಟಿ.ಎಸ್, ರಾಮನಾಥ ಎಚ್ .ಜಿ, ಮಹದೇವಸ್ವಾಮಿ, ಜಗದಾಂಬ.ಬಿ, ಸೌಭಾಗ್ಯಮ್ಮ ಪಿ.ಸಿ, ದೊರೆಸ್ವಾಮಿ, ಸವಿತಾ, ರವಿಕುಮಾರ್, ಭಾಸ್ಕರ್.ಎಸ್ ಎನ್ ರವಿಕುಮಾರ್ ವಿ.ಬಿ ಸೇರಿದಂತೆ ಇತರರು ಇದ್ದರು.
ವರದಿ ಆರ್ ಉಮೇಶ್ ಮಲಾರಪಾಳ್ಯ